ಹಾವೇರಿ:ಯೂಕ್ರೇನ್​ನಲ್ಲಿ ಶೆಲ್‌ ದಾಳಿಯಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ್‌ ಗ್ಯಾನಗೌಡರ್‌ ನಿವಾಸಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಭೇಟಿ ನೀಡಿ ಸಾಂತ್ವನ ಹೇಳಿದರು. ಯಾವುದಕ್ಕೂ ಹೆದರದೇ ಧೈರ್ಯದಿಂದಿರಿ. ನಿಮ್ಮ ಜೊತೆಗೆ ನಾವಿದ್ದೇವೆ. ಸರಕಾರ ಗಟ್ಟಿಯಾಗಿ ನಿಲ್ಲಲಿದೆ ಎಂದು ರಾಜ್ಯಪಾಲರು ಧೈರ್ಯ ತುಂಬಿದರು.
ನವೀನ್‌ ತಂದೆ ಶೇಖರಗೌಡ ಮತ್ತು ತಾಯಿ ವಿಜಯಲಕ್ಷ್ಮೀ ಸೇರಿದ ಕುಟುಂಬಸ್ಥರಿಗೆ ಕೈ ಮುಗಿದು ನಮಸ್ಕರಿಸಿ ಸಾಂತ್ವನ ಹೇಳಿದರು. ಕುಟುಂಬಸ್ಥರೊಂದಿಗೆ ಮಾತನಾಡಿದ ಅವರು, ಮಾರ್ಚ್ 21 ರಂದು ನವೀನ್‌ ಮೃತದೇಹ ಬಂದಾಗ ನಾನೂ ಬರಬೇಕು ಎಂದುಕೊಂಡಿದ್ದೆ. ಆದರೆ, ಮಧ್ಯಪ್ರದೇಶದಲ್ಲಿ ಮೊದಲೇ ಕಾರ್ಯಕ್ರಮ ನಿಗದಿ ಆಗಿದ್ದರಿಂದ ಬರಲು ಆಗಲಿಲ್ಲ. ಯಾವುದಕ್ಕೂ ಹೆದರಬೇಡಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಧೈರ್ಯ ಹೇಳಿದರು.
ಈ ವೇಳೆ ಮಾತನಾಡಿದ ಶೇಖರಗೌಡ ಅವರು, ಮಾರ್ಚ್​ 1ರಂದು ನವೀನ್​ ಮೃತಪಟ್ಟಾಗ ಆ ದಿನವೇ ರಾಜ್ಯಾಪಾಲರು ಕರೆ ಮಾಡಿ ಮಾತನಾಡಿದ್ದರು. ನನ್ನ ಹಿರಿಯ ಮಗ ಹರ್ಷನಿಗೆ ಇದೇ ರಾಜ್ಯಪಾಲರು ಗೋಲ್ಡ್ ಮೆಡಲ್ ಕೊಟ್ಟಿದ್ದರು. ಕಿರಿಯ ಮಗನಿಗೆ ಹೀಗಾಗಿ ಹೋಯಿತು ಎಂದು ರಾಜ್ಯಪಾಲರು ದುಃಖಿಸಿದರು ಎಂದು ತಿಳಿಸಿದರು.
ಐಪಿಎಲ್​ ಸರಣಿ ವೇಳೆ ಬಾಂಬ್​ ಬ್ಲಾಸ್ಟ್​ ಪ್ಲ್ಯಾನ್​! ಪೊಲೀಸರ ಎದುರು ಉಗ್ರ ಬಿಚ್ಚಿಟ್ಟಿದ್ದಾನೆ ಭಯಾನಕ ಸತ್ಯ

ಪ್ರಮಾಣ ವಚನಕ್ಕೂ ಮುನ್ನ ಒಮ್ಮೆ ಬಂದು ಅಮ್ಮನ ಬಂದು ನೋಡು- ಯೋಗಿಗೆ ಬಂತು ಹೀಗೊಂದು ಮನವಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
