ಬೆಂಗಳೂರು: ಪ್ಯಾಂಟ್‌, ಷರ್ಟ್‌ ಧರಿಸಿ ಕಾರಿನಲ್ಲಿ ಬಂದ ಯುವತಿಯೊಬ್ಬಳು ಮನೆಯ ಎದುರಿಗಿರುವ ಕುಂಡಗಳನ್ನು ಕದ್ದು ಕಾರಿನಲ್ಲಿ ಪರಾರಿಯಾಗಿದ್ದ ಘಟನೆ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು.
ಸಂಜಯ ನಗರ ಠಾಣೆಯ ಆರ್‌ಎಂವಿ ಎರಡನೇ ಸ್ಟೇಜ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಕಾವ್ಯ ಸೆಲ್ವಂ ಎನ್ನುವವರು ಮನೆಯಲ್ಲಿರುವ ಹೂಕುಂಡಗಳು ದಿಢೀರ್‌ ನಾಪತ್ತೆಯಾಗಿದ್ದವು. ಈ ಕಳ್ಳತನ ಮಾಡಿರುವವರು ಯಾರು ಎಂದು ನೋಡುವ ಸಲುವಾಗಿ ಅವರು ಸಿಸಿಟಿವಿ ಪರಿಶೀಲನೆ ಮಾಡಿದ್ದರು. ಆ ಸಿಸಿಟಿವಿಯಲ್ಲಿ ಐಷಾರಾಮಿ ಕಾರಿನಲ್ಲಿ ಬಂದ ಯುವತಿಯೊಬ್ಬಳು ಹೂವಿನ ಕುಂಡಗಳನ್ನು ಕದಿಯುತ್ತಿರುವ ದೃಶ್ಯ ಸೆರೆಯಾಗಿತ್ತು.
ಸಿಸಿಟಿವಿಯ ದೃಶ್ಯಾವಳಿಗಳನ್ನು ಟ್ವಿಟರ್‌ನಲ್ಲಿ ಹಾಕಿಕೊಂಡಿದ್ದ ಕಾವ್ಯಾ ಅವರು, ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ತನಿಖೆ ನಡೆಸಲು ಹೇಳಿದ್ದರು. ನಂತರ ಕಾರಿನ ನಂಬರನ್ನೂ ಕೂಡ ಅದರಲ್ಲಿ ಹಾಕಿದ್ದರು.
ಯುವತಿ ಕಳ್ಳತನ ಮಾಡುವ ಉದ್ದೇಶದಿಂದ ಕಾರನ್ನು ರಸ್ತೆಯ ಮಧ್ಯದಲ್ಲಿ ತಂದು ನಿಲ್ಲಿಸಿದ್ದಳು. ಕಾರಿನಲ್ಲಿ ಡ್ರೈವರ್‌ ಇದ್ದಾನೆ. ಈ ಯುವತಿ ಅತ್ತ ಇತ್ತ ನೋಡುತ್ತಾ ಕಳ್ಳರಂತೆ ಬಂದು ಎರಡು ಹೂಕುಂಡಗಳನ್ನು ಕದ್ದು ಕಾರಿನ ಡಿಕ್ಕಿಯಲ್ಲಿಟ್ಟುಕೊಂಡಿದ್ದಾಳೆ. ಇವಿಷ್ಟೂ ಸಿಸಿಟಿವಿಯಲ್ಲಿ ದಾಖಲಾಗಿದ್ದನ್ನು ಪೊಲೀಸರು ಗಮನಿಸಿ ಕಾರಿನ ನಂಬರ್‌ ಸುಳಿವು ಹಿಡಿದು ಹೊರಟಿದ್ದರು. ನಂತರ ಬೆಂಗಳೂರಿನ ಎಲೆಕ್ಟ್ರಾನಿಕ್‌ ಸಿಟಿಯ ಬಳಿ ಇರುವ ಮಹಿಳೆ ಹೀಗೆ ಮಾಡಿದ್ದು ತಿಳಿಯಿತು.
ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆಕೆಯೇ ಕುಂಡ ಕದ್ದಿರುವುದು ದೃಢಪಟ್ಟಿತು. ಕೊನೆಗೆ ಕುಂಡಗಳನ್ನು ಕಾವ್ಯ ಅವರಿಗೆ ಹಿಂದಿರುಗಿಸಿರುವ ಮಹಿಳೆ ಕ್ಷಮೆ ಕೋರಿದ್ದಾರೆ. ಕಾವ್ಯಾ ಕೂಡ ತಾವು ಹಾಕಿದ್ದ ಕೇಸನ್ನು ಹಿಂದಕ್ಕೆ ಪಡೆದುಕೊಂಡಿದ್ದಾರೆ.
ಇಬ್ಬರು ಯುವತಿಯರ ಜತೆ ಕುಡಿದು ಮತ್ತೇರಿಸಿಕೊಂಡು ಕಿರಿಕ್‌! ನಟ ರಕ್ಷಿತ್‌ ಸೇರಿದಂತೆ ಏಳು ಮಂದಿ ವಿರುದ್ಧ ಎಫ್‌ಐಆರ್‌

VIDEO: ಮಾಸ್ಕ್‌ ಹಾಕಿಕೊಂಡೇ ಊಟ ಮಾಡಿದ ಮಾಜಿ ಸಿಎಂ ಸಿದ್ದರಾಮಯ್ಯ- ವಿಡಿಯೋ ವೈರಲ್‌

Sign in to your account
Please enter an answer in digits:9 − eight =
Remember me
