ಚಿತ್ರದುರ್ಗ:ಹೋರಿ ಕದ್ದ ಆರೋಪಿಗೆ ಬೆತ್ತಲೆಗೊಳಿಸಿ ಕತ್ತೆ ಮೇಲೆ ಕುರಿಸಿ ಮೆರವಣಿಗೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಬಡಗೊಲ್ಲರಹಟ್ಟಿಯ ಈಶ್ವರ್ ಎಂಬಾತ ಹೋರಿ ಕದ್ದ ಆರೋಪ ಹೊತ್ತಿದ್ದಾನೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೂರಪ್ಪನಹಟ್ಟಿ ಪಕ್ಕದ ಸರಸ್ವತಿ ಹಟ್ಟಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಗ್ರಾಮದ ಸೀಗಜ್ಜಿ ಮತ್ತು ಬಾಲಣ್ಣ ಎಂಬುವವರ ಹೋರಿಗಳನ್ನು ಕದ್ದು ಬೇರೆ ಕಡೆಗೆ ಸಾಗಿಸುವ ವೇಳೆ ಆರೋಪಿ ಈಶ್ವರ್ ಸಿಕ್ಕಿ ಬಿದ್ದಿದ್ದಾನೆ.
ಈತನನ್ನು ಸರಸ್ವತಿ ಹಟ್ಟಿ ಗ್ರಾಮಸ್ಥರು ಕೈಕಾಲು ಕಟ್ಟಿ ಥಳಿಸಿದ್ದಾರೆ. ಇದು ಸಾಲದೇ ಕಳ್ಳನನ್ನು ಬಟ್ಟೆ ಬಿಚ್ಚಿ ಅರೆಬೆತ್ತಲೆ ಮಾಡಿ ಕತ್ತೆ ಮೇಲೆ ಕೂರಿಸಿದ್ದಾರೆ.
ಇದನ್ನೂ ಓದಿ:ಎಟಿಎಂ ಹಣ ಎಗರಿಸಿದ ಖದೀಮರು: ನಡೆದಾಡೋ ಸ್ಟೈಲ್‌ನಲ್ಲಿ ಸಿಕ್ಕಿಬಿದ್ದದ್ದೇ ರೋಚಕ…
ಈಶ್ವರ್‌ಗೆ ಕೆಂಪು ಬಣ್ಣದ ಕುಂಕುಮ ಹಚ್ಚಿ ಊರಲ್ಲಿ ಮೆರವಣಿಗೆ ಮಾಡಿದ್ದಾರೆ. ಅರೆಬೆತ್ತಲೆಗೊಳಿಸಿ ಕತ್ತೆ ಮೆರವಣಿಗೆ ಮಾಡಿ ತಕ್ಕ ಪಾಠ ಕಲಿಸಿದ್ದೇವೆ ಎನ್ನುತ್ತಾರೆ ಗ್ರಾಮಸ್ಥರು.
ಇನ್ನು ಈ ಘಟನೆಯು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಷಯ ತಿಳಿದ ತಕ್ಷಣ ತಾಲೂಕು ಆಡಳಿತ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.
ಭಾರತದಲ್ಲಿ 20 ಸಾವಿರಕ್ಕೂ ಅಧಿಕ ಜನರ ಜೀವ ಉಳಿಸಿದ ಕರೊನಾ!

ಎಟಿಎಂ ಹಣ ಎಗರಿಸಿದ ಖದೀಮರು: ನಡೆದಾಡೋ ಸ್ಟೈಲ್‌ನಲ್ಲಿ ಸಿಕ್ಕಿಬಿದ್ದದ್ದೇ ರೋಚಕ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − nine =
Remember me
