ಬೆಂಗಳೂರು:ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ದಿಗ್ವಿಜಯ ನ್ಯೂಸ್​ ಚಾನಲ್​ ಮತ್ತು ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ಮತ್ತು ಯುನಿಲೆಟ್​ ಸಹಭಾಗಿತ್ವದಲ್ಲಿ ಮಾ.4ರಿಂದ ಮಾ.7ರವರೆಗೆ “​ ಆ್ಯಂಡ್​ ಹೋಮ್​ ಇಂಟೀರಿಯರ್​ ಎಕ್ಸ್​ಪೋ-2022 ಆಯೋಜಿಸಲಾಗಿದ್ದು, ಬಹುತೇಕ ರ್ನಿಚರ್​ಗಳ ಮೇಲೆ ಶೇ.70ವರೆಗೆ ರಿಯಾಯಿತಿ ನೀಡಲಾಗುತ್ತದೆ.
ಕಳೆದ ಒಂದೂವರೆ ವರ್ಷಗಳಿಂದ ಸಾಂಕ್ರಾಮಿಕ ಪಿಡುಗ ಆಗಿ ಕಾಡಿದ್ದ ಕೋವಿಡ್​ ಸೋಂಕಿನ ಪ್ರಭಾವ ಕಡಿಮೆಯಾಗಿದ್ದು, ಎಲ್ಲರೂ ಲಸಿಕೆ ಪಡೆಯುವ ಮೂಲಕ ಸೋಂಕು ಶೂನ್ಯಗೊಳಿಸುವಲ್ಲಿ ಕೈಜೋಡಿಸಿದ್ದಾರೆ. ಈಗ ಹಿಂದಿನ ವೈಭವದಂತೆ ಎಲ್ಲ ವಾಣಿಜ್ಯೋಮಗಳ ವಹಿವಾಟಿನಲ್ಲಿ ವೈಭವ ಮರುಕಳಿಸುತ್ತಿದೆ. 2022ರಲ್ಲಿ ಮೊಟ್ಟ ಮೊದಲನೆಯದಾಗಿ ಅರಮನೆ ಮೈದಾನದಲ್ಲಿ 4 ದಿನಗಳವರೆಗೆ ಬೃಹತ್​ ಫರ್ನೀಚರ್​ ಎಕ್ಸ್​ಪೋ ಆಯೋಜಿಸಲಾಗಿದೆ.
ಪ್ರತಿದಿನ ಬೆಳಗ್ಗೆ 10.30ರಿಂದ ರಾತ್ರಿ 9 ಗಂಟೆವರೆಗೆ ಎಕ್ಸ್​ಪೋಗೆ ಸಾರ್ವಜನಿಕರ ಭೇಟಿಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರು ತಮ್ಮ ಮನೆಗಳಿಗೆ ಹೊಂದಾಣಿಕೆ ಆಗುವ ಮಾದರಿ ಮತ್ತು ವಿನ್ಯಾಸಕ್ಕೆ ಸರಿ ಹೊಂದುವ ರೀತಿಯ ಫರ್ನೀಚರ್​ಗಳನ್ನು ಖರೀದಿಸಿ ಮನೆಯ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಜತೆಗೆ, ಮನೆಯ ಮಂದಿಗೆಲ್ಲ ಹೊಂದಾಣಿಕೆ ಆಗುವ ಅಗತ್ಯತೆಯುಳ್ಳ ಫರ್ನೀಚರ್​ಗಳನ್ನು ಆಯ್ಕೆ ಮಾಡಿಕೊಳ್ಳಲು ಎಕ್ಸ್​ಪೋ ಸೂಕ್ತ ವೇದಿಕೆಯಾಗಲಿದೆ.
74ಕ್ಕೂ ಅಧಿಕ ಮಳಿಗೆಗಳುಫರ್ನಿಚರ್​ಗಳು ಮತ್ತು ಮನೆಯ ಒಳಾಂಗಣಕ್ಕೆ ಅಳವಡಿಕೆ ಮಾಡುವ ಉಪಕರಣಗಳು ನಮ್ಮ ದೈನಂದಿನ ಅಗತ್ಯ ಪರಿಕರಗಳಾಗಿವೆ. ಇವುಗಳನ್ನು ಆಯ್ಕೆ ಮಾಡುವಾಗ ಗುಣಮಟ್ಟ, ಬಣ್ಣ, ಶೈಲಿ, ವಿನ್ಯಾಸದ ಹಾಗೂ ಉತ್ತಮ ಬೆಲೆಯನ್ನು ನಾವು ಗಮನಿಸಬೇಕಾಗುತ್ತದೆ. ಒಂದು ಮಳಿಗೆಯಲ್ಲಿ ಹೋಗಿ ಫರ್ನೀಚರ್​ ಖರೀದಿಗೆ ಮುಂದಾದಲ್ಲಿ ಅವರು ಹೇಳಿದ ಬೆಲೆಯಷ್ಟೇ ಹಣವನ್ನು ಪಾವತಿಸಬೇಕಾಗುತ್ತದೆ. ಎಷ್ಟೇ ಚೌಕಾಸಿ ಮಾಡಿದರೂ ನಮ್ಮ ನಿರೀಕ್ಷೆಯಷ್ಟು ಬೆಲೆಗಳಿಗೆ ಗುಣಮಟ್ಟದ ಗೃಹೋಪಯೋಗಿ ವಸ್ತುಗಳು ಸಿಗುವುದಿಲ್ಲ. ಆದರೆ, ಈಗ ಈಗ ನಡೆಯುತ್ತಿರುವ ಎಕ್ಸ್​ಪೋದಲ್ಲಿ ನಾವು ಹತ್ತಾರು ಮಳಿಗೆಗಳನ್ನು ಸುತ್ತಾಡಿದರೂ ಸಿಗದಂತಹ ಉತ್ತಮ ಗುಣಮಟ್ಟದ ಫರ್ನೀಚರ್​ಗಳು ಮತ್ತು ಒಳಾಂಗಣ ವಿನ್ಯಾಸದ ಪರಿಕರಗಳು ಒಂದೇ ವೇದಿಕೆಯಲ್ಲಿ ಸಿಗಲಿವೆ. ಒಂದು ಎಕ್ಸ್​ಪೋದಲ್ಲಿ ಒಟ್ಟು 74 ಮಳಿಗೆಗಳನ್ನು ತೆರೆಯಲಾಗುತ್ತಿದ್ದು, ನಮಗಿಷ್ಟವಾದ ಪೀಠೋಪಕರಣ ಆಯ್ಕೆಗೆ ಅವಕಾಶ ಸಿಗಲಿದೆ.
ಎಕ್ಸ್​ಪೋದಲ್ಲಿ ಏನೇನಿರುತ್ತವೆ?ಎಕ್ಸ್​ಪೋದಲ್ಲಿ ಇಟಾಲಿಯನ್​ ಡಿಸೈನರ್​ ಸೋಫಾಗಳು, ಕಚೇರಿಗೆ ಬೇಕಾದ ಪೀಠೋಪಕರಣಗಳು, ಕಾರ್ಪೆಟ್​ಗಳು, ಬೆಡ್​ರೂಮ್​ ಸೆಟ್​ಗಳು, ವಾಲ್​ಫ್ರೇಮ್​ಗಳು, ಮಸಾಜ್​ ಚೇರ್ಗಳು, ಮ್ಯಾಟ್ರೆಸೆಸ್​ (ಹಾಸಿಗೆ), ಆರಾಮದಾಯಕ ಸೋಫಾಗಳು, ಡೈನಿಂಗ್​ ಸೆಟ್​ಗಳು, ಗಾರ್ಡನ್​ ಪೀಠೋಪಕರಣಗಳು, ಆರ್ಟಿಫಿಷಿಯಲ್​ ಹೂವುಗಳು, ಡೆಕೋರೇಟಿವ್​ ವಸ್ತುಗಳು, ಟೀಕ್​ವುಡ್​ ಪೀಠೋಪಕರಣಗಳು ಸೇರಿ ಇನ್ನು ಅನೇಕ ಉಪಕರಣಗಳು ಇಲ್ಲಿ ಲಭ್ಯವಾಗುತ್ತದೆ.
ವಾರಾಂತ್ಯದಲ್ಲಿ ಪಿಕ್​ನಿಕ್​ ಮಾದರಿ ಭೇಟಿ:ನಗರದಲ್ಲಿ ಜೀವನ ಮಾಡುವ ಬಹುತೇಕರು ವಾರದ 5 ದಿನಗಳನ್ನು ಒಂದಿಷ್ಟೂ ವ್ಯರ್ಥ ಮಾಡದೇ ದುಡಿಮೆಯಲ್ಲಿ ಕಳೆಯುತ್ತಾರೆ ಕೆಲಸದ ಅವಧಿಯಲ್ಲಿ ಮನೆ ಮತ್ತು ಕುಟುಂಬ ಸದಸ್ಯರಿಗೆ ಸಮಯ ಕೊಡಲು ಸಾಧ್ಯವಾಗಿರುವುದಿಲ್ಲ. ಭಾನುವಾರ ಎಲ್ಲಾದರೂ ಹೊರಗೆ ಹೋಗಬೇಕೆಂದರೆ ಕೆಲವು ಪ್ರವಾಸಿ ತಾಣಗಳಿಗೆ ರ್ನಿಬಂಧ ವಿಧಿಸಲಾಗಿರುತ್ತದೆ. ಹೀಗಾಗಿ, ರಜಾದಿನಗಳನ್ನು ಒಂದು ಪಿಕ್​ನಿಕ್​ ಮಾದರಿಯಲ್ಲಿ ಕುಟುಂಬ ಸದಸ್ಯರೊಂದಿಗೆ ಕಳೆಯಲು ಫರ್ನೀಚರ್​ ಎಕ್ಸ್​ಪೋ-2022ಕ್ಕೆ ಭೇಟಿ ಮಾಡಬಹುದು. ಎಲ್ಲ ಪೀಠೋಪಕರಣಗಳನ್ನು ನೋಡಿ ತಮಗೆ ಇಷ್ಟವಾದಲ್ಲಿ ಅದನ್ನು ಸ್ಥಳದಲ್ಲಿಯೇ ಖರೀದಿ ಮಾಡಲು ಮುಕ್ತ ಅವಕಾಶ ಲಭ್ಯವಾಗಲಿದೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 + 11 =
Remember me
