ಬೆಂಗಳೂರು:ಅನ್​ಲಾಕ್​ 4.0 ನಿನ್ನೆಯಷ್ಟೇ ಘೋಷಣೆಯಾಗಿದ್ದು, ಇವತ್ತಿನಿಂದ (ಜುಲೈ 19) ಜಾರಿಗೆ ಬರುವಂತೆ ಚಿತ್ರಮಂದಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಕೆಲವೊಂದು ಷರತ್ತು ವಿಧಿಸಿ ಅನುಮತಿ ನೀಡಲಾಗಿದ್ದು, ಚಿತ್ರರಂಗದವರ ಬಹುದೊಡ್ಡ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ.
ಚಿತ್ರಮಂದಿರ ಓಪನ್​ ಆಗಿರುವ ಖುಷಿಯಲ್ಲಿ ನಲಿದಾಡುತ್ತಿದ್ದ ಚಿತ್ರಪ್ರೇಮಿಗಳಿಗೆ ಈಗ ಒಂದು ಕಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ ಸರ್ಕಾರ ಅನುಮತಿ ನೀಡಿದರೂ ಇವತ್ತಿನಿಂದ (ಜುಲೈ 19) ಚಿತ್ರ ಪ್ರದರ್ಶನ ಶುರುವಾಗುವುದಿಲ್ಲ ಎಂದು ತಿಳಿದುಬಂದಿದೆ. ಚಿತ್ರಪ್ರದರ್ಶನಕ್ಕಾಗಿ ಇನ್ನೂ ಸ್ವಲ್ಪ ದಿನ ಜನರು ಕಾಯಲೇಬೇಕಾದ ಅನಿವಾರ್ಯತೆ ಉಂಟಾಗಿದೆ.
ಶೇ. 50ರಷ್ಟು ಸೀಟಿಂಗ್​ ಅವಕಾಶವನ್ನು ರಾಜ್ಯ ಸರ್ಕಾರವೇನೋ ನೀಡಿದೆ. ಆದರೆ ಹೊಸ ಸಿನಿಮಾ ರಿಲೀಸ್ ಆಗೋವರೆಗೂ ಓಪನ್ ಮಾಡಲ್ಲ ಎಂದು ಚಿತ್ರಮಂದಿರದ ಮಾಲೀಕರು ಹೇಳುತ್ತಿದ್ದಾರೆ. ಕಳೆದ ಬಾರಿ ರಿಲೀಸ್ ಆದ ಸಿನಿಮಾಗಳನ್ನೇ ಪ್ರದರ್ಶನ ಮಾಡಲಾಗಿತ್ತು. ಆ ತಂತ್ರ ವರ್ಕೌಟ್ ಆಗಿರಲಿಲ್ಲ, ಹಾಗಾಗಿ ಹೊಸ ಸಿನಿಮಾಗಾಗಿ ಮಾಲೀಕರು ಕಾಯುತ್ತಿದ್ದು, ಅಲ್ಲಿಯವರೆಗೂ ಚಿತ್ರಮಂದಿರ ತೆರೆಯದಿರಲು ನಿರ್ಧರಿಸಿದ್ದಾರೆ.ಮುಂದಿನ ವಾರ ಹೊಸ ಸಿನಿಮಾ ರಿಲೀಸ್ ಆದರೆ ಮಾತ್ರ ಚಿತ್ರಮಂದಿರಗಳು ತೆರೆಯಲಿವೆ.
ಪಿಯುಸಿ ಫಲಿತಾಂಶ ಪ್ರಕಟ- ರಿಸಲ್ಟ್​ ನೋಡುವುದು ಹೇಗೆ? ಎಷ್ಟು ಮಂದಿಗೆ ಎಷ್ಟು ಅಂಕ? ಇಲ್ಲಿದೆ ಮಾಹಿತಿ…

ಮದುವೆಯಾಗುವುದಾಗಿ ಸಂಬಂಧ ಬೆಳೆಸಿದ: ಕಿಡ್ನಿಯನ್ನು ಮಾರಿ ದುಡ್ಡಿನ ಜತೆ ಎಸ್ಕೇಪ್​ ಆದ!

ಮಗ ಕೇಂದ್ರ ಸಚಿವ, ಅಪ್ಪ-ಅಮ್ಮ ಕೃಷಿ ಕೂಲಿ ಕಾರ್ಮಿಕರು… ಸಿರಿವಂತಿಕೆ ಬೇಡವೇ ಬೇಡ ಎಂದರಿವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + three =
Remember me
