ರಾಯಚೂರು:ಅಮ್ಮನ ದಿಢೀರ್‌ ಸಾವು ಎದುರಾದರೂ, ಆಕೆಯ ಇಚ್ಛೆ ಪೂರೈಸುವುದಕ್ಕಾಗಿ ತಾಯಿಯ ಶವ ಮನೆಯಲ್ಲಿರುವಾಗಲೇ ಯುವತಿಯೊಬ್ಬರು ಪರೀಕ್ಷೆ ಬರೆದು ಬಂದಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮೀನಗಢ ಗ್ರಾಮದಲ್ಲಿ ನಡೆದಿದೆ.
ಬಸಲಿಂಗಮ್ಮ ಪೂಜಾರ ಎಂಬ ಯುವತಿ, ಅಮೀನಗಢದಿಂದ ಲಿಂಗಸುಗೂರಿಗೆ ಬಂದು ಪದವಿ ಮೂರನೇ ಸೆಮ್ಇಸ್ಟರ್ ಪರೀಕ್ಷೆ ಬರೆದಿದ್ದಾರೆ.
ಭಾನುವಾರ ಅಮವಾಸ್ಯೆ ಪ್ರಯುಕ್ತ ತಾಯಿ ಚನ್ನಮ್ಮ ಉಪವಾಸ ವೃತದಲ್ಲಿ ಇದ್ದರು. ಇದರ ಹೊರತಾಗಿಯೂ ಅವರ ಹೊಲಕ್ಕೆ ಕೆಲಸಕ್ಕೆಂದು ತೆರಳಿದ್ದರು. ಮಧ್ಯಾಹ್ನ ಏಕಾಏಕಿ ಬಿಪಿ ಲೋ ಆಗಿದೆ. ಕೂಡಲೇ ಅವರು ಮೃತಪಟ್ಟಿದ್ದಾರೆ. ದಿಢೀರ್‌ ಎಂದು ಈ ರೀತಿಯ ಸಾವು ಬಂದಿರುವುದು ಮನೆಯವರಿಗೆ ಅರಗಿಸಿಕೊಳ್ಳಲು ಆಗಲಿಲ್ಲ.
ಆದರೆ ಅಮ್ಮ ಸದಾ ತನಗೆ ಓದು ಎಂದು ಹೇಳುತ್ತಿದ್ದಳು. ಅವಳ ಇಚ್ಛೆ ಪೂರೈಸಬೇಕು ಎಂಬ ಕಾರಣಕ್ಕೆ ಬಸಲಿಂಗಮ್ಮ ಪರೀಕ್ಷೆ ಬರೆದಿದ್ದಾರೆ. ನಂತರ ತನ್ನ ತಾಯಿಯ ಇಚ್ಛೆಯ ಕುರಿತು ಹೇಳಿದ್ದಾಳೆ. ತಾನು ಪರೀಕ್ಷೆ ಬರೆಯದೇ ಇದ್ದರೆ ಅಮ್ಮನಿಗೆ ನೋವಾಗುವುದು ಎಂಬ ಕಾರಣಕ್ಕೆ ಪರೀಕ್ಷೆ ಬರೆದಿರುವುದಾಗಿ ಕಣ್ಣೀರಾಗಿದ್ದಾಳೆ ಯುವತಿ.
ಬಸಲಿಂಗಮ್ಮ ಏನು ಹೇಳಿದ್ದಾರೆ ನೋಡಿ:
ಅಮ್ಮನ ಆಸೆ ತೀರಿಸುವುದಕ್ಕಾಗಿ ಆಕೆಯ ಶವ ಮನೆಯಲ್ಲಿ ಇರುವಾಗಲೇ ಪದವಿ ಪರೀಕ್ಷೆ ಬರೆದು ಬಂದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಅಮೀನಗಢ ಬಸಲಿಂಗಮ್ಮ ಪೂಜಾರpic.twitter.com/Mb0XIjVZ0x
— Vijayavani (@VVani4U)August 9, 2021

VIDEO: ಭಾರತಕ್ಕೆ ಚಿನ್ನ, ನಿಜವಾಯ್ತು ಮೋದಿ ಭವಿಷ್ಯ- ಜಾಲತಾಣದಲ್ಲಿ ವಿಡಿಯೋ ವೈರಲ್‌

ಇಂದು ಎಸ್‌ಎಸ್‌ಎಲ್‌ಸಿ ಫಲಿತಾಂಶ: ಇಲ್ಲಿದೆ ನೋಡಿ ಅಧಿಕೃತ ವೆಬ್‌ಸೈಟ್‌ ಲಿಂಕ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
