ಬೆಂಗಳೂರು: ಚಿತ್ರಸಾಹಿತಿ ಕೆ. ಕಲ್ಯಾಣ್​ ದಂಪತಿ ನಡುವೆ ಭಾರಿ ಬಿರುಗಾಳಿಯನ್ನೇ ಸೃಷ್ಟಿಸಿದ್ದ, ಅವರ ಕುಟುಂಬವೂ ಸೇರಿದಂತೆ ಈ ಹಿಂದೆ ಕೆಲವು ಕುಟುಂಬಗಳನ್ನು ಒಡೆದು ಹಾಕಿರುವ ಆರೋಪ ಹೊತ್ತ, ಗಂಗಾ ಕುಲಕರ್ಣಿ, ಅಲಿಯಾಸ್​ ಜ್ಯೋತಿ ಕುಲಕರ್ಣಿಯ ಡೆತ್​ನೋಟ್​ ಪತ್ತೆಯಾಗಿದೆ.
ವಿಷ ಸೇವನೆ ಮಾಡಿ ಮೃತಪಟ್ಟಿರುವ ಗಂಗಾಳ ಡೆತ್​ನೋಟ್​ ಸಿಕ್ಕಿದ್ದು, ಅದರಲ್ಲಿ ತಾನು ಮುಗ್ಧೆ ಎಂದು ಹೇಳಿಕೊಂಡಿದ್ದಾಳೆ. ಇಂದು ವಿಷಸೇವಿಸಿ ಕೊಪ್ಪಳ ಜಿಲ್ಲೆಯ ಕುಷ್ಟಗಿ ನ್ಯಾಯಾಲಯಕ್ಕೆ ಆಗಮಿಸಿದ್ದ ಗಂಗಾ, ಅಲ್ಲಿಯೇ ಕುಸಿದು ಬಿದ್ದಿದ್ದಳು. ಆಸ್ಪತ್ರೆಗೆ ದಾಖಲಾಯಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.
ಡೆತ್​ನೋಟ್​ನಲ್ಲಿ ಗಂಗಾ ಬರೆದಿರುವುದೇನು?ಮರಾಠಿಯಲ್ಲಿ ಎರಡು ಪುಟಗಳ ಡೆತ್​ನೋಟ್​ ಬರೆದಿರುವ ಗಂಗಾ, ಈ ಪ್ರಕರಣದಲ್ಲಿ ತನ್ನದೇನೂ ತಪ್ಪಿಲ್ಲ. ನಾನು ಅಮಾಯಕಿ ಎಂದಿದ್ದಾಳೆ. ಯಾರ್ಯಾರೋ ಸೇರಿ ನನ್ನ ಮೇಲೆ ಪಿತೂರಿ ಮಾಡಿದ್ದಾರೆ. ನಾನು ಯಾರಿಂದಲೂ ಹಣ ಕದ್ದಿಲ್ಲ, ಆದರೂ ವಿನಾಕಾರಣ ಆರೋಪ ಹೊರಿಸಲಾಗಿದೆ ಎಂದಿದ್ದಾಳೆ.
ಈಗ ನನ್ನ ಬಳಿ ಪ್ರಕರಣ ನಡೆಸಲು ಕೂಡ ದುಡ್ಡಿಲ್ಲ, ವಕೀಲರಿಗೆ ಶುಲ್ಕ ಕೊಡಲು ದುಡ್ಡಿಲ್ಲ. ನನ್ನ ಮೇಲೆ ಗಂಭೀರ ಆರೋಪಗಳು ಬಂದಿರುವ ಹಿನ್ನೆಲೆಯಲ್ಲಿ ನ್ಯಾಯ ಸಿಗುವ ಭರವಸೆಯೂ ಇಲ್ಲ. ಆದ್ದರಿಂದ ನಾನು ಸಾಯುವುದೇ ಮೇಲು ಎಂದಿದ್ದಾಳೆ.
ಕುಷ್ಟಗಿ ತಾಲೂಕಿನ ಕ್ಯಾದಿಗುಪ್ಪ ಗ್ರಾಮದಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ಸಂತೋಷ್ ಕುಲಕರ್ಣಿ ಎಂಬವರಿಂದ ಮೂರು ಲಕ್ಷ ದೋಚಿದ್ದ ಆರೋಪದ ಮೇಲೆ 2016 ರಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಗಂಗಾ ಕುಲಕರ್ಣಿ ವಿರುದ್ಧ ಕೇಸ್ ದಾಖಲಾಗಿತ್ತು. ಜೈಲುವಾಸ ಕೂಡ ಈಕೆ ಅನುಭವಿಸಿದ್ದಳು.
ಇದರ ಬಗ್ಗೆ ತಿಳಿಸಿರುವ ಗಂಗಾ, ನನ್ನ ಹೆಸರು ಜ್ಯೋತಿ ಕುಲಕರ್ಣಿಯಿಂದ ಗಂಗಾ ಕುಲಕರ್ಣಿ ಎಂದು ಬದಲಾವಣೆ ಮಾಡಿಕೊಂಡಿದ್ದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಈ ಹಿಂದೆ ಜೈಲಿನಿಂದ ಹೊರಗೆ ಬಂದಾಗ ನನ್ನ ಇಬ್ಬರು ಪುಟ್ಟ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಹೆಸರು ಬದಲಾವಣೆ ಮಾಡಿಕೊಂಡಿದ್ದೆ ಅಷ್ಟೇ, ಇದರಲ್ಲಿ ಯಾವ ಮೋಸವೂ ಇಲ್ಲ ಎಂದಿದ್ದಾಳೆ.
ಕೆ.ಕಲ್ಯಾಣ್​ ಕುಟುಂಬಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಆರೋಪ ಬಂದಾಗಿನಿಂದ ಸಮಾಜಕ್ಕೆ ಮುಖ ತೋರಿಸದಂತಾಗಿದೆ ಎಂದಿರುವ ಗಂಗಾ, ನನ್ನ ಇಬ್ಬರು ಮಕ್ಕಳಿಗಾದರೂ ವಕೀಲರು ಹಾಗೂ ನ್ಯಾಯಾಧೀಶರು ನ್ಯಾಯ ಕಲ್ಪಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.
ಪರವಾನಗಿ ಇಲ್ಲದೇ ಮನೆಯಲ್ಲಿ ತಯಾರಿಸಿದ ಆಹಾರ ಮಾರಿದರೆ 5 ಲಕ್ಷ ದಂಡ, ಶಿಕ್ಷೆ!

ಪರಿಸರ ಮಾಲಿನ್ಯ ಮಾಡಿದ್ರೆ 5 ವರ್ಷ ಶಿಕ್ಷೆ, ₹ 1 ಕೋಟಿ ದಂಡ! ಸುಗ್ರೀವಾಜ್ಞೆ

65ನೇ ವಯಸ್ಸಲ್ಲಿ ಮದುಮಗನಾದ ಹಿರಿಯ ವಕೀಲ ಸಾಳ್ವೆ- ಸೆಕೆಂಡ್​ ಇನ್ನಿಂಗ್ಸ್​ ಶುರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × one =
Remember me
