ಬೆಂಗಳೂರು:ಚಿತ್ರನಟರಾದ ಅದಿತಿ ಪ್ರಭುದೇವ್‌ ಮತ್ತು ಆದಿತ್ಯ ಅವರು ನಟಿಸುತ್ತಿರುವ ‘5ಡಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್‌ ಇಂದು ಬಿಡುಗಡೆಯಾಗಿದೆ.
ಎಸ್. ‌ನಾರಾಯಣ್ ನಿರ್ದೇಶಿಸುತ್ತಿರುವ ಈ ಚಿತ್ರದ ಪೋಸ್ಟರ್‌ ಅನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅದನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಚಿತ್ರತಂಡಕ್ಕೆ ಶುಭಹಾರೈಸಿದ ಶಿವಕುಮಾರ್, ‘ನಾನು ಈ ರೀತಿಯ ಕಾರ್ಯಕ್ರಮಕ್ಕೆ ಹೋಗುವುದು ತೀರಾ ವಿರಳ. ಆದರೆ ನಾರಾಯಣ್ ಅವರು ನನಗೆ ತುಂಬಾ ಪರಿಚಯ, ಅವರ ಸಾಧನೆಗೆ ಶುಭಕೋರಬೇಕು ಎಂದು ನಾನು ಬಂದಿದ್ದೇನೆ’ ಎಂದರು.
ಇದೇ ಸಂದರ್ಭದಲ್ಲಿ ಚಿತ್ರರಂಗದ ಸಂಕಷ್ಟದ ಬಗ್ಗೆ ಮಾತನಾಡಿದ ಶಿವಕುಮಾರ್‌, ‘ಥಿಯೇಟರ್ ಮಾಲಿಕರು, ಕಲಾವಿದರು ಎಲ್ಲರೂ‌ ಸಂಕಷ್ಟದಲ್ಲಿದ್ದಾರೆ. ಆದರೆ ಇದುವರೆಗೆ ಚಿತ್ರಮಂದಿರಗಳಿಗೆ ಅನುಮತಿ ನೀಡಲಿಲ್ಲ. ಸರ್ಕಾರದಲ್ಲಿರೋ ಕೆಲ ವ್ಯಕ್ತಿಗಳು ಚಿತ್ರರಂಗದಲ್ಲಿದ್ದಾರೆ, ಆದರೆ ಅವರಿಗೆ ಇದರ ಬಿಸಿ ಮುಟ್ಟಿಲ್ಲ. ಕೊನೆಯ ಪಕ್ಷ ಶೇ.50ರಷ್ಟು ಆಸನಕ್ಕಾದರೂ ಅವಕಾಶ ಕೊಡಲು ಆಗಿಲ್ವಾ ಎಂದು ಅಸಮಾಧಾನ ಹೊರಹಾಕಿದರು.
ಇದೇ ವೇಳೆ ಮಾತನಾಡಿದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಡಿ.ಕೆ.ಶಿವಕುಮಾರ್ ಅವರು ಅದಷ್ಟು ಬೇಗ  ಮುಖ್ಯಮಂತ್ರಿ ಆಗುತ್ತಾರೆ ಎಂದರು. ಶಿವಕುಮಾರ್‌ ಅವರು ಶಾಸಕ ಅಗೋಕು ಮುಂಚೆನೇ ಅವರಿಗೆ ಚಿತ್ರರಂಗದ ನಂಟಿತ್ತು, ಈ ವಿಷಯವನ್ನು ಅವರೇ ಹೇಳಿದ್ದಾರೆ. ಚಿತ್ರರಂಗದ ನಂಟಿರುವ ಎಷ್ಟೋ ರಾಜಕಾರಣಿಗಳು ಮುಖ್ಯಮಂತ್ರಿ ಆಗಿದ್ದಾರೆ. ಅದೇ ರೀತಿ ಶಿವಕುಮಾರ್ ಅವರು ಕೂಡ ಮುಖ್ಯಮಂತ್ರಿ ಆಗುತ್ತಾರೆ ಎಂದು ನುಡಿದರು.
‘ಅಂತೂ 100 ರೂ. ದಾಟಿತು- ನಿಮ್ಮ ಕೇರ್‌ ತಗೊಳಿ’ ಎಂದು ಸೈಕಲ್‌ ಏರಿದ ಮಾದಕ ನಟಿ

ಸುಮಲತಾ v/s ಕುಮಾರಸ್ವಾಮಿ: ಮಾಜಿ ಸಿಂಎ ಹಾಕಿದರು ಫುಲ್‌ಸ್ಟಾಪ್‌: ಸಂಸದೆ ಮಾಡಿದರೊಂದು ಟ್ವೀಟ್‌


ಸುಮಲತಾ v/s ಕುಮಾರಸ್ವಾಮಿ: ಮಾಜಿ ಸಿಂಎ ಹಾಕಿದರು ಫುಲ್‌ಸ್ಟಾಪ್‌: ಸಂಸದೆ ಮಾಡಿದರೊಂದು ಟ್ವೀಟ್‌

Sign in to your account
Please enter an answer in digits:one × 5 =
Remember me
