ಬೆಂಗಳೂರು:ಮಕ್ಕಳ ಕಷ್ಟವನ್ನು ಪಾಲಕರಿಗೆ ಅದರಲ್ಲಿಯೂ ಅಮ್ಮಂದಿರಿಗೆ ನೋಡಲು ಆಗುವುದಿಲ್ಲ ಎನ್ನುವುದು ನಿಜವೇ. ಅದಕ್ಕೇ ಹೆತ್ತ ಕರುಳು ಎನ್ನುವುದು. ಆದರೆ ಇಲ್ಲೊಬ್ಬ ತಾಯಿ ಮಗನಿಗೆ ಜೈಲಿನಲ್ಲಿ ಡ್ರಗ್ಸ್​ ಪೂರೈಕೆ ಮಾಡಿ ಈಗ ತಾನೂ ಜೈಲು ಪಾಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಶಿಕಾರಿ ಪಾಳ್ಯದ ನಿವಾಸಿ ಪರ್ವೀನ್​ ತಾಜ್​ ಈಗ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಮಗನ ಜತೆ ಇರಬೇಕಾದ ಅನಿವಾರ್ಯತೆ ಉಂಟಾಗಿದೆ. ಈಕೆಯ ಮಗ ಮೊಹಮ್ಮದ್ ಬಿಲಾಲ್ ಸುಲಿಗೆ, ದರೋಡೆ ಪ್ರಕರಣದಲ್ಲಿ ಜೈಲು ಸೇರಿದ್ದಾನೆ. ಇದಾಗಲೇ 11 ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿರುವ ಈತನನ್ನು 2020ರಲ್ಲಿ ದರೋಡೆ, ಸುಲಿಗೆ ಪ್ರಕರಣದಲ್ಲಿ ಕೋಣನಕುಂಟೆ ಪೊಲೀಸರು ಬಂಧಿಸಿದ್ದರು. ಡ್ರಗ್ಸ್​ ದಾಸನಾಗಿರುವ ಆತನಿಗೆ ಅದನ್ನು ಬಿಟ್ಟು ಇರುವುದು ಅಸಾಧ್ಯವಾಗಿದೆ. ಇದೇ ಕಾರಣಕ್ಕೆ ತಾಯಿ ಪರ್ವೀನ್​, ಬಟ್ಟೆಯ ಬ್ಯಾಗ್​ನಲ್ಲಿ ಡ್ರಗ್ಸ್​ ತೆಗೆದುಕೊಂಡು ಬಂದಿದ್ದಾಳೆ!
ಬಟ್ಟೆ ಕೊಡುವ ಬಂದಿದ್ದೇನೆ ಎಂದು ಜೈಲಿನಲ್ಲಿದ್ದ ಪೊಲೀಸರಿಗೆ ಬ್ಯಾಗ್​ ತೋರಿಸಿ ಒಳಗೆ ಹೋಗಿದ್ದಾಳೆ. ಪೊಲೀಸರು ಆಕೆಯನ್ನು ವಿಸಿಟಿಂಗ್​ ರೂಮ್​ಗೆ ಬಿಟ್ಟಿದ್ದಾರೆ. ವಿಸಿಟಿಂಗ್​ ರೂಮ್​ನಲ್ಲಿ ಕುಳಿತಿದ್ದ ಮಹಿಳೆ ಬ್ಯಾಗ್​ನನ್ನು ಪೊಲೀಸರು ತಪಾಸಣೆ ಮಾಡಿದಾಗ ಅದರಲ್ಲಿ ಡ್ರಗ್ಸ್​ ಪತ್ತೆಯಾಗಿದೆ.
ತಕ್ಷಣ ಜೈಲು ಸಿಬ್ಬಂದಿ ಪರಪ್ಪನ ಅಗ್ರಹಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿ ತಾಯಿ ಪರ್ವೀನ್ ತಾಜ್ ಹಾಗೂ ಮಗ ಬಿಲಾಲ್ ಮೇಲೆ ಕೇಸ್ ದಾಖಲಿಸಿರುವ ಪರಪ್ಪನ ಅಗ್ರಹಾರ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಜೈಲಿನಲ್ಲಿ ಇರುವ ಯಾರಿಗೋ ಕೊಡುವ ಸಲುವಾಗಿ ಪರಿಚಯದವರೊಬ್ಬರು ನನಗೆ ಈ ಬ್ಯಾಗ್​ ಕೊಟ್ಟಿದ್ದರು. ಈ ಬ್ಯಾಗ್​ ಅನ್ನು ನಿನ್ನ ಮಗನ ಕೈಯಲ್ಲಿ ಕೊಟ್ಟು ಆತನಿಗೆ ಕೊಡಲು ಹೇಳಿದ್ದರು. ನನಗೆ ಇದರ ಅರಿವೇ ಇಲ್ಲ ಎಂದು ಮಹಿಳೆ ಹೇಳಿದ್ದಾಳೆ. ಸದ್ಯ ಆಕೆಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ ಪೊಲೀಸರು.
ಇ.ಡಿ ಡ್ರಿಲ್​: ರಾಹುಲ್​ ಪರ ಟ್ವೀಟ್​ ಮಾಡಿ ಸಂಕಷ್ಟಕ್ಕೆ ಸಿಲುಕಿದ ನಟಿ ರಮ್ಯಾ: ಕಮೆಂಟಿಗರು ಮಾಡಿದರು ‘ಚಾರ್ಟ್’​ ಪಾಠ!

ವಯಾಗ್ರ ತಂದ ಆಪತ್ತು- ಅತಿಯಾಗಿ ಸೇವಿಸಿ ಜೀವನಪೂರ್ತಿ ಪೇಚಿಗೆ ಸಿಲುಕಿದ ನವವಿವಾಹಿತ: ವೈದ್ಯರ ಎಚ್ಚರಿಕೆ

ಹುಡುಗಿ ಬೇಕಾ, ಗಡ್ಡ ಬೇಕಾ… ನಿರ್ಧಾರ ನಿಮ್ಮದು! ಸಿನಿ ಸ್ಟಾರ್​ಗಳಂತೆ ಕಾಣಬಯಸುವವರಿಗೆ ಫುಲ್​ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
