ಬೆಂಗಳೂರು:ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್ ನಟಿಯ ಅಣ್ಣನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.
ಪ್ರಸಿದ್ಧ ನಟಿಯ ಅಣ್ಣ ಕೀರ್ತಿಚಂದ್ರ ಎಂಬಾತನ‌ ವಿರುದ್ಧ ಯುವತಿ ದೂರು ನೀಡಿದ್ದು, ಆತನ ವಿರುದ್ಧ ಬೆಂಗಳೂರಿನ ಬಸವನಗುಡಿ‌ ಮಹಿಳಾ‌ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
ಶಾದಿ ಡಾಟ್​ ಕಾಮ್​ ಮೂಲಕ 2021 ರ ಮೇ ನಲ್ಲಿ ಕೀರ್ತಿಚಂದ್ರನಿಗೆ ಯುವತಿ ಪರಿಚಯವಾಗಿತ್ತು. ನಂತರ ಪರಸ್ಪರ ಮೊಬೈಲ್​ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಮದುವೆಯಾಗುವುದಾಗಿ ಯುವತಿಗೆ ಆತ ನಂಬಿಸಿದ್ದ.
ಇದಾದ ಬಳಿಕ ಕೀರ್ತಿಚಂದ್ರನ ಹುಟ್ಟುಹಬ್ಬಕ್ಕೆ ಯುವತಿ ಐ ಫೋನ್ ಗಿಫ್ಟ್ ನೀಡಿದ್ದಳು. ನಂತರ ಲ್ಯಾಪ್​ಟಾಪ್​ ಹಾಗೂ ಆ್ಯಪಲ್ ವಾಚ್ ಕೂಡ ನೀಡಿದ್ದಳು. ನಂತರ ಖಾಸಗಿ ಹೋಟೆಲ್ ಒಂದಕ್ಕೆ ಕರೆಸಿಕೊಂಡಿದ್ದ ಕೀತ್ರಿಚಂದ್ರ ಅಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಯುವತಿ ಆರೋಪಿಸಿದ್ದಾಳೆ.
ಇಷ್ಟಾದ ಬಳಿದ ಸಂಪರ್ಕಕ್ಕೆ ಸಿಗದೆ ಆತ ತಲೆಮರೆಸಿಕೊಂಡಿರುವುದಾಗಿ ದೂರಿರುವ ಯುವತಿ, ಅತ್ಯಾಚಾರದ ಕೇಸ್​ ದಾಖಲಿಸಿದ್ದಾಳೆ. ತನಿಖೆ ಮುಂದುವರೆದಿದೆ.
‘ಮೀ ಟೂ’ ಎಂದು ನಟನ ವಿರುದ್ಧ ರೀಲು ಬಿಟ್ಟಿದ್ದ ಖ್ಯಾತ ನಟಿಯಿಂದ ಪಿಕ್‌ಪಾಕೆಟ್‌- ಈಕೆಯ ಹಿಸ್ಟರಿ ಕೇಳಿ ಪೊಲೀಸರೇ ಸುಸ್ತು!

ಮದುವೆಗೆ ಒಪ್ಪಲಿಲ್ಲ ಎಂದು ಪ್ರಿಯಕರನ ಜತೆಗೂಡಿ ಅಪ್ಪ-ಅಮ್ಮನನ್ನೇ ಕೊಲೆ ಮಾಡಿದ ಬಾಲಕಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
