ಬೆಂಗಳೂರು:ಡ್ರಗ್ಸ್ ಜಾಲದ ನಂಟು ಆರೋಪ ಹೊತ್ತಿರುವ ನಟಿ ರಾಗಿಣಿ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಕೋರ್ಟ್​ ಮುಂದೆ ಬರುವ ಸಾಧ್ಯತೆ ಇದೆ.
ಸಂಜನಾ ಹೊರತುಪಡಿಸಿ ಉಳಿದ ಆರೋಪಿಗಳಾದ ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೆಪ್ಪರ್ ಎಲ್ಲರೂ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಜೈಲಾ, ಬೇಲಾ ಎನ್ನುವುದು ಇಂದು ಸಂಜೆಯ ಒಳಗೆ ತೀರ್ಮಾನ ಆಗಲಿದೆ.
ಈ ನಡುವೆಯೇ ಇಬ್ಬರೂ ನಶೆ ನಟಿಯರು ಸೇರಿದಂತೆ ಉಳಿದ ಆರೋಪಿಗಳ ಕಸ್ಟಡಿ ಇಂದು ಅಂತ್ಯವಾಗಲಿದ್ದು, ಇವರನ್ನು ಮಧ್ಯಾಹ್ನದ ವೇಳೆ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆಗಳಿವೆ.
ಇದನ್ನೂ ಓದಿ:‘ಡ್ರಗ್ಸ್​ ದಂಧೆಯಲ್ಲಿ 32 ರಾಜಕಾರಣಿಗಳು! ಸಾಕ್ಷಿ ಸಮೇತ ಗೃಹ ಸಚಿವರ ಕೈ ಸೇರಲಿದೆ ಲಿಸ್ಟ್’
ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಸಿಎಚ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ. ಇವರ ಪೈಕಿ ಯಾರ ಕಸ್ಟಡಿ ಮುಂದುವರೆಯುತ್ತದೆಯೋ, ಯಾವ ಆರೋಪಿಗಳ ಕಸ್ಟಡಿ ಮುಗಿಯುತ್ತದೆಯೋ ಎಂಬ ಕುತೂಹಲವಿದೆ.
ಒಂದು ವೇಳೆ ಅರ್ಜಿಯ ವಿಚಾರಣೆ ಕೋರ್ಟ್​ ಮುಂದೆ ಬರದೇ ಹೋದರೆ, ವಿಚಾರಣೆ ಮುಂದೂಡಿಕೆಯಾದರೆ ಅಥವಾ ಜಾಮೀನು ಅರ್ಜಿ ತಿರಸ್ಕೃತವಾದರೆ ಆರೋಪಿಗಳು ಕೆಲವು ದಿನಗಳು ಜೈಲಿನಲ್ಲಿಯೇ ಇರಬೇಕಾದುದು ಅನಿವಾರ್ಯ.
ರಾಗಿಣಿ ವಿರುದ್ಧ ಸಾಕಷ್ಟು ಪುರಾವೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ, ನಟಿ ಸಂಜನಾಳಿಗಿಂತ ಮತ್ತಷ್ಟು ಆತಂಕದಲ್ಲಿ ನಟಿ ರಾಗಿಣಿ ಇರುವುದಾಗಿ ತಿಳಿದುಬಂದಿದೆ. ಈಗಾಗಲೇ 12 ದಿನಗಳ ಕಾಲ ಪೊಲೀಸ್ ವಿಚಾರಣೆ ಎದುರಿಸಿರುವ ರಾಗಿಣಿ ಇಂದು ಜಾಮೀನು ಅರ್ಜಿ ವಿಚಾರಣೆ ಇರುವ ಭಯದಲ್ಲಿಯೇ ನಿನ್ನೆ ರಾತ್ರಿ ಕಳೆದಿದ್ದಾರೆ. ನಿನ್ನೆ ತಡವಾಗಿ ಊಟ ಸೇವಿಸಿದ್ದರಂತೆ.
ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಅರ್ಚಕರ ಕೊಲೆ ಆರೋಪಿಗಳಿಗೆ ಗುಂಡೇಟು

ವಿಮಾ ಹಣ ಪಡೆಯಲು ಕೈಯನ್ನೇ ತುಂಡರಿಸಿಕೊಂಡಳು! ಆದರೆ ಆದದ್ದೇ ಬೇರೆ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + five =
Remember me
