ಎಚ್​.ಡಿ.ಕೋಟೆ:ಮೈಸೂರಿನ ಎಚ್.ಡಿ. ಕೋಟೆಯಲ್ಲಿ ಕಾಂಗ್ರೆಸ್​ ವತಿಯಿಂದ ಇಂದು ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಸಮಾಜ ಸೆಳೆಯುವ ಕಾರ್ಯವೂ ನಡೆಯಿತು. ಎಚ್​.ಡಿ.ಕೋಟೆಯಲ್ಲಿ ಕೆಂಪೇಗೌಡ ಭವನ ನಿರ್ಮಣಕ್ಕೆ 50 ಲಕ್ಷ ಹಣವನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಘೋಷಣೆ ಮಾಡಿದರು.
ಈ ಭವನ ನಿರ್ಮಾಣಕ್ಕೆ ನೀವು 10 ಲಕ್ಷ ಹಣ ಕೇಳಿದ್ರಿ. ಆದರೆ ಅದು ಇದುವರೆಗೂ ನಿಮಗೆ ಸಿಗಲಿಲ್ಲ. ಆದರೆ ಈಗ 50 ಲಕ್ಷ ರೂಪಾಯಿ ಘೋಷಿಸುತ್ತಿದ್ದೇನೆ. ನಾನು ಕೊಡ್ತಿನೋ ಬೇರೆಯವರ ಕೈಯಲ್ಲಿ ಕೊಡಿಸ್ತಿನೋ ಗೊತ್ತಿಲ್ಲ. ಒಟ್ಟಿನಲ್ಲಿ ಭವನಕ್ಕೆ‌ 50 ಲಕ್ಷ ರೂಪಾಯಿ ಹಣ ಬರುತ್ತೆ ಎಂದು ನುಡಿದರು.
ಎಲ್ಲರೂ ಒಗ್ಗಟ್ಟಾಗಿ, ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಮುಂದೆ ನಡೆಯಿರಿ. ನಾನು ಜಾರಿ ನಿರ್ದೇಶನಾಲಯದಿಂದ ತೊಂದರೆ ಅನುಭವಿಸಿದ ಸಂದರ್ಭದಲ್ಲಿ ನನ್ನ ಬೆಂಬಲಕ್ಕೆ ನಿಂತ ಎಚ್‌.ಡಿ.ಕೋಟೆ ಜನರಿಗೆ ಧನ್ಯವಾದ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನು ತಮ್ಮ ಸಹೋದರ ಎಂದು ನುಡಿದರು ಡಿಕೆಶಿ. ಬುದ್ಧ, ಬಸವ ಮನೆ‌ಬಿಟ್ಟ ಗಳಿಗೆಯಲ್ಲಿ ನಾನು ಮತ್ತು ಎಚ್​ಡಿಕೆ ರಾಜಕೀಯಕ್ಕೆ ಬಂದಿದ್ದೇವೆ. ಕುಮಾರಸ್ವಾಮಿ ನನ್ನ ಸಹೋದರ. ನನ್ನ ಆತ್ಮೀಯ ಸಹೋದರ ಆಗಿರುವ ಇವರು, ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ನೀವೆಲ್ಲರೂ ರಾಮನಾಗರದ ಜನರಿಗಿಂತಲೂ ಹೆಚ್ಚು ಅಭಿಮಾನ ತೋರಿ ಬರಮಾಡಿಕೊಂಡಿದ್ದೀರಿ. ಎಲ್ಲರಿಗೂ ಧನ್ಯವಾದ ಎಂದು ಶಿವಕುಮಾರ್​ ನುಡಿದರು.
ಬೆಂಗಳೂರಿನಲ್ಲಿ ಸಮರ್ಪಕವಾಗಿ ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಎಲ್ಲರೂ ವಿಫಲರಾಗಿದ್ದೇವೆ. ನಮ್ಮ ಸರಕಾರದ ಖಜಾನೆ ಸದಾ ತುಂಬಿ ತುಳುಕಲು ಬೆಂಗಳೂರು ಕಾರಣ. ಬೆಂಗಳೂರು ಅಭಿವೃದ್ಧಿ ಹೆಸರಿನಲ್ಲಿ ಲೂಟಿ ನಡೆಯುತ್ತಿದೆ. ಇನ್ನೊಂದು ಕಡೆ ರಾಜ್ಯದ ಅಭಿವೃದ್ಧಿ ಹೆಸರಲ್ಲೂ ದೊಡ್ಡ ಲೂಟಿ ನಡೆದಿದೆ. ಕೆಂಪೇಗೌಡರ ಹೆಸರು ಉಳಿಸ ಬೇಕಾದರೆ ಬೆಂಗಳೂರಿನಿಂದ ಬರುತ್ತಿರುವ ಆದಾಯವನ್ನು ಸರಿಯಾಗಿ ಬಳಸಬೇಕು ಎಂದು ಹೇಳಿದರು. ಭಾಷಣದಲ್ಲಿ ಬಸವಣ್ಣನ ವಚನ, ಡಿವಿಜಿ ಕಗ್ಗ ಪಠಣವನ್ನೂ ಮಾಡಿದರು.
ನೂಪುರ್​ ಶರ್ಮಾಗೆ ಸುಪ್ರೀಂನಿಂದ ಬಿಗ್​ ರಿಲೀಫ್​: ಯಾವುದೇ ಕ್ರಮ ಕೈಗೊಳ್ಳದಿರಲು ಕೋರ್ಟ್​ ಆದೇಶ

ಜಾತಿ ಕುರಿತು ವಿ.ವಿ ವಿದ್ಯಾರ್ಥಿಗಳಿಗೆ ಇದೆಂಥ ಪ್ರಶ್ನೆ? ಶುರುವಾಯ್ತು ಭಾರಿ ಪ್ರತಿಭಟನೆ- ತನಿಖೆಗೆ ತಂಡ ರಚನೆ


ಜಾತಿ ಕುರಿತು ವಿ.ವಿ ವಿದ್ಯಾರ್ಥಿಗಳಿಗೆ ಇದೆಂಥ ಪ್ರಶ್ನೆ? ಶುರುವಾಯ್ತು ಭಾರಿ ಪ್ರತಿಭಟನೆ- ತನಿಖೆಗೆ ತಂಡ ರಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 20 =
Remember me
