ಶಿವಮೊಗ್ಗ:ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ನಡೆಯುತ್ತಿದ್ದ ಇ-ಆಸ್ಪತ್ರೆಯ ಡೇಟಾ ಎಂಟ್ರಿ ಸಿಬ್ಬಂದಿ ವಜಾಕ್ಕೆ ರಾಜ್ಯ ಸರ್ಕಾರದ ಆದೇಶ ಹೊರಡಿಸಿದೆ. ಕೋವಿಡ್‌ ಸಮಯದಲ್ಲಿಯೇ ಇಂಥದ್ದೊಂದು ಆದೇಶ ಹೊರಡಿಸಿರುವುದರಿಂದ ಇದೀಗ ಸಿಬ್ಬಂದಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ. 312 ಸಿಬ್ಬಂದಿ ಈ ಕರ್ತವ್ಯದಲ್ಲಿ ತೊಡಗಿಸಿಕೊಂಡಿದ್ದು, ಇದೀಗ ಇವರ ಸೇವೆ ಸ್ಥಗಿತಗೊಳ್ಳಲಿದೆ.ಇವರೆಲ್ಲರೂ ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ ಹಾಗೂ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಡಾಟಾ ಎಂಟ್ರಿ ಕೆಲಸಗಾರರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದ ಅಡಿಯಲ್ಲಿಡಿ ಪಿಡಿ, ಅಡ್ಮಿಶನ್, ಬಿಲ್ಲಿಂಗ್, ಡಿಸ್ಚಾರ್ಜ್ ಹಾಗೂ ಫಾರ್ಮಸಿ ಎಂಟ್ರಿ ಮಾಡುತ್ತಿದ್ದ ಸಿಬ್ಬಂದಿ ಇವರಾಗಿದ್ದಾರೆ.ಮೇ ಅಂತ್ಯದಲ್ಲಿಯೇ ಇವರ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಸೇವೆ ಅಗತ್ಯವಿರುವ ಹಿನ್ನೆಲೆ ಕೆಲವೆಡೆ ಇದೇ ಸಿಬ್ಬಂದಿಯಿಂದ ಡಾಟಾ ಎಂಟ್ರಿ ಕೆಲಸವನ್ನೂ ಮಾಡಲಾಗುತ್ತಿದೆ. ಇವರಿಗೆಲ್ಲರಿಗೂ ಒಂದು ವಾರ ಕಾದು ನೋಡುವಂತೆ ಹೇಳಿ ಕರ್ತವ್ಯಕ್ಕೆ ಬರಹೇಳಲಾಗುತ್ತಿದೆ. ಅದೇ ಇನ್ನೊಂದೆಡೆ ಡಾಟಾ ಎಂಟ್ರಿ ಬಗ್ಗೆ ವೈದ್ಯರು ಮತ್ತು ಸಿಬ್ಬಂದಿಗೆ ತರಬೇತಿ ನೀಡುವಂತೆ ಸರ್ಕಾರದ ಆದೇಶ ಹೊರಡಿಸಿದೆ.ಪ್ರಸಕ್ತ ಸಾಲಿನಲ್ಲಿ ಡಾಟಾ ಎಂಟ್ರಿ ಆಪರೇಷನ್ ಕಾಸ್ಟ್ ಅಡಿ ಅನುದಾನ ಅನುಮೋದನೆಯಾಗದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ತಮ್ಮ ಸೇವೆಯ ಅಗತ್ಯವಿದ್ದರೂ ಇಂಥದ್ದೊಂದು ನಿರ್ಧಾರ ತೆಗೆದುಕೊಂಡಿರುವ ವಿರುದ್ಧ ನೌಕರರು ಅಸಮಾಧಾನ ಹೊರಹಾಕುತ್ತಿದ್ದಾರೆ.
ಆಯುರ್ವೇದ ಕರೊನಾ ಔಷಧಕ್ಕೆ ವಿದೇಶಿಗರ ದೌಡು- ಆನ್‌ಲೈನ್‌ ಮೂಲಕ ದೇಶಾದ್ಯಂತ ಪೂರೈಕೆಗೆ ಮುಂದಾದ ಸರ್ಕಾರ
“ಡ್ರೀಮ್‌ ಗರ್ಲ್‌” ನಟಿ ಕೋವಿಡ್‌ನಿಂದ ಸಾವು: ಮೊದಲ ಡೋಸ್‌ ಪಡೆದರೂ ಬಲಿ ಪಡೆದ ವೈರಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + eight =
Remember me
