ಕಡಬ (ದಕ್ಷಿಣ ಕನ್ನಡ):ಆಹಾರ ಹುಡುಕುತ್ತಾ ಬಂದ ಚಿರತೆಯೊಂದು ನಾಯಿ ಸಿಕ್ಕರೂ ಅದನ್ನು ತಿನ್ನಲಾಗದೇ ಮಿಕಿಮಿಕಿ ನೋಡುತ್ತಾ ಕುಳಿತ ಕುತೂಹಲದ ಘಟನೆಯೊಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೈಕಂಬ ಗ್ರಾಮದಲ್ಲಿ ನಡೆದಿದೆ.ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಈ ಗ್ರಾಮದಲ್ಲಿನ ಮನೆಯೊಂದರ ಶೌಚಗೃಹದಲ್ಲಿ ಅತ್ತ ನಾಯಿ, ಇತ್ತ ಚಿರತೆ ಒಟ್ಟಿಗೇ ಇರುವ ದೃಶ್ಯ ಕಂಡುಬಂದಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ ನಾಯಿಯನ್ನು ಹಿಡಿಯಲು ಚಿರತೆ ಬಂದಿದೆ. ಚಿರತೆ ಬಂದದನ್ನು ಕಂಡ ನಾಯಿ ಓಡೋಡಿ ಹೋಗಿದೆ. ಅದನ್ನು ಚಿರತೆ ಅಟ್ಟಿಸಿಕೊಂಡು ಬಂದಿದೆ. ನಾಯಿ ಶೌಚಗೃಹದೊಳಕ್ಕೆ ನುಗ್ಗಿದೆ. ಅದರ ಹಿಂದೆ ಬಂದ ಚಿರತೆಯೂ ಅಲ್ಲಿಯೇ ನುಗ್ಗಿದೆ.
ತನ್ನ ಕಥೆ ಇನ್ನೇನು ಮುಗಿಯಿತು ಎಂದು ನಾಯಿ ಅಂದುಕೊಂಡರೆ, ಶೌಚಗೃಹದಲ್ಲಿ ಬಂದು ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡೆ ಎಂಬ ಅರಿವು ಚಿರತೆಗೆ ಆಗಿದೆ. ಆದ್ದರಿಂದ ಎದುರಿಗೆ ಬೇಟೆ ಇದ್ದರೂ ಪ್ರಾಣ ಉಳಿಸಿಕೊಳ್ಳಲು ಭಯದಿಂದ ಅಲ್ಲಿಯೇ ಮಲಗಿಬಿಟ್ಟಿದೆ. ಚಿರತೆ ಒಳಕ್ಕೆ ನುಗ್ಗಿರುವುದನ್ನು ಕಂಡ ಗ್ರಾಮಸ್ಥರು ಹೊರಗಡೆಯಿಂದ ಬೀಗ ಹಾಕಿ ಹೋಗಿದ್ದಾರೆ.
ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಸಿಬ್ಬಂದಿ ಬಂದು ಬಾಗಿಲು ತೆರೆದಾಗ ಚಿರತೆ ನಾಯಿಗೆ ಏನೂ ಹಾನಿ ಮಾಡದೇ ಇರವುದು ಕಂಡುಬಂದಿದೆ. ಆದರೆ ಅತ್ತ ನಾಯಿ, ಇತ್ತ ಚಿರತೆ ಭಯದಿಂದ ಇರುವುದು ಕಂಡಿದೆ. ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.
ಮಂಡ್ಯದಲ್ಲೊಂದು ಅಚ್ಚರಿ: 5 ವರ್ಷ ಕಗ್ಗಂಟಾಗಿದ್ದ ಸಮಸ್ಯೆಗೆ ತಾಸಿನಲ್ಲೇ ಪರಿಹಾರ ನೀಡಿದ ಬಸವಣ್ಣ

ತಾಯಿಯನ್ನು ಕೊಂದು ಒಲೆಯಲ್ಲೇ ಸುಟ್ಟು ಚಿಕನ್‌ ರೋಸ್ಟ್‌ ಮಾಡಿ ತಿಂದ ಯುವಕ!

ರೋಗಿಗಳ ಜತೆಯಲ್ಲಿಯೇ ಬೀದಿ ನಾಯಿಗಳ ಕಾರುಬಾರು! ಮಹಾರಾಷ್ಟ್ರ ಆಸ್ಪತ್ರೆಯಲ್ಲಿ ಎಡವಟ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
