ವಿಜಯನಗರ:ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರೋ ತುಂಗಭದ್ರಾ ಜಲಾಶಯದಿಂದ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ನದಿಗೆ ಬಿಡುಗಡೆ ಮಾಡಲಾಗಿದ್ದು, ಇದಾಗಲೇ ಹಂಪಿನ ಹಲವಾರು ಸ್ಮಾರಕಗಳು ಮುಳುಗಿ ಹೋಗಿವೆ.
ಹಂಪಿಯಲ್ಲಿರುವ ಧಾರ್ಮಿಕ ವಿಧಿವಿಧಾನ ಮಂಟಪ, ಸ್ನಾನಘಟ್ಟ ಈಗಾಗಲೇ ಮುಳುಗಡೆಯಾಗಿದೆ. ಇನ್ನು ವಿಜಯ ವಿಠಲ ದೇವಸ್ಥಾನದ ಬಳಿಯಲ್ಲಿರುವ ಪುರಂದರದಾಸರ ಮಂಟಪ ಮುಳುಗಡೆಯಾಗುವತ್ತ ಸಾಗಿದೆ. ಕೋದಂಡರಾಮ ದೇವಸ್ಥಾನದ ಬಳಿ ನೀರು ಹರಿಯುತ್ತಿದ್ದು, ಹೊರಹರಿವಿನ ಪ್ರಮಾಣ ಹೆಚ್ಚಾದಲ್ಲಿ ಅದೂ ಸಹ ಮುಳುಗಡೆಯಾಗಲಿದೆ.
ಈಗಾಗಲೇ ಕೋದಂಡರಾಮ ದೇವಸ್ಥಾನಕ್ಕೆ ಹೋಗುವ ದಾರಿಯ ಸಮೀಪವೇ ನದಿ ನೀರು ರಭಸವಾಗಿ ಹರಿಯುತ್ತಿದ್ದು, ಇನ್ನೂ ಹೆಚ್ಚಿನ‌ ಪ್ರಮಾಣದ ನೀರು ಬಿಟ್ಟರೆ ಆ ದಾರಿಯೂ ಬಂದ್ ಆಗಲಿದೆ.
ಈ ವರ್ಷ ಮಳೆಗಾಲ ಆರಂಭವಾದಾಗಿನಿಂದ ಈ ರೀತಿ ಹಂಪಿಯ ಸ್ಮಾರಕಗಳು ಮುಳುಗಡೆಯಾಗುತ್ತಿರುವುದು ಎರಡನೇ ಬಾರಿಯಾಗಿದೆ.(ದಿಗ್ವಿಜಯ ನ್ಯೂಸ್​)
ಕೆಆರ್​ಎಸ್​ನಿಂದ ದಾಖಲೆ ಪ್ರಮಾಣದ ನೀರು ಬಿಡುಗಡೆ: 40 ಗ್ರಾಮಗಳಿಗೆ ಪ್ರವಾಹದ ಭೀತಿ- ಐತಿಹಾಸಿಕ ತಾಣಗಳಿಗೂ ಕಂಟಕ

ಕಣ್ಣಲ್ಲಿ ಕಣ್ಣಿಟ್ಟು ಕಾಯ್ತಿದ್ರೂ ಸಿಕ್ತಿಲ್ಲ ಚಿರತೆ: ಬೆಳಗಾವಿಯ 22 ಶಾಲೆಗಳಿಗೆ ರಜೆ ಘೋಷಣೆ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one × three =
Remember me
