ಬೆಂಗಳೂರು:ಡ್ರಗ್ಸ್​ ದಂಧೆಗೆ ಸಂಬಂಧಿಸಿದಂತೆ ಜೈಲುಶಿಕ್ಷೆ ಅನುಭವಿಸುತ್ತಿರುವ ನಶೆನಟಿ ರಾಗಿಣಿ ನಿನ್ನೆ ಬೆಂಗಳೂರಿನ ಪರಪ್ಪನಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ರಾತ್ರಿಯಿಡೀ ಸೊಳ್ಳೆಕಾಟ ಅನುಭವಿಸಿದ್ದಾರಂತೆ.
ರಾತ್ರಿ ಜೈಲಿನಲ್ಲಿನ ಊಟ‌ ಬಿಟ್ಟು ಸಿಸಿಬಿ ಅಧಿಕಾರಿಗಳು ನೀಡಿದ ಊಟ ಸೇವಿಸಿದ ರಾಗಿಣಿ ಹಾಗೂ ಇತರ ಆರೋಪಿಗಳು, ರಾತ್ರಿಯಿಡೀ ನಿದ್ದೆಯಿಲ್ಲದೇ ಒದ್ದಾಡಿದ್ದಾರೆ. ಪ್ರತಿದಿನವೂ ಎ.ಸಿ.ರೂಮಿನಲ್ಲಿ ಇರುತ್ತಿದ್ದ ನಟಿಗೆ ಇದೀಗ ಒಂದು ದಿಂಬು, ಚಾಪೆ, ಜಮಖಾನ, ಒಂದು ಬೆಡ್ ಶೀಟ್​ನಲ್ಲಿ ರಾತ್ರಿ ಕಳೆದಿದ್ದಾರೆ.
ರಾಗಿಣಿ ಮತ್ತು ಇನ್ನುಳಿದ ಆರೋಪಿಗಳು ಜೈಲಿನಲ್ಲಿರುವ ಕ್ವಾರಂಟೈನ್ ಸೆಂಟರ್​ನಲ್ಲಿ ಇರಿಸಲಾಗಿತ್ತು. ತುಂಬಾ ಸಮಯದವರೆಗೂ ಮಹಿಳಾ ವಾರ್ಡಿನ ಕ್ವಾರೆಂಟೈನ್ ರೂಮಿನಲ್ಲಿ ರಾಗಿಣಿ ಅಳುತ್ತಿದ್ದರು ಎಂದು ತಿಳಿದುಬಂದಿದೆ. ಬಳಿಕ ಜೈಲಿಗೆ ಬರುವ ಮುನ್ನ ತಂದಿದ್ದ ಪುಸ್ತಕವನ್ನು ಓದಿದ್ದಾರೆ. ತಡರಾತ್ರಿಯ ನಂತರ ನಿದ್ದೆ ಮಾಡಿದ್ದಾರೆ.
ಅವರಿಗೆ ಹಾಗೂ ಇತರ ಆರೋಪಿಗಳಿಗೆ ಇಂದು ಬೆಳಗ್ಗೆ ಉಪಾಹಾರಕ್ಕೆ ಚಿತ್ರಾನ್ನ ಮತ್ತು ಅವಲಕ್ಕಿಯನ್ನು ನೀಡಲಾಗಿದೆ.
ಇದನ್ನೂ ಓದಿ:ರಾಗಿಣಿ, ರಾಹುಲ್‌ಗೆ ಜೈಲಿನಲ್ಲೀಗ ಸಹಕೈದಿಗಳದ್ದೇ ಭಯ!
ಈ ಮಧ್ಯೆ, ತಮಗೆ ಲೋ ಶುಗರ್​ ಹಾಗೂ ಬೆನ್ನುನೋವು ಎಂದು ಪದೇ ಪದೇ ಹೇಳುತ್ತಿರುವ ರಾಗಿಣಿ, ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವಂತೆ ಗೋಗರೆಯುತ್ತಿದ್ದಾರೆ. ನಿನ್ನೆ ಈಕೆಯ ಪರ ವಕೀಲರು ಕೂಡ ಕೋರ್ಟ್​ಗೆ ಇದನ್ನೇ ಹೇಳಿ, ಆಸ್ಪತ್ರೆಗೆ ದಾಖಲಿಸುವಂತೆ ಮನವಿ ಮಾಡಿಕೊಂಡಿದ್ದರು. ಜೈಲಿಗಿಂತ ಆಸ್ಪತ್ರೆಯೇ ಬೆಸ್ಟ್​ ಎಂದುಕೊಂಡಿರುವ ಈ ನಟಿಯ ಆಸೆ ಪೂರೈಸುತ್ತದೆಯೇ ಕಾದುನೋಡಬೇಕಿದೆ. ಲೋ ಶುಗರ್​ ಎಂದು ಹೇಳಿದ್ದ ಹಿನ್ನೆಲೆಯಲ್ಲಿ ರಾಗಿಣಿಗೆ ವೈದ್ಯರು ಡ್ರಿಪ್ಸ್ ಹಾಕಿದ್ದಾರೆ ಎನ್ನಲಾಗಿದೆ.
ಬೇರೆ ಯಾರ ಜತೆಯೂ ಮಾತಾಡದೆ ಸುಮ್ಮನೆ ಕುಳಿತು ಮೌನಕ್ಕೆ ಶರಣಾಗಿರುವ ರಾಗಿಣಿಯನ್ನು ನೋಡಲು ಸದ್ಯ ಜೈಲಿನ ನಿಯಮದಂತೆ ಯಾರಿಗೂ ಬಿಡುತ್ತಿಲ್ಲ.
ಇವರಿಗೆ ನಿನ್ನೆ 1ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಅಲ್ಲಿಯವರೆಗೆ ಜೈಲಿನಲ್ಲಿ ಇರಲಿದ್ದಾರೆ.(ದಿಗ್ವಿಜಯ ನ್ಯೂಸ್​)
ದಿನೇ ದಿನೇ ಏರುತ್ತಿರುವ ಬೆಲೆ: ಈರುಳ್ಳಿ ರಫ್ತಿಗೆ ನಿಷೇಧ ಹೇರಿದ ಕೇಂದ್ರ

ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್​ ಹತ್ತಿದ ಕರೊನಾ ಸೋಂಕಿತೆ ದೆಹಲಿಯಲ್ಲಿ! ಅಸಲಿಯತ್ತೇನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × five =
Remember me
