ಬೆಂಗಳೂರು:ನೀವು- ಸಿಎಂ ಮಾತಾಡಲ್ವಂತೆ ಹೌದಾ? ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವ ಕೆ.ಎಸ್.ಈಶ್ವರಪ್ಪ ಹೌಹಾರುವಂತೆ ಉತ್ತರ ನೀಡಿದ್ದಾರೆ.
‘ನನಗಿರುವ ಮಾಹಿತಿ ಪ್ರಕಾರ ನೀವು ನಿಮ್ಮ‌ ಹೆಂಡತಿ, ಮಕ್ಕಳ‌ ಜತೆ ಮಾತನಾಡುತ್ತಿಲ್ವಂತೆ’ ಎಂದು ಪತ್ರಕರ್ತರನ್ನು ಉದ್ದೇಶಿಸಿ ಸಚಿವರು ಹೇಳಿಕೆ ನೀಡಿ ನಗೆಗಡಲಲ್ಲಿ‌ ತೇಲಿಸಿದರು.
ನೀವು ಬೆಳಗ್ಗೆ ಮನೆ ಬಿಟ್ಟರೆ ರಾತ್ರಿ ಮನೆಗೆ ಹೋಗುತ್ತೀರಿ, ಹೀಗಾಗಿ ಹೇಳಿದೆ ಅಷ್ಟೆ. ತಪ್ಪಾಗಿ ಅರ್ಥೈಸಬೇಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನುದ್ದೇಶಿಸಿ ನಗೆಯಾಡಿದರು.
ಯಡಿಯೂರಪ್ಪ ನಮ್ಮ ಸಿಎಂ. ಅವರೇ ನಮ್ಮ‌ ನಾಯಕ. ನನಗೂ ಯಡಿಯೂರಪ್ಪಗೆ ಆಗಲ್ಲ ಎಂದು ಬರೆದುಕೊಳ್ಳುವುದಿದ್ದರೆ ಬರೆದುಕೊಳ್ಳಿ, ನನ್ನದೇನು ಅಭ್ಯಂತರವಿಲ್ಲ. ಪೆನ್ನು ನಿಮ್ಮದು, ಪೇಪರ್ ನಿಮ್ಮದು ಎಂದು ತಮ್ಮ ಎಂದಿನ ಶೈಲಿಯಲ್ಲಿ ಪದ ಉರುಳಿಸಿದರು.
ಅನುದಾನವನ್ನು ಹಂಚಿಕೆ ಸಂಬಂಧ ರಾಜ್ಯಪಾಲರು ಮತ್ತು ತಮ್ಮ‌ಪಕ್ಷದ ನಾಯಕರಿಗೆ ಪತ್ರ ಬರೆದ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ ಈಶ್ವರಪ್ಪ, ನಾನು ಯಾರಿಗೂ ದೂರು ಕೊಟ್ಟಿಲ್ಲ.
ಇಲಾಖೆಗೆ ಅನುದಾನ ಹಂಚಿಕೆ ಮಾಡುವುದು ಸಿಎಂ‌ ಕೆಲಸ. ಇಲಾಖೆಗೆ ಬಂದ ಹಣ ಹಂಚುವುದು ಸಚಿವರ ಕಾರ್ಯ ಎಂಬುದು ಕಾನೂನಿನಲ್ಲಿದೆ. ಇದನ್ನು ರಾಜ್ಯಪಾಲರ ಬಳಿ ಸ್ಪಷ್ಟನೆ ಕೇಳಿದ್ದಷ್ಟೆ, ಪಕ್ಷದ ವರಿಷ್ಠರು ಈ ವಿಷಯವನ್ನು ಬಗೆಹರಿಸುತ್ತೇವೆಂದು ಹೇಳಿದ್ದಾರೆ ಎಂದರು‌.
ನಾನು ಪತ್ರ ಬರೆದರೆ ದೂರು ಎಂದು ಏಕೆ ಪರಿಗಣಿಸುತ್ತೀರಿ, ನಾನು ನಮ್ಮ‌ಪಕ್ಷದ ನಾಯಕರ ಗಮನಕ್ಕೆ ತರದೇ ದೇವೇಗೌಡರು, ಡಿ.ಕೆ.ಶಿವಕುಮಾರ್‌ಗೆ ಪತ್ರ ಬರೆಯಬೇಕಿತ್ತೇ ಎಂದು ಪ್ರಶ್ನಿಸಿದರು.
ಕಾರಿನಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಮಾಸ್ಕ್​ ಬೇಕಾ? ಹೈಕೋರ್ಟ್​ ಏನು ಹೇಳಿದೆ ನೋಡಿ…

ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವಿರಾ?ವಿಜ್ಞಾನ, ತಂತ್ರಜ್ಞಾನ ಇಲಾಖೆಯಲ್ಲಿ ಇವೆ ಹುದ್ದೆಗಳು…

ಮೊದಲೇ ಗಂಡ ಇದ್ರೂ ಹೇಳ್ದೇ ನನ್ನ ಮದ್ವೆಯಾಗಿಬಿಟ್ಟಿದ್ದಾಳೆ- ಪ್ಲೀಸ್ ಕಾನೂನು ಸಲಹೆ ಕೊಡಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 3 =
Remember me
