ದಾವಣಗೆರೆ:ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಬೆಳಗ್ಗೆಯಿಂದಲೂ ಭರ್ಜರಿಯಾಗಿಯೇ ನಡೆಯುತ್ತಿದೆ. ಲಕ್ಷ ಲಕ್ಷ ಜನರು ಇದರಲ್ಲಿ ಭಾಗಿಯಾಗಿ ತಮ್ಮ ನೆಚ್ಚಿನ ನಾಯಕನಿಗೆ ಶುಭ ಹಾರೈಸಿದ್ದಾರೆ. ನಡುನಡುವೆ ಬಂದ ಜಿಟಿಜಿಟಿ ಮಳೆಯ ನಡುವೆಯೂ ಅಭಿಮಾನಿಗಳು ಕದಲದೇ ಕುಳಿತುಕೊಂಡಿದ್ದಾರೆ.
ಇವೆಲ್ಲವುಗಳ ನಡುವೆಯೇ ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಸಿದ್ದರಾಮಯ್ಯನವರಿಗೆ ತಮಾಷೆ ತಮಾಷೆ ಮಾಡುತ್ತಲೇ ಎಚ್ಚರಿಕೆಯನ್ನೂ ನೀಡಿರುವ ಘಟನೆ ನಡೆಯಿತು. ಅದೇನೆಂದರೆ, ‘ಸಿದ್ದರಾಮಯ್ಯನವರೇ ನಿಮ್ಮ ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ. ಸುತ್ತಮುತ್ತ ಸೇರಿರುವವರ ಬಗ್ಗೆ ಸ್ವಲ್ಪ ಹುಷಾರಾಗಿರಿ. ಬಗ್ಗಿ ಬಗ್ಗಿ ನಮಸ್ಕಾರ ಮಾಡೋರ ಬಗ್ಗೆ ಹುಷಾರಾಗಿರಿ. ನೀವು ನಿಮ್ಮ ಕುಟುಂಬಕ್ಕೆ, ಹೆಂಡ್ತಿ ಮಕ್ಕಳಿಗೆ ಸೇರಿದವರಲ್ಲ, ಇಡೀ ರಾಜ್ಯದ ಜನರಿಗೆ ಸೇರಿದವರು’ ಎಂದರು. ಕೊನೆಯಲ್ಲಿ ಮಾಧ್ಯಮಗಳ ಜತೆ ಮಾತನಾಡುತ್ತಲೇ ರಮೇಶ್​ ಅವರು ಇದೇ ಮಾತನ್ನು ಹೇಳಿದರು. ‘ತಮ್ಮ ಕಾಲಿಗೆ ಬೀಳುವವರು, ನಮಸ್ಕಾರ ಹೊಡೆಯುತ್ತಾ ಹಿಂದೆ ಮುಂದೆ ಸುತ್ತುತ್ತಿರುವವರ ಬಗ್ಗೆ ಅವರು ಜಾಗ್ರತೆಯಿಂದ ಇರಬೇಕು’ ಎಂದು ಹೇಳಿದರು.
ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್​ ಪಾಳಯದಲ್ಲಿಯೇ ನಡೆಯುತ್ತಿರುವ ಜಟಾಪಟಿ ಹಾಗೂ ಕೆಲವು ಆಂತರಿಕ ಒಡಕುಗಳ ಕುರಿತು ಈ ರೀತಿಯಾಗಿ ರಮೇಶ್​ ಅವರು ಸಿದ್ದರಾಮಯ್ಯನವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು. ಹೊರಗಿನ ಶತ್ರುಗಳಿಗಿಂತಲೂ ಹೆಚ್ಚಾಗಿ ಹಿಂದೆ ಮುಂದೆ ಸುತ್ತುತ್ತಾ ಇರುವವರ ಬಗ್ಗೆಯೇ ಸಿದ್ದರಾಮಯ್ಯ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಸೂಕ್ಷ್ಮವಾಗಿ ಅವರು ನುಡಿದರು.
ಕಾರ್ಯಕ್ರಮ ಆಯೋಜಿಸಿದ ಶಾಸಕ ಜಮೀರ್​ ಅಹಮದ್ ಮಾತನಾಡಿ, ಇವತ್ತು ಸಿದ್ದರಾಮಯ್ಯಗೆ ಪ್ರೀತಿ ತೋರಿಸಿದ್ದೀರಿ. ಈ ಪ್ರೀತಿ ಇಡಿ ದೇಶದ ಯಾವ ನಾಯಕನಿಗೂ ಸಿಗೋಕೆ ಸಾಧ್ಯ ಇಲ್ಲ. 2023ಕ್ಕೆ ತಾವೆಲ್ಲರು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು. 75 ವರ್ಷದ ಈ ಹುಡುಗ ನಮ್ಮೆಲ್ಲರಿಗೂ ಮಾದರಿ. ನನ್ನನ್ನು ಸಹೋದರನಂತೆ ಜೊತೆಯಲ್ಲೇ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ಮು ಅಧಿಕಾರಕ್ಕೆ ತಂದವರು ಇವರು ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ ಕೊಂಡಾಡಿದರು.
ಆಡು ಮುಟ್ಟದ ಸೊಪ್ಪಿಲ್ಲ. ಸಿದ್ದರಾಮಯ್ಯ ಅವರು ಮಾಡದ ಯೋಜನೆ ಇಲ್ಲ ಎಂದರು. ಅಂಥವರ ಉತ್ಸವದಲ್ಲಿ ಭಾಗಿಯಾಗ್ತಿರೋದು ನಮ್ಮ ಭಾಗ್ಯ ಎಂದು ಕಾಂಗ್ರೆಸ್​ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್​ ನುಡಿದರು. ಮಾಜಿ ಸಚಿವೆ ಉಮಾಶ್ರೀ ಸಿನಿಮಾ ಶೈಲಿಯಲ್ಲೇ ಸಿದ್ದರಾಮಯ್ಯ ಅವರನ್ನು ಹಾಡಿಹೊಗಳಿದರು. ರಾಜಕಾರಣ ವ್ಯಾಪಾರ ಅಲ್ಲ, ರಾಜಕಾರಣ ಸೇವೆ ಅಂತಾ ತೋರಿಸಿದವರು ನಮ್ಮ ಸಿದ್ದರಾಮಯ್ಯನವರು. ಅವರೊಬ್ಬ ಆದರ್ಶ ರಾಜಕಾರಣಿ, ಭ್ರಷ್ಟ ರಹಿತ ರಾಜಕಾರಣಿ ಎಂದರು.
ಸಿದ್ದರಾಮೋತ್ಸವಕ್ಕೆ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪ ಗೈರು! ಅವರು ಕೊಟ್ಟ ಕಾರಣ ಹೀಗಿದೆ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − four =
Remember me
