ವಿಜಯಪುರ: ಜೆಸ್ಕಾಂ ಇಲಾಖೆಯ ಜೇವರ್ಗಿ ಸೆಕ್ಷನ್ ಆಫೀಸರ್ ರಾಜಶೇಖರ ಚೆಡ್ಡಿ (35) ಕೊಲೆ ಪ್ರಕರಣ ಕೊನೆಗೂ ಆಲಮೇಲ ಠಾಣೆ ಪೊಲೀಸರು ಬೇಧಿಸಿದ್ದು, ಖತರ್ನಾಕ್​ ಖದೀಮರು ಬಲೆಗೆ ಬಿದ್ದಿದ್ದಾರೆ.
ರಾಜಶೇಖರ ಚೆಡ್ಡಿ ಅವರನ್ನು ಅಪಹರಿಸಿ, 50 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು, ಹಣ ಕೊಡದಿದ್ದಾಗ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಕಲಬುರಗಿ ಸಿಟಿ ಸ್ಟೇಷನ್ ಪೊಲೀಸ್ ಕಾನ್ಸಟೇಬಲ್ ಭೀಮಾಶಂಕರ ಪಾಟೀಲ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ಯಶವಂತ ಮೇಲಕೇರಿ ಪ್ರಮುಖ ಆರೋಪಿಯಾಗಿದ್ದಾನೆ. ಈತನ ಜತೆಗೆ ಯಶವಂತ ಮೇಲಕೇರಿ, ಶ್ರೀಶೈಲ ಜಮಾದಾರ, ಶಿವಕುಮಾರ ಗುತ್ತೇದಾರ, ಸುಧಾಕರ ಮದಗುಣಕಿ, ಬಾಬುರಾವ ಸಮಗಾರ, ಭೀಮಾಶಂಕರ ಪಾಟೀಲ್, ಶಿವಾನಂದ ಕಮ್ಮಾನ ಇವರನ್ನು ಬಂಧಿಸಲಾಗಿದೆ. ಎಲ್ಲರೂ ಕಲಬುರಗಿಯವರು.
ಕಳೆದ ಫೆಬ್ರುವರಿ 16ರಂದು ಜೇವರ್ಗಿಯಲ್ಲಿ ಚೆಡ್ಡಿ ಅವರನ್ನು ಅಪಹರಿಸಿ, ಎರಡು ದಿನಗಳ ಬಳಿಕ ತಲೆಗೆ ಮೊಳೆ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿತ್ತು. ಅಲುಮಿನಿಯಂ ತಂತಿಯಿಂದ ಕೈ ಕಟ್ಟಿ, ಕಣ್ಣಿಗೆ ಖಾರದ ಪುಡಿ ಹಾಕಿ, ತಲೆಗೆ ಮೊಳೆ ಹೊಡೆಯಲಾಗಿತ್ತು. ಕಲಬುರಗಿ ಜಿಲ್ಲೆಯ ಭೀಮನಹಳ್ಳಿ ಬಳಿ ಕೊಲೆ ಮಾಡಿ, ಆಲಮೇಲ ತಾಲೂಕಿನ ಮಲಘಾಣ ಬಳಿಯ ಕಬ್ಬಿನ ಗದ್ದೆಯಲ್ಲಿ ಶವವನ್ನು ಎಸೆದು ಹೋಗಿದ್ದರು.
ಪ್ರಕರಣ ಪ್ರಮುಖ ಆರೋಪಿ ಯಶವಂತ ಒಬ್ಬ ಖತರ್ನಾಕ ಕಿರಾತಕ. ಕಲಬುರಗಿ ಜಿಲ್ಲೆಯಾದ್ಯಂತ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನಿಗೂ ಮೃತಪಟ್ಟ ರಾಜಶೇಖರ ಚೆಡ್ಡಿ ಅವರಿಗೂ ಮೊದಲೇ ಪರಿಚಯವಿತ್ತು. ಜೆಸ್ಕಾಂ ಇಲಾಖೆಯ ಸಣ್ಣಪುಟ್ಟ ಗುತ್ತಿಗೆ ಪಡೆದು ಯಶವಂತ ಕಾಮಗಾರಿ ಮಾಡುತ್ತಿದ್ದ. ಆಗ ಪರಿಚಯವಾಗಿತ್ತು. ಇದರಿಂದ ಅವರ ಬಳಿ ಸಾಕಷ್ಟು ಹಣವಿದ್ದು, ಅಪಹರಣ ಮಾಡಿ ಹಣ ದೋಚುವ ಪ್ಲ್ಯಾನ್​ ಮಾಡಿದ್ದ.
ಇದಕ್ಕೆ ಆತ ಇನ್ನಿತರ ಸಹಾಯ ಪಡೆದಿದ್ದ. ಈ ಪೈಕಿ ಪೊಲೀಸ್ ಕಾನ್ಸಟೇಬಲ್ ಭೀಮಾಶಂಕರ್​ ಒಬ್ಬ. ಯಶವಂತನಿಗೂ, ಭೀಮಾಶಂಕರ್​ಗೂ ಪರಿಚಯವಾದದ್ದೇ ವಿಚಿತ್ರ. ಈ ಹಿಂದೆ ಯಶವಂತ ಬೇರೆ ಬೇರೆ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ. ಆ ಸಮಯದಲ್ಲಿ ಅವನನ್ನು ಜೈಲಿನಿಂದ ಕೋರ್ಟ್​ಗೆ, ಕೋರ್ಟ್​ನಿಂದ ಜೈಲಿಗೆ ಒಯ್ಯುವಾಗ ಪರಿಚಯವಾಗಿ ಬಹಳ ಒಡನಾಟ ಬೆಳೆದಿತ್ತು.
ಇದೇ ಸಂದರ್ಭದಲ್ಲಿ ಇಬ್ಬರೂ ಸೇರಿಕೊಂಡು ಈ ಖತರ್ನಾಕ್​ ಪ್ಲ್ಯಾನ್​ ಮಾಡಿದ್ದರು. ಚೆಡ್ಡಿ ಅವರನ್ನು ಅಪಹರಿಸಿದ್ದರು. ಅವರು ಹಣ ಕೊಡಲಿಲ್ಲ ಎನ್ನುವ ಕಾರಣಕ್ಕೆ ಕೊಲೆ ಮಾಡಿದ್ದರು.(ದಿಗ್ವಿಜಯ ನ್ಯೂಸ್​)
VIDEO: ಯುವತಿ ಜತೆ ಮಾಜಿ ಸಚಿವ ಲವ್ವಿಡವ್ವಿ: ಪತ್ನಿ ಕೈಲಿ ರೆಡ್​ಹ್ಯಾಂಡ್​ ಸಿಕ್ಕಿಬಿದ್ದು ಪೇಚಾಟ- ವಿಡಿಯೋ ವೈರಲ್

ಫೋನ್​ನಲ್ಲಿ ಹಾರರ್​ ಮೂವಿ ನೋಡುತ್ತಲೇ ಗೊಂಬೆಗೆ ನೇಣು ಬಿಗಿದು, ತಾನೂ ಸತ್ತುಹೋದ ಬಾಲಕ!

ಅವನೂ ಬೇಡ… ಅವಳೂ ಬೇಡ… ಎಂದು ತನ್ನನ್ನು ತಾನೇ ಮದುವೆಯಾಗಿ ಹನಿಮೂನ್​ಗೂ ರೆಡಿಯಾದ ಯುವತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + nineteen =
Remember me
