ಹಾಸನ:ರಾಕಿಂಗ್ ಸ್ಟಾರ್ ಯಶ್ ಅವರ ತಂದೆ-ತಾಯಿ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆದ ಘಟನೆ ಹಾಸನ ಜಿಲ್ಲೆಯ ತಿಮ್ಮೇನಹಳ್ಳಿಯಲ್ಲಿ ನಡೆದಿದೆ.ದುದ್ದ ಹೋಬಳಿ ತಿಮ್ಮೇನಹಳ್ಳಿ ಗ್ರಾಮದ ಬಳಿ‌ ಯಶ್‌ ಅವರು ಜಮೀನು ಖರೀದಿಸಿದ್ದು, ಇಲ್ಲಿ ಈ ಘಟನೆ ನಡೆದಿದೆ.
ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ ಕುಟುಂಬದ ಜತೆ ತಿಮ್ಮೇನಹಳ್ಳಿ ಗ್ರಾಮದ ಜನ ಗಲಾಟೆಗೆ ಮುಂದಾಗಿರುವ ಘಟನೆ ಇದಾಗಿದೆ. ಯಶ್ ಅವರ ತಂದೆ ಅರುಣ್ ಕುಮಾರ್‌ ಹಾಗೂ ತಾಯಿ ಪುಷ್ಪ ಜಮೀನಿನ ಬಳಿ ಕೆಲಸ ಮಾಡುವಾಗ ಗ್ರಾಮಸ್ಥರ ನಡುವೆ ವಾಗ್ವಾದ ಶುರುವಾಗಿದ್ದು ಇದು ತಾರಕಕ್ಕೇರಿದೆ.
ಹಾಸನ ಜಿಲ್ಲೆಯ ತಿಮ್ಮೇನಹಳ್ಳಿಯಲ್ಲಿ ರಾಕಿಂಗ್‌ಸ್ಟಾರ್‌ ಯಶ್‌ ಅವರ ಪಾಲಕರು ಹಾಗೂ ಗ್ರಾಮಸ್ಥರ ನಡುವೆ ಜಮೀನಿಗೆ ಸಂಬಂಧಿಸಿದಂತೆ ನಡೆದ ಜಗಳ…pic.twitter.com/dIuafrDEey
— Vijayavani (@VVani4U)March 9, 2021

ಓಡಾಡುವ ಕಾಲುದಾರಿ ಜಾಗಕ್ಕಾಗಿ ರಮೇಶ್ ಎಂಬುವರೊಂದಿಗೆ ವಾಗ್ವಾದ ಶುರುವಾಯಿತು. ಇದು ಕೈ ಕೈ ಮಿಲಾಯಿಸೋ ಹಂತಕ್ಕೆ ತಲುಪಿತು. ನಂತರ ಗ್ರಾಮಸ್ಥರೆಲ್ಲರೂ ಸೇರಿ ಗಲಾಟೆ ಶುರು ಮಾಡಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಯಶ್‌ ಬೆಂಬಲಿಗರಿಂದ ಭಾರಿ ಚಕಮಕಿ ನಡೆಯಿತು.
ಘಟನೆ ನಡೆಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ದುದ್ದ ಪೊಲೀಸರು ಸಮಸ್ಯೆ ಬಗೆಹರಿಸಿದ್ದಾರೆ. ದುದ್ದ ಪೊಲೀಸ್ ಠಾಣೆಗೆ ಪುಷ್ಪಾ ಅವರು ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಿಗ್‌ ಬ್ರೇಕಿಂಗ್‌: ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಶಾಕ್‌- 11 ಜಿಲ್ಲೆಗಳಲ್ಲಿ 9 ಮನೆಯ ಮೇಲೆ ಎಸಿಬಿ ದಾಳಿ- ಇಲ್ಲಿದೆ ವಿವರ…

ಕೇಂದ್ರ ಸರ್ಕಾರದ ಭದ್ರತಾ ಪಡೆಯಲ್ಲಿ ಭರ್ಜರಿ ಪೊಲೀಸ್‌ ಹುದ್ದೆ; 2 ಸಾವಿರ ನೇಮಕಾತಿಗೆ ಆಹ್ವಾನ

ಭೀಕರ ಅಗ್ನಿ ದುರಂತ: ಲಿಫ್ಟ್‌ ಬಳಸಿ ಸಜೀವ ದಹನವಾದ 9 ಮಂದಿ- ಜೀವ ಉಳಿಸಹೋದ ನಾಲ್ವರ ದುರ್ಮರಣ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − 3 =
Remember me
