ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ನಕಲಿ ವೆಬ್ ಸೈಟ್ ಗಳು, ಯೂಟ್ಯೂಬ್ ಗಳು ಹೀಗೆ ಹತ್ತು ಹಲವಾರು ನಕಲಿ ತಾಣಗಳು ಜನರಿಗೆ ತಪ್ಪು ಮಾಹಿತಿ ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ. ಮತ್ತೆ ಇನ್ನು ಕೆಲವರು ಇದನ್ನೇ ಅಸ್ತ್ರ ಮಾಡಿಕೊಂಡು ಜನರನ್ನೇ ವಂಚಿಸುತ್ತಿರುವುದರ ಜೊತೆಗೆ ಸುಲಿಗೆಗೆ ಇಳಿದಿವೆ.
ಇದೀಗ ನಕಲಿ ವೆಬ್‌ಸೈಟ್ ‘https://t.co/vFALk36xT9‘ ಸರ್ವಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ ಎಂದು ಹೇಳಿಕೊಳ್ಳುತ್ತಿದೆ ಮತ್ತು ಉದ್ಯೋಗಾವಕಾಶಗಳನ್ನು ನೀಡುತ್ತಿದೆ. ಇದರ ಜಾಡು ಹಿಡಿದು ಹೊರಟ ಪ್ರೆಸ್ ಇನ್ ಫಾರ್ಮೇಶನ್ ಬ್ಯೂರೋ (ಪಿಐಬಿ) ಫ್ಯಾಕ್ಟ್ ಚೆಟ್ ನಡೆಸಿದ್ದು, ಸರ್ವಶಿಕ್ಷಾ ಅಭಿಯಾನದ ಅಧಿಕೃತ ವೆಬ್‌ಸೈಟ್ ಯಾವುದು ಎಂದು ಕಂಡು ಹಿಡಿದಿದೆ.
ಪ್ರೆಸ್ ಇನ್ ಫಾರ್ಮೇಶನ್ ಬ್ಯೂರೋ ಮಾಡಿರುವ ಫ್ಯಾಕ್ಟ್ ಚೆಟ್ ಅನ್ನು ಕೂ ಮಾಡಿದ್ದು, ಮೇಲೆ ತಿಳಿಸಿರುವ ವೆಬ್ ಸರ್ಕಾರದ ಜೊತೆ ಸಂಯೋಜಿತವಾಗಿಲ್ಲ ಎಂದು ಹೇಳಿದೆ. ಅಧಿಕೃತ ವೆಬ್‌ಸೈಟ್:https://t.co/pCjN1ZGIMWಇದನ್ನು ಫಾಲೋ ಮಾಡುವಂತೆ ತಿಳಿಸಿದೆ.
ಈ ಕುರಿತು ಮಾಹಿತಿ ನೀಡುತ್ತಿರುವ ಶಿಕ್ಷಣ ಸಚಿವಾಲಯವು, ಅಮಾಯಕ ಅರ್ಜಿದಾರರನ್ನು ವಂಚಿಸಲುwww.sarvashiksha.online, https://samagra.shikshaabhiyan.co.in, https://shikshaabhiyan.org.inಈ ರೀತಿಯ ಹಲವಾರು ವೆಬ್‌ಸೈಟ್‌ಗಳನ್ನು ಸರ್ಕಾರದ ಯೋಜನೆ ಅನುಸಾರ ರಚಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯದ ಗಮನಕ್ಕೆ ಬಂದಿದೆ.
Koo App
A #Fake website ’https://t.co/vFALk36xT9’ is claiming to be the official website of Sarva Shiksha Abhiyan and is offering employment opportunities #PIBFactCheck ▶️This website is not associated with GOI ▶️Official website: https://t.co/pCjN1ZGIMW Read: https://t.co/Pi56ELk7hn
–PIB Fact Check (@PIBFactCheck)1 July 2022

ಈ ವೆಬ್‌ಸೈಟ್‌ಗಳು ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ಮೂಲ ವೆಬ್‌ಸೈಟ್‌ ರೀತಿಯ ವಿನ್ಯಾಸದ ಮೂಲಕ ಉದ್ಯೋಗಾವಕಾಶಗಳನ್ನು ನೀಡುವುದಾಗಿ ಹೇಳುತ್ತಾ ಉದ್ಯೋಗಾಕಾಂಕ್ಷಿಗಳನ್ನು ದಾರಿ ತಪ್ಪಿಸುತ್ತಿವೆ ಮತ್ತು ಅರ್ಜಿಗಳಿಗೆ ಪ್ರತಿಕ್ರಿಯಿಸಿದವರ ಬಳಿ ಹಣವನ್ನು ಕೇಳುತ್ತಿವೆ. ಆದರೆ, ಈ ವೆಬ್‌ಸೈಟ್‌ಗಳು ಉದ್ಯೋಗಗಳ ಭರವಸೆ ಮತ್ತು ನೇಮಕಾತಿ ಪ್ರಕ್ರಿಯೆಗೆ ಹಣದ ಬೇಡಿಕೆಯಿಡುವ ಇತರ ವೆಬ್‌ಸೈಟ್‌ಗಳು/ಸಾಮಾಜಿಕ ಮಾಧ್ಯಮ ಖಾತೆಗಳ ಬಗ್ಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಗಮನಕ್ಕೆ ಬಂದಿವೆ.
ಸಾರ್ವಜನಿಕರಿಗೆ ಈ ಮೂಲಕ, ಅಂತಹ ವೆಬ್‌ಸೈಟ್‌ಗಳಲ್ಲಿ ಉದ್ಯೋಗಾವಕಾಶಗಳಿಗಾಗಿ ಅರ್ಜಿ ಸಲ್ಲಿಸುವುದನ್ನು ತಪ್ಪಿಸಲು ಮತ್ತು ತಮ್ಮ ಸ್ವಂತ ಹಿತಾಸಕ್ತಿಗಳನ್ನು ಕಾಪಾಡಲು ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್‌ಸೈಟ್/ವೈಯಕ್ತಿಕ ವಿಚಾರಣೆ/ದೂರವಾಣಿ ಕರೆ/ಇ-ಮೇಲ್‌ಗೆ ಭೇಟಿ ನೀಡುವ ಮೂಲಕ ವೆಬ್‌ಸೈಟ್‌ಗಳು ಅಧಿಕೃತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿದೆ. ಈ ವೆಬ್‌ಸೈಟ್‌ಗಳಲ್ಲಿ ಅರ್ಜಿ ಸಲ್ಲಿಸುವ ಯಾವುದೇ ವ್ಯಕ್ತಿಯು ವೆಚ್ಚ ಮತ್ತು ಅದರ ಪರಿಣಾಮಗಳಿಗೆ ಜವಾಬ್ದಾರನಾಗಿರುತ್ತಾನೆ ಎಂದು ಸೂಚಿಸಿದೆ.
ದಕ್ಷಿಣ ಕನ್ನಡ, ಚಿತ್ರದುರ್ಗ ಅಂಗನವಾಡಿಗಳಲ್ಲಿ ಮಹಿಳೆಯರಿಗೆ ಭರಪೂರ ಅವಕಾಶ: ಅರ್ಜಿ ಆಹ್ವಾನ

ರಾಷ್ಟ್ರಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದು 98 ಮಂದಿ! ಸೆಲೆಕ್ಟ್​ ಆಗಿದ್ದು ಇಬ್ಬರು: ಇದೆಂಥ ಕುತೂಹಲ ಅಂತಿರಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
