ಬೆಂಗಳೂರು:ಮೊಬೈಲ್​ ಕಳ್ಳತನ ಪ್ರಕರಣವೊಂದರಲ್ಲಿ ಲಂಚದ ಬೇಡಿಕೆ ಇಟ್ಟು, ಒಂದು ಲಕ್ಷ ರೂಪಾಯಿಯನ್ನು ಗುಳುಂ ಮಾಡಲು ನೋಡಿದ ಬೆಂಗಳೂರಿನ ಲೇಡಿ ಸಬ್​ ಇನ್ಸ್​ಪೆಕ್ಟರ್​ ಹಾಗೂ ಹೆಡ್ ಕಾನ್​ಸ್ಟೆಬಲ್​ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ಮೊಬೈಲ್​ ಕಳ್ಳತನಕ್ಕೆ ಸಂಬಂಧಿಸಿದಂತೆ ಎಫ್​ಐಆರ್ ದಾಖಲು ಮಾಡಲು ಒಂದು ಲಕ್ಷ ರೂಪಾಯಿ ಲಂಚ ಕೇಳಿರುವ ಆರೋಪ ಇವರ ಮೇಲಿದೆ. ಈ ಸಂಬಂಧ ಸಬ್ ಇನ್ಸ್‌ಪೆಕ್ಟರ್ ಸೌಮ್ಯಾ ಮತ್ತು ಹೆಡ್ ಕಾನ್​ಸ್ಟೆಬಲ್ ಜೆ.ಪಿ. ರೆಡ್ಡಿ ಅವರನ್ನು ಬಂಧಿಸಲಾಗಿದೆ.
ಒಂದು ಲಕ್ಷ ರೂಪಾಯಿ ಲಂಚದ ಬೇಡಿಕೆ ಒಡ್ಡಿರುವ ಬಗ್ಗೆ ಎಸಿಬಿ ಪೊಲೀಸರಿಗೆ ದೂರುದಾರರು ಮಾಹಿತಿ ನೀಡಿದ್ದರು. ಅಧಿಕಾರಿಗಳ ಸಲಹೆಯಂತೆ ದೂರುದಾರರು ಲಂಚದ ಹಣವನ್ನು ಕೊಡಲು ತೆರಳಿದ್ದಾಗ ದಾಳಿಮಾಡಿದ ಎಸಿಬಿ ಅಧಿಕಾರಿಗಳು ಇಬ್ಬರನ್ನೂ ಬಂಧಿಸಿದ್ದಾರೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಎಸಿಬಿ ಕಾರ್ಯಾಚರಣೆ ವೇಳೆ ಕಾನ್ಸ್​ಟೆಬಲ್​ ಓಡಿಹೋಗಲು ಯತ್ನಿಸಿ ಜಾರಿ ಬಿದ್ದಿದ್ದು, ಅವರ ಕಾಲಿನ ಮೂಳೆ ಮುರಿದಿದೆ. ತನಿಖೆ ಮುಂದುವರೆದಿದೆ.
ರಸ್ತೆಯೂ ಇರಲ್ಲ, ವಾಹನಗಳೂ ಚಲಿಸಲ್ಲ… ಎಲ್ಲೆಲ್ಲೂ ಹಸಿರು… ಇದು ರಾಜಕುವರನ ಭವಿಷ್ಯದ ನಗರಿ…

ಡಿವೋರ್ಸ್​ ಆದ ಕೆಲ ವರ್ಷಗಳ ನಂತರ ಜೀವನಾಂಶ ಕೇಳುವ ಅವಕಾಶವಿದೆಯೆ?

ಪುಣೆಯಿಂದ ಮೂರು ಟ್ರಕ್​ನಲ್ಲಿ ಹೊರಟಿವೆ ಕೋವಿಡ್​ ಲಸಿಕೆ: ರಾಜ್ಯಕ್ಕೆ ಎಷ್ಟು ಸಿಗಲಿದೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 1 =
Remember me
