ಆನೇಕಲ್:ಕೆಲ ತಿಂಗಳಿನಿಂದ ಡ್ರಗ್ಸ್​ ಕೇಸ್​ ಭಾರಿ ಸಂಚಲನ ಮೂಡಿಸಿದೆ. ನಟ-ನಟಿಯರು, ಚಿತ್ರರಂಗದ ಗಣ್ಯರಿಂದ ಹಿಡಿದು, ರಾಜಕಾರಣಿಗಳು, ಸಾಫ್ಟ್​ವೇರ್​ ಉದ್ಯೋಗಿಗಳು ಯಾರನ್ನೂ ಬಿಟ್ಟಿಲ್ಲ ಡ್ರಗ್ಸ್​. ಇದೀಗ ಬೆಂಗಳೂರಿನ ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಯನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ. ಈತನಿಗೆ ಸುಮಾರು 16 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್​ ಸೀಜ್​ ಮಾಡಲಾಗಿದೆ.
ಅರುಣ್ ಆಂಥೋನಿ ಎಂಬ 22 ವರ್ಷದ ಯುವಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ​ತಾಲೂಕಿನ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಬಹು ಪ್ರಸಿದ್ಧ ಆಸ್ಪತ್ರೆಯೊಂದರಲ್ಲಿ ಎಕ್ಸ್-ರೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾನೆ.
ಈತ ಕೆನಡಾದಿಂದ ಲೈಸರ್ಜಿಕ್ ಡೈಥಲಾಮೈಡ್ (ಎಲ್‍ಎಸ್‍ಡಿ) ಡ್ರಗ್ಸ್ ತರಿಸುತ್ತಿದ್ದ. ಕೆನಡಾದಲ್ಲಿ ಸಿಗುವ ಎಲ್‍ಎಸ್‍ಡಿ ಡ್ರಗ್ಸ್ ಅನ್ನು ಕೇರಳದಿಂದಲೇ ಬೇರೊಬ್ಬರಿಂದ ಬುಕ್ ಮಾಡಿಸಿ ತಾನು ಕೆಲಸ ಮಾಡುವ ಆಸ್ಪತ್ರೆಯ ವಿಳಾಸಕ್ಕೇ ತರಿಸಿದ್ದ.
ಈ ಕೆಲಸವನ್ನು ಅದೆಷ್ಟು ಸಲ ಮಾಡಿದ್ದಾನೋ ಸದ್ಯಕ್ಕೆ ತಿಳಿದಿಲ್ಲ. ಆದರೆ ಇಂದು ಆತ ಸಿಕ್ಕಿಬಿದ್ದಿದ್ದಾನೆ. ಈತನನ್ನು ಸಿಸಿಬಿ ಪೊಲೀಸರು ಬಂಧಿಸಿ ಹೆಬ್ಬಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಡ್ರಗ್ಸ್​ ಪ್ರಕರಣದ ಬಗ್ಗೆ ಇದೀಗ ಹೆಚ್ಚು ಜಾಗೃತವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆಯೂ ತನಿಖೆ ನಡೆಸುತ್ತಿದ್ದೇವೆ. ಇಂಥ ಸಮಯದಲ್ಲಿ ಅರುಣ್​ ವಿಷಯ ಬೆಳಕಿಗೆ ಬಂದಿದೆ. ಬೆಂಗಳೂರು ನಗರ ಮಾದಕ ದ್ರವ್ಯ ನಿಗ್ರಹ ದಳದ ಸಿಸಿಬಿ ಇನ್‍ಸ್ಪೆಕ್ಟರ್ ಲಕ್ಷ್ಮಿಕಾಂತಯ್ಯ ಅವರಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಹೆಬ್ಬಗೋಡಿ ಸಿಐ ಗೌತಮ್ ಮತ್ತು ಸಿಬ್ಬಂದಿಯ ನೆರವಿನಿಂದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.
ಡ್ರಗ್ಸ್ ಹಾಳೆಗಳನ್ನು ತರಿಸಿಕೊಳ್ಳುತ್ತಿದ್ದ ಈತ ಅದರ ಮೇಲೆ ಯಾರಿಗೂ ಸ್ವಲ್ಪವೂ ಸುಳಿವು ಬಅರದಂತೆ ಗಣಪತಿ ಸೇರಿದಂತೆ ಅನೇಕ ದೇವರ ಫೋಟೊ ಚಿತ್ರಗಳನ್ನು ಇರಿಸುವಂತೆ ಸೂಚಿಸುತ್ತಿದ್ದ. ಆಸ್ಪತ್ರೆಯ ವಿಳಾಸಕ್ಕೆ ಇವು ಬರುತ್ತಿದ್ದರಿಂದ ಯಾರಿಗೂ ಅನುಮಾನ ಬಾರದಂತೆ ನೋಡಿಕೊಳ್ಳುತ್ತಿದ್ದ ಎಂದಿದ್ದಾರೆ ಪೊಲೀಸರು.
ಈಗ ಬಂಧಿಸಿದ ನಂತರ, ಸುಮಾರು 16 ಲಕ್ಷ ರೂಪಾಯಿ ಡ್ರಗ್ಸ್​ ವಶಕ್ಕೆ ಪಡೆಯಲಾಗಿದೆ. 10×6ರ ಆಕಾರದಲ್ಲಿರುವ ಕಾಗದದಲ್ಲಿ ಮೊಬೈಲ್ ಸಿಮ್ ಸೈಜ್ ಹಾಳೆಯ ಚೂರನ್ನು ರಾಗಿ ಕಾಳಿನಷ್ಟು ಚಪ್ಪರಿಸಿದರೆ ಸಾಕು ಅರ್ಧ ಗಂಟೆಯಲ್ಲಿ ಮತ್ತೇರುತ್ತದೆ. ಈ ಡ್ರಗ್ಸ್ ಹತ್ತು ಗಂಟೆಗಳವರೆಗೂ ನಶೆಯಲ್ಲಿ ಇರಿಸುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಕಾರು ಕಳುವಾಗಿದೆ ಎಂದು ಗೌಡ್ರು ದೂರು ಕೊಟ್ರೆ ಅವ್ರನ್ನೇ ಅರೆಸ್ಟ್​ ಮಾಡೋದಾ?

ಸಮುದ್ರದಿಂದ ತೇಲಿಬಂದ್ವು ಚಿನ್ನ? ಭೀಕರ ಮಳೆ ಲೆಕ್ಕಿಸದೇ ಮೀನುಗಾರರ ದೌಡು!

ಇಲ್ಲಿದೆ ನೋಡಿ ಫೋಟೋ ಅಸಲಿಯತ್ತು! ಭಾರತ ಕಂಡ ಅತ್ಯಂತ ಕೆಟ್ಟ ರಾಜಕಾರಣಿ ಎನಿಸಿಕೊಂಡವರಾರು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − nine =
Remember me
