ಬೆಂಗಳೂರು:ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಹೆಸರಲ್ಲಿ ನಕಲಿ ಫೇಸ್​ಬುಕ್ ಖಾತೆ ತೆರೆಯಲಾಗಿದ್ದು, ಹಣಕ್ಕಾಗಿ ಬೇಡಿಕೆ ಇಡಲಾಗಿದೆ.ಈ ಕುರಿತು ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಸಂತೋಷ್​ ಅವರು, ಹುಷಾರಾಗಿ ಇರುವಂತೆ ಸೂಚನೆ ನೀಡಿದ್ದಾರೆ. “ನನ್ನ ಹೆಸರಿನಲ್ಲಿ ನಕಲಿ ಖಾತೆ ಅಥವಾ ಕ್ಲೋನ್ ಖಾತೆಯನ್ನು ರಚಿಸಲಾಗಿದೆ. ಇದನ್ನು ತಿಳಿಯದ ಅನೇಕ ಮಂದಿ ನಾನೇ ಎಂದು ತಿಳಿದುಕೊಂಡಿದ್ದಾರೆ. ಹಣಕ್ಕಾಗಿ ಬೇಡಿಕೆ ಇಡಲಾಗುತ್ತಿದೆ. ದಯವಿಟ್ಟು ಇದನ್ನು ನಂಬಬೇಡಿ, ಹುಷಾರಾಗಿರಿ ” ಎಂದು ಬಿ.ಎಲ್. ಸಂತೋಷ್ ಹೇಳಿದ್ದಾರೆ.ನಕಲಿ ಐಡಿಯಲ್ಲಿ ಸಂತೋಷ್​ ಅವರ ಮೂಲ ಫೇಸ್​ಬುಕ್​ ಖಾತೆಯಲ್ಲಿ ಇರುವ ಫೋಟೋ ಬಳಸಿಕೊಳ್ಳಲಾಗಿದ್ದು, ಒಮ್ಮೆ ನೋಡಿದರೆ ನಿಜವಾಗಿಯೂ ಇದು ಸಂತೋಷ್​ ಅವರದ್ದೇ ಐಡಿ ಎನ್ನುವಂತೆ ಕಾಣಿಸುತ್ತಿದೆ. “ನನಗೆ ತುರ್ತಾಗಿ ಹದಿನೈದು ಸಾವಿರ ಹಣ ಬೇಕಿದೆ. ಎರಡೇ ತಾಸಿನಲ್ಲಿ ಹಿಂದಿರುಗಿಸುತ್ತೇನೆ ಎಂದು ಮೆಸೆಂಜರ್ ಮೂಲಕ ಸಂದೇಶ ರವಾನಿಸಲಾಗುತ್ತಿದೆ.ಪೋನ್ ಪೇ ಇದೆಯೇ? ಗೂಗಲ್ ಪೇ ಇದೆಯೇ? ಬೇಗ ಹಣ ಕಳಿಸಿ, ತುರ್ತು ಇದೆ ಎಂದೆಲ್ಲಾ ಮೆಸೇಜ್ ಮಾಡಲಾಗಿದೆ. ಇಂಥ ಸಂದೇಶದ ಕುರಿತು ಎಚ್ಚರದಿಂದಿರುವಂತೆ ಸಂತೋಷ್ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + eight =
Remember me
