ಕೋಲಾರ:ನಾಗರಹಾವಿನಿಂದ ಯಜಮಾನನ ಪ್ರಾಣವನ್ನು ಕಾಪಾಡಿ, ಅದರೊಡನೆ ಹೋರಾಡಿ ಶ್ವಾನವೊಂದು ಅಸು ನೀಗಿದ ದುರಂತ ಘಟನೆ ಕೋಲಾರದಲ್ಲಿ ನಡೆದಿದೆ.
ಕೋಲಾರದ ಬಂಗಾರಪೇಟೆ ತಾಲೂಕಿನ ಬೀರಂಡಹಳ್ಳಿಯ ಬಿಎಂಟಿಸಿ ನೌಕರ ವೆಂಕಟೇಶ್ ಅವರ ಮಗ ವಿಲಾಸ್‌ನನ್ನು ಸಾವಿನ ದವಡೆಯಿಂದ ಪಾರು ಮಾಡಿದ ಅವರ ಮನೆಯ ಶ್ವಾನ, ತಾನು ಅಸುನೀಗಿದೆ. ಇವರು ಅಮೆರಿಕನ್ ಬುಲ್ ತಳಿಯ ಹೆಣ್ಣು ಶ್ವಾನ ಸಾಕಿದ್ದರು. ಅದಕ್ಕಿ ಮೂರು ವರ್ಷವಾಗಿತ್ತು.
ತೋಟದ ಮನೆ ಬಳಿ ವಿಲಾಸ್ ಮೊಬೈಲ್‌ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ, ನಾಗರಹಾವು ಅಲ್ಲಿದೆ ಬಂದಿದೆ. ಹಸಿರು ಹುಲ್ಲಿನ ಮೇಲೆ ಇದ್ದ ಅದನ್ನು ವಿಲಾಸ್ ಅವರು ನೋಡಿರಲಿಲ್ಲ. ಆದರೆ ವಿಲಾಸ್ ಹಿಂದುಗಡೆ ಇದ್ದ ಶ್ವಾನ ಹಾವನ್ನು ನೋಡಿದೆ.
ಆಗ ಹಾವು ಹೆಡೆ ಎತ್ತು ವಿಲಾಸ್‌ ಅವರನ್ನು ಕಚ್ಚಲು ಮುಂದಾಗಿದೆ. ಇನ್ನೇನು ಸ್ವಲ್ಪ ಹೊತ್ತಿನಲ್ಲಿಯೇ ಅದು ಕಚ್ಚುತ್ತಿತ್ತೋ ಏನೋ. ಅಷ್ಟರಲ್ಲಿ ಅವರ ಮನೆಯ ಶ್ವಾನ, ವಿಲಾಸ್ ಅವರ ಕಾಲಿಗೆ ಅಡ್ಡ ಬಂದು ಹಾವನ್ನು ಹಿಡಿದು ಎಸೆದಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಈ ರಭಸದಲ್ಲಿ ಶ್ವಾನ ತನ್ನ ಪ್ರಾಣದ ಪರಿವೇ ಇಲ್ಲದೇ ನಾಗರಹಾವಿನ ಕುತ್ತಿಗೆಗೆ ಬಾಯಿ ಹಾಕಿ ಕಚ್ಚಿದೆ. ಈ ಸಮಯದಲ್ಲಿ ಹಾವು ಶ್ವಾನಯ ಕೊರಳಿಗೆ ಸುತ್ತಿಕೊಂಡು ಅದಕ್ಕೆ ಕಚ್ಚಿದೆ. ಇಷ್ಟಾದರೂ ಶ್ವಾನ ನಾಗರನ ಕುತ್ತಿಗೆ ಸೀಳಿ ಕೊಂದು ಹಾಕಿದೆ. ಶ್ವಾನಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಧ್ಯೆಯೇ ಪ್ರಾಣ ಬಿಟ್ಟಿದೆ.
ಅದನ್ನು ಮನೆಯಂಗಳದಲ್ಲಿಯೇ ಅಂತ್ಯಕ್ರಿಯೆ ಮಾಡಿ ಪೂಜಿಸಲಾಗಿದೆ.
ಈತ ದೇವಾಲಯ ಮಾರಿದ, ಆತ ಖರೀದಿಸಿ ಹಿಂದೂಗಳನ್ನು ಓಡಿಸಿದ! 40 ವರ್ಷಗಳ ಹಿಂದಿನ ಕೇಸ್‌ಗೆ ಮರುಜೀವ…

ಬೆತ್ತಲೆ ವಿಡಿಯೋ ಮಾಡಿ ಕಷ್ಟದಲ್ಲಿ ಸಿಲುಕಿರೋ ನಟಿ ಶಿಲ್ಪಾ ಶೆಟ್ಟಿ ಪತಿಗೆ ಇ.ಡಿಯಿಂದ ಮತ್ತೊಂದು ಶಾಕ್‌!

ಪಾಕ್​ ಅಜ್ಜಿಯ ಮನಮಿಡಿಯುವ ಕಥೆಯಿದು… ತಾಯ್ನಾಡನ್ನು ನೋಡುವ 75 ವರ್ಷಗಳ ಕನಸು ಈಗ ನನಸಾಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
