ಬೆಂಗಳೂರು:ಸಾಮಾಜಿಕ ಜಾಲತಾಣದಲ್ಲಿ ಯಾರ್ಯಾರನ್ನೋ ಫ್ರೆಂಡ್‌ ಮಾಡಿಕೊಳ್ಳಬೇಡಿ, ನಂಬಿಗಸ್ಥಂತೆ ವರ್ತಿಸಿ ಆಮಿಷ ತೋರಿಸುವವರನ್ನು ನಂಬಬೇಡಿ ಎಂದು ಯಾರು ಎಷ್ಟೇ ಹೇಳಿದರೂ ಅದು ಕೆಲವರ ಕಿವಿಗೆ ಹೋಗುತ್ತಲೇ ಇಲ್ಲ. ದಿನನಿತ್ಯವೂ ಲಕ್ಷ ಲಕ್ಷ ರೂಪಾಯಿಗಳನ್ನು ಕಳೆದುಕೊಂಡು ಗೋಳೋ ಎನ್ನುವವರ ಅದರಲ್ಲಿಯೂ ಮಹಿಳೆಯರ ಸಂಖ್ಯೆ ಹೆಚ್ಚುತ್ತಲೇ ಇದೆ.
ಅಂಥದ್ದೇ ಒಂದು ಘಟನೆ ಬೆಂಗಳೂರಿನಲ್ಲಿ ನಡೆದಿದೆ. 50 ವರ್ಷದ ಶ್ರೀಮಂತ ವಿಧವೆಯೊಬ್ಬರಿಗೆ ಹೃದಯ ಚಿಕಿತ್ಸೆಯ ಅಗತ್ಯವಿತ್ತು. ಅವರು ತಜ್ಞರನ್ನು ಇನ್‌ಸ್ಟಾಗ್ರಾಂನಲ್ಲಿ ಹುಡುಕಿದ್ದಾರೆ. ಆಗ ಅವರಿಗೆ ಸಿಕ್ಕಿದ್ದು ಮಾರ್ಬೀಸ್‌ ಹಾರ್ಮಾನ್‌ ಎಂಬಾತ. ಆತನ ಪ್ರೊಫೈಲ್‌ನಲ್ಲಿ ಹೃದಯ ತಜ್ಞ ಎಂದು ಇರುವುದನ್ನು ನೋಡಿ, ಆತನನ್ನು ಇನ್‌ಸ್ಟಾಗ್ರಾಂನಲ್ಲಿಯೇ ಪರಿಚಯ ಮಾಡಿಕೊಂಡಿದ್ದಾರೆ ಮಹಿಳೆ. ಕುಳಿತಲ್ಲಿಯೇ ಲಡ್ಡು ಬಾಯಿಗೆ ಬಿದ್ದರೆ ಖದೀಮ ಸುಮ್ಮನೆ ಇರ್ತಾನೆಯೆ?ತಾನು ಹೃದಯ ತಜ್ಞ. ನಿಮ್ಮ ಕಾಯಿಲೆ ವಾಸಿ ಮಾಡುತ್ತೇನೆ. ಲಂಡನ್‌ನಲ್ಲಿ ಇದ್ದೇನೆ ಎಂದಿದ್ದಾನೆ. ಮಹಿಳೆಗೆ ತಾವು ಮೋಸ ಹೋಗುತ್ತಿರುವುದು ತಿಳಿಯಲೇ ಇಲ್ಲ. ಆತನ ಮಾತನ್ನು ನಂಬಿಬಿಟ್ಟಿದ್ದಾರೆ.
ಕೆಲ ದಿನಗಳ ನಂತರ ಮಹಿಳೆಗೆ ಈತ ಲಂಡನ್‌ ಕರೆನ್ಸಿ ಹಾಗೂ ಗಿಫ್ಟ್ ಕಳಿಸಿರುವುದಾಗಿ ಹೇಳಿದ್ದ. ಆದರೆ ಮಹಿಳೆ ಅದನ್ನು ತರಲು ಏರ್‌ಪೋರ್ಟ್‌ಗೆ ಹೋಗಿರಲಿಲ್ಲ. ಎರಡು ದಿನಗಳ ನಂತರ ಕಸ್ಟಮ್ಸ್ ಅಧಿಕಾರಿಗಳು ಎಂದು ಹೇಳಿ ಮಹಿಳೆಗೆ ಕರೆ ಹೋಗಿದೆ. ನೀವು ಗಿಫ್ಟ್ ಸ್ವೀಕರಿಸಿಲ್ಲ, ಆದ್ದರಿಂದ ಹಣಕಾಸು ಸಚಿವಾಲಯದಿಂದ ನೋಟಿಸ್ ಬಂದಿದೆ ಎಂದು ಹೇಳಿ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಸಹಿ ಇರುವ ನೋಟಿಸ್‌ ತೋರಿಸಿದ್ದಾನೆ.
ಇದರಿಂದ ಮಹಿಳೆ ಗಾಬರಿಗೊಂಡು ಏನು ಮಾಡಬೇಕು ಈಗ ಎಂದಿದ್ದಾರೆ. ಆ ಆಸಾಮಿ ಇದಕ್ಕಾಗಿ ಹಣ ಕಟ್ಟಬೇಕು. ಉಡುಗೊರೆ ಜತೆಗೆ ಕರೆನ್ಸಿ ಇರುವುದರಿಂದ 60 ಲಕ್ಷ ರೂಪಾಯಿ ಮತ್ತು ಕರೆನ್ಸಿ ಎಕ್ಸ್​ಚೇಂಜ್​ ಪ್ರಕ್ರಿಯೆಯನ್ನೂ ಸೇರಿಸಿ 80 ಲಕ್ಷ ರೂಪಾಯಿ ಆಗುತ್ತದೆ ಎಂದಿದ್ದಾರೆ. ಗಲಿಬಿಲಿಗೊಂಡ ಮಹಿಳೆ ಪೊಲೀಸರಿಗೆ ಹೆದರಿ ಹಣ ಕೊಟ್ಟುಬಿಟ್ಟಿದ್ದಾರೆ. ನಂತರ ತಾವು ಮೋಸ ಹೋಗಿರುವುದು ತಿಳಿದಿದ್ದು, ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ. ಸದ್ಯ ಇದರ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.
ಅವಳು ಗಂಡ- ಇವಳು ಹೆಂಡತಿ! ಏಳು ವರ್ಷ ‘ಸಂಸಾರ’ ಮಾಡಿ ಓಡಿಹೋಗಿ ಮದುವೆಯಾದ ಸ್ನೇಹಿತೆಯರು…

ಶಾಲಾ ಪ್ರವೇಶಕ್ಕೆ ಕ್ಷಣಗಣನೆ… ಶಿಕ್ಷಣ ಇಲಾಖೆ ಹೇಳಿರುವ ಸಂಪೂರ್ಣ ಡಿಟೇಲ್ಸ್‌ ಇಲ್ಲಿದೆ….

ಸಂಚಾರಿ ವಿಜಯ್‌ ಅವರ ಅಂಗಾಂಗ ದಾನ ಹೇಗೆ? ಸಂಪೂರ್ಣ ಮಾಹಿತಿ ನೀಡಿದೆ ಆರೋಗ್ಯ ಇಲಾಖೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
