ಬೆಂಗಳೂರು:ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್​ ಅಹಮ್ಮದ್​ ಖಾನ್​ ಅವರ ಮನೆ ಹಾಗೂ ಅವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಗುರುವಾರ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. 40ಕ್ಕೂ ಅಧಿಕ ಎಸಿಬಿ ಅಧಿಕಾರಿಗಳ ತಂಡ ದಾಳಿ ಮಾಡಿತ್ತು.
ಫ್ರೆಜರ್​ ಟೌನ್​ನಲ್ಲಿರುವ ಜಮೀರ್ ಮನೆ, ಸಿಲ್ವರ್ ಓಕ್ ಅಪಾರ್ಟ್ಮೆಂಟ್, ಸದಾಶಿವ ನಗರದ ಗೆಸ್ಟ್ ಹೌಸ್, ಬನಶಂಕರಿಯಲ್ಲಿರುವ ಜಿ.ಕೆ ಅಸೋಸಿಯೇಟ್ಸ್ ಕಚೇರಿ ಹಾಗೂ ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಮೇಲೆ ದಾಳಿ ನಡೆಸಲಾಗಿತ್ತು.
ಕಾಂಗ್ರೆಸ್​ ಶಾಸಕ ಜಮೀರ್ ಅಹಮ್ಮದ್​ ಖಾನ್​ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಬಗ್ಗೆ ಆದಾಯ ತೆರಿಗೆ ಇಲಾಖೆ ಅನಾಮಧೇಯ ಮೂಲಗಳಿಂದ ಮಾಹಿತಿ ಸಂಗ್ರಹ ಮಾಡಿತ್ತು. ಜಮೀರ್​​ ಕಳೆದ ಹಣಕಾಸು ವರ್ಷದಲ್ಲಿ ಘೋಷಿಸಿಕೊಂಡ ಆಸ್ತಿಗಿಂತ ದುಪ್ಪಟ್ಟು ಆಸ್ತಿ ಹೊಂದಿರುವ ಬಗ್ಗೆ ಐಟಿ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಇಡಿ ದಾಳಿ ಮಾಡಿತ್ತು.
ಎಸಿಬಿ ಡಿವೈಎಸ್ ಪಿ ಕೆ. ರವಿಶಂಕರ್ ಅವರಿಂದ ದೂರು ದಾಖಲಿಸಿ ತನಿಖೆ ನಡೆಯುತ್ತಿದೆ. ಅಕ್ರಮ ಆಸ್ತಿ ಗಳಿಕೆ ಸಂಬಂಧ ಬಸವರಾಜ ಮಗದುಮ್ ಎನ್ನುವವರು ದೂರು ದಾಖಲಿಸಿದ್ದು, ಈ ತನಿಖೆ ಕೈಗೊಳ್ಳಲಾಗಿದೆ. ಇದೀಗ ಜಮೀರ್​ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಶಾಸಕ ಸ್ಥಾನಕ್ಕೆ ಕುತ್ತು ಬರಲಿದೆಯೇ ಎಂಬ ಮಾತು ಕೇಳಿಬರುತ್ತಿದೆ.
ಅಂದಹಾಗೆ, ಜಮೀರ್ ಅವರ ಆದಾಯ ಎಷ್ಟು.? ಅವರ ಒಟ್ಟು ಆಸ್ತಿ ಎಷ್ಟು.? ಅವರ ಒಟ್ಟು ವೆಚ್ಚ ಎಷ್ಟು.? ಇಲ್ಲಿದೆ ವಿವರಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಕಲಂ 13(1)(b)r/w13(2) ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದ್ದು, ಅದರ ವಿವರ ಹೀಗಿದೆ. ಇ.ಡಿ ದಾಖಲಿಸಿದ ಇಸಿಐಆರ್ ತನಿಖೆಯಲ್ಲಿ ಜಮೀರ್ ಅಹಮ್ಮದ್​ ಅವರು 2005 ರಿಂದ ಆಗಸ್ಟ್ 5, 2021 ರ ಅವದಿಯಲ್ಲಿ ತನ್ನ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಅಪಾರ ಪ್ರಮಾಣದ ಆಸ್ತಿ ಗಳಿಸಿದ್ದಾರೆ.
ಇವರು ಆದಾಯಕ್ಕಿಂತ 87,44,05,057 ರೂ (ಸುಮಾರು 87.45 ಕೋಟಿ ರೂ) ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ.
ಒಟ್ಟು ಆಸ್ತಿ-73,94,36,027 (73.94 ಕೋಟಿ ರೂ)ಆದಾಯ-4,30,48,790 (4.30 ಕೋಟಿ ರೂ)ವೆಚ್ಚ-17,80,18,000 (17.80 ಕೋಟಿ ರೂ)
ಇನ್​ಸ್ಟಾಗ್ರಾಂನಲ್ಲಿ 3 ತಿಂಗಳ ಲವ್​: ಪ್ರೀತಿಗೆ ಬಿದ್ದು ಜೀವ ಕಳೆದುಕೊಂಡ ಚಿಂತಾಮಣಿ ವಿದ್ಯಾರ್ಥಿನಿ

ತಾಳಿ ಕಟ್ಟಲು ವರ ಮುಂದಾದಾಗ, ಹಣೆಗೆ ಬೇರೊಬ್ಬ ಹಚ್ಚಿದ ಸಿಂಧೂರ! ಆಮೇಲಾದದ್ದು ದುರಂತ

ಪ್ರಿಯಕರನ ಒಲಿಸಿಕೊಳ್ಳಲು ಆತನ ಪತ್ನಿ, ತಾಯಿಯನ್ನು ಜೀವಂತ ಸುಟ್ಟು ಹಾಕಿದ ಎರಡು ಮಕ್ಕಳ ತಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 7 =
Remember me
