ಬೆಂಗಳೂರು:ಎಲ್ಲರಂತೆ‌ ನಾನಲ್ಲ, ನೀವು‌‌ ಹೇಳಿದ್ದೆನ್ನೆಲ್ಲ ಕೇಳಿಸಿಕೊಂಡು ಹೋಗುವವನಲ್ಲ. ನಾನೇ‌ ಬೇರೆ,‌ ನನ್ನ ಆಡಳಿತದ ಶೈಲಿಯೇ ಬೇರೆ. ನೀವು‌ ಗ್ರಾಮ ಪಂಚಾಯತಿ ಕಚೇರಿಗಳಿಗೆ ಹೋಗಲ್ಲ, ಕೆಳಹಂತದ ಅಧಿಕಾರಿಗಳು ನಿಮಗೆ‌ ಹೆದರಲ್ಲ ಎನ್ನುವುದು ಗೊತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಚಾಟಿ‌ ಬೀಸಿದರು.
ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯದ ಎಲ್ಲ ಜಿ.ಪಂ.ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ಸಿಇಒ ಗಳಿಗೆ‌ ಕ್ಲಾಸ್ ತೆಗೆದುಕೊಂಡರು.
ಬದಲಾವಣೆ ಆರಂಭವಾಗಿದೆ, ನೀವು‌ ಬದಲಾಗಲೇಬೇಕು. ಹೇಳೋರು‌ ಕೇಳೋರು ಇಲ್ಲವೆಂದುಕೊಳ್ಳಬೇಡಿ. ನಾವು ಹೇಳುತ್ತೇವೆ,‌ ಜನರೂ‌ ಕೇಳುತ್ತಾರೆ ಎಂದರು.
ಅಪೌಷ್ಟಿಕತೆ ನಿವಾರಣೆ, ತಾಯಿ- ಶಿಶು ಮರಣ‌ ಪ್ರಮಾಣ ತಗ್ಗಿಸಲು ಹೆಚ್ಚಿನ ಒತ್ತು ನೀಡಿ ಹಲವು‌ ಕಾರ್ಯಕ್ರಮಗಳನ್ನು ನಿರಂತರವಾಗಿ ಜಾರಿಯಲ್ಲಿಡಲಾಗಿದೆ. ಮೂರು ದಶಕ ಕಳೆದರೂ ಈ‌ ಸಮಸ್ಯೆ ಬಗೆಹರಿದಿಲ್ಲವೆಂದರೆ ಏನರ್ಥ‌ ?. ಜಿಲ್ಲಾಮಟ್ಟದಲ್ಲಿ ನೀವೇ ( ಸಿಇಒ) ಮುಖ್ಯ ಕಾರ್ಯದರ್ಶಿಗಳಿದ್ದಂತೆ. ಆದರೆ ನಿಮ್ಮಿಂದ ಅಂತಹ ಪ್ರಯತ್ನಗಳಾಗುತ್ತಿಲ್ಲ. ನಿರ್ಣಾಯಾತ್ಮಕ ಕ್ರಮಗಳಾಗುತ್ತಿಲ್ಲ ಎಂದು ಸಿಎಂ ಬೊಮ್ಮಾಯಿ‌ ಅಸಮಾಧಾನ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಮುಖಂಡನಿಂದ ಭಾರಿ ವಂಚನೆ? ಡೆತ್‌ನೋಟ್‌ ಬರೆದಿಟ್ಟು ಮೈಸೂರು ಉದ್ಯಮಿ ಆತ್ಮಹತ್ಯೆ

ಸಚಿವನ ಪುತ್ರ ಮತ್ತು ಬರುವ ಪಾನೀಯ ಕುಡಿಸಿ ರೇಪ್‌ ಮಾಡಿದ- ನಗ್ನ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದಾನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + nineteen =
Remember me
