ಬೆಂಗಳೂರು:ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ದಾರ್ಥ್ ಹೆಗ್ಡೆ ಅವರ ಮಗ ಅಮರ್ತ್ಯ ಅವರ ವಿವಾಹವನ್ನು ಬರುವ ಫೆಬ್ರವರಿ ತಿಂಗಳಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ. ಅಮರ್ತ್ಯ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಮೊಮ್ಮಗ.
ಮದುವೆಯನ್ನು ಪ್ರೇಮಿಗಳ ದಿನವಾದ ಫೆಬ್ರುವರಿ 14ರಂದು ನಡೆಸಬೇಕೋ ಅಥವಾ ಶುಭ ಮುಹೂರ್ತ ಎಂದು ಜ್ಯೋತಿಷಿಗಳು ಹೇಳಿರುವ ಫೆಬ್ರುವರಿ 24ರಂದು ನಡೆಸಬೇಕೋ ಎನ್ನುವ ಗೊಂದಲದಲ್ಲಿ ಎರಡೂ ಕುಟುಂಬಸ್ಥರು ಇದ್ದಾರೆ ಎನ್ನಲಾಗಿದೆ.
ಏಕೆಂದರೆ ಫೆ.24 ರಂದು ಮದುವೆ ಮಾಡಲು ಎರಡು ಕುಟುಂಬಗಳು ತೀರ್ಮಾನಿಸಿದ್ದರೆ, ಪ್ರೇಮಿಗಳ ದಿನದಂದು ವಿವಾಹವಾಗುವ ಆಸೆ ಈ ಜೋಡಿಗಳಿಗೆ. ಆದ್ದರಿಂದ ಇನ್ನೂ ದಿನಾಂಕ ಅಂತಿಮಗೊಂಡಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ‘ಅಟಲ್’ ಇಂದು​ ಸಂಪೂರ್ಣ: ಏನಿದರ ವಿಶೇಷತೆ?
ಕಳೆದ ಜೂ.12ರಂದು ಇವರ ವಿವಾಹ ನಿಶ್ಚಯವಾಗಿದೆ. ಆದರೆ ಕರೊನಾದಿಂದಾಗಿ ಇವರ ಮದುವೆ ಕಾರ್ಯವನ್ನು ಮುಂದೂಡಲಾಗಿತ್ತು.
ಅಮರ್ತ್ಯ ಅವರು ಅಮೆರಿಕದಲ್ಲಿ ಶಿಕ್ಷಣ ಪಡೆದಿದ್ದಾರೆ. ಕೆಫೆ ಕಾಫಿ ಡೇ ಮಾಲೀಕರಾಗಿದ್ದ ಸಿದ್ದಾರ್ಥ ಹೆಗ್ಡೆ ಅವರ ನಿಧನದ ನಂತರ ಇವರು, ತಮ್ಮ ತಾಯಿ ಮಾಳವಿಕಾ ಅವರೊಂದಿಗೆ ಕಾಫಿ ಡೇ ವ್ಯವಹಾರ ನಿರ್ವಹಿಸುತ್ತಿದ್ದಾರೆ. ಇನ್ನು ಐಶ್ವರ್ಯಾ ಇಂಜಿನಿಯರಿಂಗ್‌ ಪದವೀಧರೆಯಾಗಿದ್ದು, ತಂದೆ ಶಿವಕುಮಾರ್​ ಸ್ಥಾಪಿಸಿರುವ ಗ್ಲೋಬಲ್‌ ಅಕಾಡೆಮಿ ಆಫ್‌ ಟೆಕ್ನಾಲಜಿ ಸಂಸ್ಥೆ ಮುನ್ನಡೆಸುತ್ತಿದ್ದಾರೆ.
ಶಿವಕುಮಾರ್​ ಅವರು ಕಾಂಗ್ರೆಸ್​ನಲ್ಲಿದ್ದರೆ ಕೃಷ್ಣ ಬಿಜೆಪಿಯಲ್ಲಿರುವ ಹಿನ್ನೆಲೆಯಲ್ಲಿ ಇದೊಂದು ಕಾಂಗ್ರೆಸ್​-ಬಿಜೆಪಿ ನೆಂಟಸ್ತಿಕೆಯಾಗಿದೆ.
ಗನ್​ ತೋರಿಸಿ ಬಹಳ ಸಲ ಗ್ಯಾಂಗ್​ರೇಪ್:​ ಬಿಜೆಪಿ ಮುಖಂಡನ ವಿರುದ್ಧ ವಿದ್ಯಾರ್ಥಿನಿಯಿಂದ ದೂರು!

ಬಲವಂತದ ಮದುವೆಯ ಧಿಕ್ಕರಿಸಿ ಮನೆಬಿಟ್ಟು ಬಂದಾಕೆ ಈಗ ಮಾದರಿ ಹೆಣ್ಣು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 3 =
Remember me
