ತುಮಕೂರು:ಇತ್ತೀಚೆಗೆ ದಂಪತಿಯ ನಡುವೆ ತೀರಾ ಚಿಕ್ಕಪುಟ್ಟ ವಿಷಯಗಳೂ ಕೋರ್ಟ್​ ಮೆಟ್ಟಿಲೇರಿ ವಿಚ್ಛೇದನಕ್ಕೆ ತಿರುಗುತ್ತಿವೆ. ಎಷ್ಟೋ ಸಂದರ್ಭಗಳಲ್ಲಿ ದಂಪತಿಯ ನಡುವೆ ಸಾಮರಸ್ಯ ಮೂಡಿಸುವ ಯತ್ನಗಳು ನಡೆಯುವುದೇ ಇಲ್ಲವಾದ್ದರಿಂದ ಮೊಂಡು ಹಠಕ್ಕೆ ಬಿದ್ದು ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ.
ಆದರೆ ಇಂಥವರ ಮನಸ್ಸನ್ನು ಪರಿವರ್ತಿಸಿ, ಒಡೆದು ಹೋಗುತ್ತಿರುವ ದಾಂಪತ್ಯ ಜೀವನವನ್ನು ಪುನಃ ಒಂದು ಮಾಡಿದೆ ತುಮಕೂರಿನ ಲೋಕ್​ ಅದಾಲತ್​. ಡಿವೋರ್ಸ್​ ಪಡೆಯಲೆಂದು ಬಂದ ಐದು ಜೋಡಿಗಳು ಪುನಃ ಒಂದಾಗಿ ಹೋಗಿವೆ. ತಮ್ಮ ತಮ್ಮ ನಡುವೆ ಇದ್ದ ಚಿಕ್ಕಪುಟ್ಟ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಿಕೊಂಡು ಈ ಐದು ಜೋಡಿ ಪುನಃ ಒಂದಾಗಿವೆ.
ವಕೀಲರು ಹಾಗೂ ನ್ಯಾಯಾಧೀಶರ ಸಲಹೆ ಮೇರೆಗೆ ದಂಪತಿ ಒಂದಾಗಿದ್ದು, ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ಲೋಕ್ ಅದಾಲತ್​ನಲ್ಲಿ ಈ ಘಟನೆ ನಡೆದಿದೆ. ಇವರಿಗೆ ಕೌನ್ಸೆಲಿಂಗ್​ ಮಾಡಿದ ನಂತರ ತಮ್ಮ ತಪ್ಪಿನ ಅರಿವಾಗಿದ್ದು, ದಂಪತಿ ಪುನಃ ಪರಸ್ಪರ ಹಾರ ಬದಲಾಯಿಸಿಕೊಂಡು ಒಂದಾಗಿದ್ದಾರೆ.
ದಾಂಪತ್ಯ ಒಡೆದು ಹೋದ ಮೇಲೆ ತಮ್ಮ ಮಕ್ಕಳ ಭವಿಷ್ಯ ಇನ್ನೇನು ಎಂದು ಚಿಂತಿಸುತ್ತಿದ್ದ ಕುಟುಂಬಸ್ಥರೂ ಈಗ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.(ದಿಗ್ವಿಜಯ ನ್ಯೂಸ್​)
ಕಾಂಗ್ರೆಸ್​ನ ‘ಸ್ವಾತಂತ್ರ್ಯ ನಡಿಗೆ’ಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಬರುತ್ತಿರುವಿರಾ? ವಿಶೇಷ ಸೌಲಭ್ಯದ ಮಾಹಿತಿ ಇಲ್ಲಿದೆ…

ರಾಷ್ಟ್ರಪತಿ ಪದಕ ಪುರಸ್ಕೃತರ ಪಟ್ಟಿ ಬಿಡುಗಡೆ: ರಾಜ್ಯದ 18 ಪೊಲೀಸ್​ ಅಧಿಕಾರಿ, ಸಿಬ್ಬಂದಿಗೆ ಮೆರಿಟೋರಿಯಸ್​ ಅವಾರ್ಡ್​

ನೋವಿನ ನಡುವೆಯೂ ಭಾರತಕ್ಕೆ ಚಿನ್ನ ಕೊಟ್ಟ ಸಿಂಧುವಿಗಿಲ್ಲ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ಆಡುವ ಭಾಗ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 3 =
Remember me
