ಕೊಪ್ಪಳ:ಕೊಪ್ಪಳ ಜಿಲ್ಲೆ ಗಂಗಾವತಿಯ ಗಂಗಾವತಿ ನಗರ ಸಭೆ ಕಾಂಗ್ರೆಸ್ ಸದಸ್ಯನನ್ನು ಅಪಹರಣ ಮಾಡಲಾಗಿರುವ ಘಟನೆ ನಡೆದಿದೆ.
ಕಾಂಗ್ರೆಸ್ ಸದಸ್ಯ ಮನೋಹರ ಸ್ವಾಮಿ ಹಿರೇಮಠ ಅವರು ಅಪಹರಣಕ್ಕೆ ಒಳಗಾದವರು. ಗಂಗಾವತಿಯ ಬಾರ್ ಆ್ಯಂಡ್​ ರೆಸ್ಟೋರೆಂಟ್​ಗೆ ಹೋಗಿದ್ದ ಮನೋಹರ ಅವರನ್ನು ಅಲ್ಲಿಂದಲೇ ಅಪಹರಣ ಮಾಡಲಾಗಿದೆ. ಅವರನ್ನು ಕೆಲವರು ಕತ್ತು ಹಿಡಿದು ಎಳೆದುಕೊಂಡು ಹೋಗಿದ್ದಾರೆ.
ಕೆಲವರು ಬಂದು ಬಾರ್​ನಲ್ಲಿ ಕುಳಿತಿದ್ದ ಹಿರೇಮಠ ಅವರನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ರೋಡ್ ಶೋ ಕೆಲವೇ ಕ್ಷಣಗಳಲ್ಲಿ ಆರಂಭ
ಗಂಗಾವತಿಯಲ್ಲಿ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ನವೆಂಬರ್​ 2ರಂದು ಚುನಾವಣೆ ಇದೆ. ಆದ್ದರಿಂದ ಅವರನ್ನು ಬಿಜೆಪಿ ಕಾರ್ಯಕರ್ತರು ಕಿಡ್ನಾಪ್​ ಮಾಡಿದ್ದಾರೆ ಎನ್ನಲಾಗಿದೆ.
ಬಿಜೆಪಿಯ ನಗರ ಸಭೆ ಸದಸ್ಯರು ಈ ಕೃತ್ಯ ಎಸಗಿರುವುದಾಗಿ ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ನಗರಸಭೆ ಸದಸ್ಯರಾದ ಪರಶುರಾಮ ಮಡ್ಡೇರ್, ಅಜಯ್ ಬಿಚ್ಚಾಲಿ, ನವೀನ ಪಾಟೀಲ್ ಮಾಜಿ ಸದಸ್ಯ ರಾಚ್ಚಪ್ಪ ಸಿದ್ದಾಪುರ, ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಸೇರಿದಂತೆ ಸಹಚರರಾದ ರವಿ ಲಿಂಗರಾಜ ಕ್ಯಾಂಪ್, ಡಬರಿ ಶರಣ ಅವರ ವಿರುದ್ಧ ದೂರು ದಾಖಲಾಗಿದೆ.
ಈ ಎಂಟು ಜನರ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪುಲ್ವಾಮಾ ದಾಳಿ ಮಾಡಿಸಿದ್ದು ನಾವಲ್ಲ… ಭಾರತದ ದಾಳಿಗೆ ನಾವೇನೂ ಹೆದರಿಲ್ಲ- ಉಲ್ಟಾ ಹೊಡೆದ ಪಾಕ್​

ಇವರನ್ನು ಸೋಲಿಸುವುದಕ್ಕಾಗಿ ಅವರಿಗೆ ವೋಟ್​ ಹಾಕ್ತೇವೆ- ಮಾಯಾವತಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × three =
Remember me
