ಧಾರವಾಡ :ಕರೊನಾ ಹಾವಳಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಿದರೆ ಪರಿಸ್ಥಿತಿ ಮಿತಿಮೀರಬಹುದು ಎನ್ನುವ ಕಾರಣಕ್ಕೆ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಯನ್ನು ನಿಷೇಧಿಸಿದೆ.
ಇದಕ್ಕೆ ಕಿಡಿಕಾರಿರುವ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಸರ್ಕಾರಕ್ಕೆ 24 ಗಂಟೆಗಳ ಗಡುವು ನೀಡಿದ್ದು, ಸಾರ್ವಜನಿಕ ಉತ್ಸವಕ್ಕೆ ಅವಕಾಶ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಧಾರವಾಡದಲ್ಲಿ ಪ್ರತಿಭಟನೆ ನಡೆಸಿರುವ ಅವರು, ‘ಮುಂಬೈನಲ್ಲಿ ಕೂಡ ಕರೊನಾ ಹಾವಳಿ ಹೆಚ್ಚಾಗಿದೆ. ಆದರೆ ಅಲ್ಲಿ ಕೂಡ ಕೆಲವೊಂದು ಷರತ್ತುಗಳನ್ನು ವಿಧಿಸಿ, ಸಾರ್ವಜನಿಕ ಉತ್ಸವಕ್ಕೆ ಅನುಮತಿ ನೀಡಲಾಗಿದೆ. ಮಹಾರಾಷ್ಟ್ರ ಸರ್ಕಾರ ಗಣೇಶ ಹಬ್ಬ ಆಚರಣೆಗೆ ಜೂನ್‍ನಲ್ಲೆ ಅನುಮತಿ ಕೊಟ್ಟಿದೆ. ಕರ್ನಾಟಕದಲ್ಲಿ ಏಕೆ ಕೊಟ್ಟಿಲ್ಲಿ ಎಂದು ಪ್ರಶ್ನಿಸಿದ್ದಾರೆ.
ಬಾರ್‌ಗಳಿಗೆ ಕರ್ನಾಟಕದಲ್ಲಿ ಅನುಮತಿ ನೀಡಲಾಗಿದೆ. ಜನರು ಕುಡಿದು ಸತ್ತರೂ ಅಡ್ಡಿಲ್ಲ, ರಾಜ್ಯದ ಬೊಕ್ಕಸಕ್ಕೆ ಹಣ ಆಗಬೇಕೆಂದರೆ ಬಾರ್‌ಗಳು ತೆರೆಯಬೇಕು ಎಂದು ಅದನ್ನು ತೆರೆಯಲು ಅನುಮತಿ ನೀಡಲಾಗಿದೆ. ಬಾರ್‌ಗಳಿಗೆ ನೀಡಿರುವ ಅನುಮತಿಯನ್ನು ಗಣೇಶನಿಗೆ ಏಕೆ ಕೊಡುತ್ತಿಲ್ಲ ಎಂದು ಕಿಡಿ ಕಾರಿದರು.
ಇದನ್ನೂ ಓದಿ:ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕೈಬಿಡಲು ಜೆಡಿಎಸ್ ಒತ್ತಾಯ
ನಾನು ಜೈಲಿಗೆ ಹೋಗಲು ಸಿದ್ದ, ಗಣಪತಿ ಸಮೇತ ನಮ್ಮನ್ನು ಜೈಲಿಗೆ ಹಾಕಲಿ, ನಾವು ಮತ ಹಾಕಿ ರಾಜ್ಯದಲ್ಲಿ ಸರ್ಕಾರ ತಂದಿದ್ದೇವೆ. ಗಣಪತಿ ಕೂಡಿಸಲು ಅನುಮತಿ ಕೊಡಲಿಲ್ಲ ಎಂದರೆ ಏನರ್ಥ ಎಂದು ಹೇಳಿರುವ ಅವರು, 24 ಗಂಟೆ ಒಳಗೆ ಅನುಮತಿ ನೀಡಲೇಬೇಕು ಎಂದು ಮುತಾಲಿಕ್ ತಿಳಿಸಿದ್ದಾರೆ.
ಡಿಜೆಹಳ್ಳಿ ಗಲಭೆಗೆ ಕಿಡಿ ಹೊತ್ತಿಸಿದ್ದು ಕೇರಳದ ಗೂಂಡಾಗಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − three =
Remember me
