ಬೆಂಗಳೂರು:ಬೆಂಗಳೂರಿನಲ್ಲಿ ಕಾಲ್ ಸೆಟರ್ ತೆರೆದು ಅಮೆರಿಕದ ಪ್ರಜೆಗಳನ್ನು ವಂಚಿಸುತ್ತಿದ್ದ ಜಾಲ ಬಯಲಿಗೆ ಬಂದಿದೆ. ವೈಟ್ ಫೀಲ್ಡ್ ಮತ್ತು ಮಹದೇವಪುರ ಬಳಿ ಎರಡು ಕಾಲ್ ಸೆಂಟರ್​ಗಳನ್ನು ನಡೆಸುತ್ತ, ವಂಚಿಸುತ್ತಿದ್ದ ಭಯಾನಕ ಜಾಲವಿದು.
ಇವರನ್ನೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರತೀಕ್. ರಿಷಿ ವ್ಯಾಸ್​, ಪರೀಕ್ ವಿರೇನ್. ಹೇತ್ ಪಟೇಲ್. ಕರಣ್ ಲಾಡನ್, ಸೈಯದ್ ಇಬ್ರಾತ್ ಬಂಧಿತ ಅರೋಪಿಗಳು.
ಅಮೆರಿಕದ ಪ್ರಜೆಗಳನ್ನು ಗುರುತಿಸಿ, ಕಾಲ್ ಮಾಡುತ್ತಿದ್ದರು ಈ ಅರೋಪಿಗಳು. ಅಲ್ಲಿನ ಪ್ರಜೆಗಳ ವಿವರ ಹಾಗೂ ಬ್ಯಾಂಕ್ ಮಾಹಿತಿ ಪಡೆದು ವಂಚನೆ ಮಾಡಲಾಗುತ್ತಿತ್ತು.
ಮೂಲತಃ ಗುಜರಾತ್ ಮೂಲದ ಒಟ್ಟು ಹನ್ನೊಂದು ಅರೋಪಿಗಳು ಅರೆಸ್ಟ್ ಆಗಿದ್ದಾರೆ. ಎಥಿಕಲ್ ಇನ್​ಫೋ ಕಂಪೆನಿ ಪ್ರೈವೇಟ್​ ಲಿಮಿಟೆಡ್​ ಹೆಸರಿನಲ್ಲಿ ಎರಡು ಕಡೆ ಕಾಲ್​ ಸೆಂಟರ್​ ನಡೆಸುತ್ತಿದ್ದರು. ಎರಡೂ ಕಡೆ ಸೇರಿ ಒಟ್ಟು 243 ಕಂಪ್ಯೂಟರ್ ಗಳು ವಶಕ್ಕೆ ಪಡೆದುಕೊಳ್ಳಲಾಗಿದೆ.
ಇವರ ಕಂಪೆನಿಯಲ್ಲಿ ನೂರಾರು ಜನರನ್ನು ಕೆಲಸಕ್ಕೆ ಇದ್ದರು. ಆದರೆ ಅಚ್ಚರಿಯ ಸಂಗತಿ ಎಂದರೆ, ನೌಕರರಿಗೆ ಇಲ್ಲಿ ವಂಚನೆ ನಡೆಯುತ್ತಿದೆ ಅನ್ನೊದು ಗೊತ್ತೇ ಇರಲಿಲ್ಲ. ಬದಲಿಗೆ ಬಾಸ್ ಗಳು ಹೇಳಿದ್ದ ಕೆಲಸವನ್ನು ಮಾತ್ರ ಮಾಡುತಿದ್ದರು. ಸಂಬಳವೂ ಚೆನ್ನಾಗಿ ಬರುತ್ತಿದ್ದರಿಂದ ನೌಕರರಿಗೆ ತಾವು ಮಾಡುತ್ತಿರುವ ಕೆಲಸದ ಬಗ್ಗೆ ವಿಚಾರಿಸಲು ಹೋಗಿರಲಿಲ್ಲ. ನೌಕರರಿಗೆ ನಗದು ರೂಪದಲ್ಲೆ ಸಂಬಳ ನೀಡಲಾಗುತ್ತಿತ್ತು. ಇದೀಗ ಈ ಎಲ್ಲಾ ಉದ್ಯೋಗಿಗಳ ಸ್ಥಿತಿ ಅತಂತ್ರವಾಗಿದೆ.
ಆಲ್ಟ್​ ನ್ಯೂಸ್​ನ ಮೊಹಮ್ಮದ್​ ಜುಬೇರ್​ಗೆ ‘ಸುಪ್ರೀಂ’ನಿಂದ ಜಾಮೀನು- ಆದ್ರೂ ಸದ್ಯ ಇಲ್ಲ ಬಿಡುಗಡೆ

ಕಾಶ್ಮೀರಿ ಪಂಡಿತರ ನರಮೇಧವನ್ನು ಗೋಕಳ್ಳರ ಮೇಲಿನ ದಾಳಿಗೆ ಹೋಲಿಸಿದ ನಟಿಗೆ ಕೋರ್ಟ್​ನಿಂದ ಮುಖಭಂಗ

ಜಮೀರ್​ ವಿರುದ್ಧ ಎಫ್​ಐಆರ್​: ಶಾಸಕ ಸ್ಥಾನಕ್ಕೆ ಕುತ್ತು? ಇ.ಡಿ ಕೊಟ್ಟಿರೋ ಶಾಕಿಂಗ್​ ಆಸ್ತಿ ಡಿಟೇಲ್ಸ್​ ನೋಡಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 2 =
Remember me
