ಬೆಂಗಳೂರು:ಅಲ್ಲಾರಿ… ಇಂಟರ್​ಕೋರ್ಸ್​ ಆಗೇ ಇಲ್ಲ ಅಂತ ಯಾವ ಬಾಯಲ್ಲಿ ಹೇಳ್ತಾನ್ರಿ… ವೈದ್ಯಕೀಯ ಪರೀಕ್ಷೆ ಮಾಡಿದ್ರೆ ಎಲ್ಲಾ ಹೊರಕ್ಕೆ ಬರುತ್ತೆ. ಸಚಿವನೇ ಆಗಿರಲಿ… ಎಂಥ ಪ್ರಭಾವಿಯೇ ಆಗಿರಲಿ… ಮೆಡಿಕಲ್​ ಎಕ್ಸಾಮ್​ನಿಂದ ತಪ್ಪಿಸಿಕೊಳ್ಳಲು ಸಾಧ್ಯನೇ ಇಲ್ಲ…
ಹೀಗೆಂದು ಹೇಳಿದವರು ಸಿಡಿಕೇಸ್​ನಲ್ಲಿ ಸಿಲುಕಿರುವ ಯುವತಿಯ ಪರ ವಕೀಲ ಮಂಜುನಾಥ್​ ಅವರು. ಸೋಮವಾರ (ಮಾರ್ಚ್​ 29) ನ್ಯಾಯಾಧೀಶರ ಮುಂದೆ ಯುವತಿಯನ್ನು ಹಾಜರು ಪಡಿಸಲು ಸಿದ್ಧತೆ ನಡೆಸಿರುವ ವಕೀಲರಾದ ಮಂಜುನಾಥ್​ ಹಾಗೂ ಜಗದೀಶ್​ ಅವರು, ಫೇಸ್​ಬುಕ್​ ಲೈವ್​ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಸದ್ಯ ಸಿಡಿ ಪ್ರಕರಣದಲ್ಲಿ ಅತ್ಯಾಚಾರ ಹಾಗೂ ಎಕ್ಸ್​ಟಾರ್ಷನ್​ ಎರಡು ಕೇಸು ದಾಖಲಾಗಿದ್ದು, ಇವೆರಡನ್ನೂ ಒಂದೇ ತನಿಖಾಧಿಕಾರಿಗಳು ನಡೆಸಲು ಸಾಧ್ಯವೇ ಇಲ್ಲ. ಈ ಪ್ರಕರಣದಲ್ಲಿ ಸತ್ಯ ಮುಚ್ಚಿಹೋಗಲು ಪ್ರಯತ್ನ ನಡೆಯುತ್ತಿದೆ. ನಿಜಾಂಶ ಹೊರಕ್ಕೆ ಬರುತ್ತಿಲ್ಲ. ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಸತ್ಯವನ್ನು ಮುಚ್ಚಿಹಾಕಲಾಗುತ್ತದೆ ಎಂದು ವಕೀಲರು ಆರೋಪ ಮಾಡಿದ್ದಾರೆ.
ಐಪಿಸಿಯ 164ನೇ ಕಲಮಿನ ಅನ್ವಯ ಯುವತಿ ಕೋರ್ಟ್​ಗೆ ಬಂದು ಕಟಕಟೆಯಲ್ಲಿ ನಿಂತು ಸತ್ಯ ಹೇಳಲು ಒಪ್ಪಿಕೊಂಡಿದ್ದಾಳೆ. ಹೀಗೆ ಮಾಡಲು ನ್ಯಾಯಾಧೀಶರು ಅನುಮತಿ ನೀಡಿದರೆ, ಸಂಪೂರ್ಣ ಸತ್ಯ ಬಯಲಾಗುತ್ತದೆ. ಇದು ಅತ್ಯಾಚಾರದ ಕೇಸ್​ ಆಗಿರುವ ಹಿನ್ನೆಲೆಯಲ್ಲಿ ಇನ್​ಕ್ಯಾಮೆರಾ ಪ್ರೊಸೀಡಿಂಗ್ಸ್​ (ನ್ಯಾಯಾಧೀಶರ ಕೊಠಡಿಯ ಒಳಗೆ- ಸಾರ್ವಜನಿಕವಾಗಿ ಅಲ್ಲದ ವಿಚಾರಣೆ) ನಡೆಯುತ್ತದೆ ಎಂದಿದ್ದಾರೆ.
ಇಂಥ ಸಂದರ್ಭದಲ್ಲಿ ಆರೋಪಿ ಎಷ್ಟೇ ಬಲಿಷ್ಠನಾಗಿದ್ದರೂ ವೈದ್ಯಕೀಯ ಪರೀಕ್ಷೆಗೆ ಒಳಪಡಲೇಬೇಕು, ಅದೇ ರೀತಿ ಯುವತಿಯನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಆಗ ಅತ್ಯಾಚಾರ ಮಾಡಿದವರು, ಅತ್ಯಾಚಾರಕ್ಕೆ ಒಳಗಾದವರ ಸತ್ಯ ಗೊತ್ತಾಗುತ್ತದೆ ಎಂದು ವಕೀಲ ಮಂಜುನಾಥ್​ ಹೇಳಿದರು.
ತನ್ನ ಮೇಲೆ ಅತ್ಯಾಚಾರ ಆಗಿರುವುದಾಗಿ ಯುವತಿ ಕೊಟ್ಟಿರುವ ದೂರು ಗಂಭೀರ ಸ್ವರೂಪದ್ದು ಆಗಿರುವ ಹಿನ್ನೆಲೆಯಲ್ಲಿ ಆರೋಪಿ ಯಾವುದೇ ರೀತಿಯಲ್ಲಿ ಪ್ರಭಾವ ಬೀರಿದರೂ ನ್ಯಾಯಾಲಯಕ್ಕೆ ಕೇಸ್​ ದಾಖಲು ಮಾಡಿದಾಗ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ವೈದ್ಯಕೀಯ ವರದಿ ಎಲ್ಲವನ್ನೂ ಬಿಚ್ಚಿಡಲಿದೆ ಎಂದಿದ್ದಾರೆ.
ಇಬ್ಬರು ವಕೀಲರು ಮಾತನಾಡಿರುವ ವಿಡಿಯೋ ಲಿಂಕ್​ ಇಲ್ಲಿದೆ ಕೇಳಿ…

ಅವಳೇನು ವಿಜಯ ಮಲ್ಯನಾ? ನೀರವ್​ ಮೋದಿನಾ? ಸಿಡಿ ಲೇಡಿ ಕೇಸ್​ನಲ್ಲಿ ಸಿದ್ದು ಗರಂ…

ನಾಳೆ ನ್ಯಾಯಾಧೀಶರ​ ಮುಂದೆ ಸಿಡಿ ಲೇಡಿ? ‘ಕಳ್ಳರ’ ಎದೆಯಲ್ಲಿ ನಡುಕ- ಬಯಲಾಗತ್ತಾ ಸತ್ಯ?

ಡಿಕೆಶಿಗಾಗಿಯೇ ಗೋವಾಕ್ಕೆ ಹೋಗಿದ್ದೆ ಎಂದ ಸಿಡಿ ಲೇಡಿ: ಯಾರ್ರಿ ಅವಳು ಅಂದ್ರು ‘ಬಂಡೆ’

ಸಿಡಿ ನಕಲಿ ಆದ್ಮೇಲೆ ಹೆಸರ‍್ಯಾಕೆ ಹೊರಬಂತು? ಜಾರಕಿಹೊಳಿ ವಿರುದ್ಧ ಕೈ ಕಾರ್ಯಕರ್ತರ ಪ್ರತಿಭಟನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + five =
Remember me
