ಹಾಸನ: ಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನ ಹಾಕಿ ಒಂದೂವರೆ ಲಕ್ಷ ಹಣ ಪೀಕಿ ಎಸ್ಕೇಪ್​ ಆಗಿದ್ದಾನೆ ಕಳ್ಳ ಸ್ವಾಮೀಜಿ! ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮನೆಯ ತೋಟದಲ್ಲಿ ನಿಧಿ ಇದೆ ಎಂದು ಆಸೆ ತೋರಿಸಿ ಹಣ ಪೀಕಿ ಸ್ವಾಮೀಜಿ ಎಸ್ಕೇಪ್​ ಆಗಿದ್ದು, ಪೊಲೀಸರು ಈತನಿಗಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಈ ಕಳ್ಳನನ್ನು ಮಂಜುನಾಥ್​ ಎಂದು ಗುರುತಿಸಲಾಗಿದೆ. ಮಂಜೇಗೌಡ ಹಾಗೂ ಪುತ್ರ ಪುನೀತ್ ಎಂಬುವರಿಗೆ ಪಂಗನಾಮ ಹಾಕಿದ್ದಾನೆ ಈತ.
ರಾತ್ರೋ ರಾತ್ರಿ ನಿಧಿ ಹುಡುಕಾಟ ನಡೆದಿದೆ. ಈ ಹುಡುಕಾಟದಲ್ಲಿ ಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನ ಹಾಕಿ ವಿಗ್ರಹ ಸಿಕ್ಕಿರುವುದಾಗಿ ಹೇಳಿ ನಂಬಿಸಿದ್ದಾನೆ. ಕಬ್ಬಿಣದ ವಿಗ್ರಹಕ್ಕೆ ಚಿನ್ನದ ಲೇಪನ ಹಾಕಿ ಭೂಮಿಯೊಳಗೆ ಹೂತಿಟ್ಟು ಮತ್ತೆ ಅದನ್ನೇ ತೆಗೆದು ಕೊಡುವ ವಿಡಿಯೋ ದಿಗ್ವಿಜಯ ನ್ಯೂಸ್​ಗೆ ಲಭ್ಯವಾಗಿದೆ. ವಿಗ್ರಹ ತೆಗೆಯುವ ವೇಳೆ ಮಹಿಳೆ ಕೈ ಕೊಯ್ದು ರಕ್ತ ಸೋರಿಸಿದ್ದಾನೆ ಈತ.
ಅರಕಲಗೂಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ ಎಂದು ಮಂಜೇಗೌಡನ ಮಗ ಪುನೀತ್ ಮಾಹಿತಿ ನೀಡಿದ್ದಾರೆ.
ಕಳ್ಳ ಸ್ವಾಮೀಜಿ ಮಂಜುನಾಥ್ ಮೂಲತಃ ದೊಡ್ಡಹಳ್ಳಿ ಗ್ರಾಮದವನಾಗಿದ್ದು, ಈತನ ಅಸಲಿ ವಿಷಯ ಬಹಿರಂಗ ಆಗುತ್ತಿದ್ದಂತೆಯೇ ಓಡಿಹೋಗಿದ್ದಾನೆ. ಇದೇ ರೀತಿ ವಿವಿಧ ಮಂದಿಗೆ ಒಟ್ಟು ಐದು ಲಕ್ಷ ಮೋಸ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿದೆ.(ದಿಗ್ವಿಜಯ ನ್ಯೂಸ್​)
ವಿಡಿಯೋ ಇಲ್ಲಿದೆ ನೋಡಿ:

ಭಾನುವಾರ, 11ರಿಂದ1, ಬಿಳಿ ಬಣ್ಣ…. ಈ ಕಳ್ಳನ ಕಥೆಯೇ ರೋಚಕ: 5ನೇ ವಾರ ಕೈಕೊಟ್ಟಿಯೇ ಬಿಡ್ತು ಅದೃಷ್ಟ!

ಜ್ಞಾನವಾಪಿ ಕೇಸ್​ ವಾಪಸ್​ ಪಡೆಯದಿದ್ರೆ ನಿಮ್​ ಕಥೆ ಕನ್ಹಯ್ಯಾಲಾಲ್​ನಂತೆ ಆಗತ್ತೆ: ಪಾಕ್​ನಿಂದ ಬೆದರಿಕೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × four =
Remember me
