ಹಾವೇರಿ:ಇಲ್ಲಿ ಸರ್ಕಾರಿ ಆಸ್ಪತ್ರೆಯೊಂದರ ಟೆಕ್ನೀಷಿಯನ್​ ಒಬ್ಬನ ವಿರುದ್ಧ, ಆಸ್ಪತ್ರೆಯ ಮಹಿಳಾ ಕ್ಲೀನರ್​ ಒಬ್ಬರು ಲೈಂಗಿಕ ದೌರ್ಜನ್ಯ ಕೇಸ್​ ದಾಖಲು ಮಾಡಿದ್ದು, ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಕ್ಸರೆ ಟೆಕ್ನೀಷಿಯನ್​ ಕಬೇರ ಸಾವಂತನ ವಿರುದ್ಧ ಅದೇ ಆಸ್ಪತ್ರೆಯ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ದೂರು ದಾಖಲು ಮಾಡಿದ್ದಾರೆ.
ಈತನ ಕೆಲಸ ರೋಗಿಗಳ ಎಕ್ಸ್​ರೇ ತೆಗೆಯೋದು, ಅದನ್ನು ಬಿಟ್ಟು ಪದೇ ಪದೇ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಬರುತ್ತಿದ್ದ. ಮಜಾ ಮಾಡೋಣ ಬಾ ಎಂದು ಕರೆಯುತ್ತಿದ್ದ. ಇದರಿಂದ ಬೇಸತ್ತು ತಾವು ದೂರು ದಾಖಲು ಮಾಡುತ್ತಿರುವುದಾಗಿ ಮಹಿಳೆ ಹೇಳಿದ್ದಾರೆ.
ನನಗೆ ಇದೆಲ್ಲಾ ಇಷ್ಟವಾಗಲ್ಲ, ನನ್ನ ತಂಟೆಗೆ ಬರಬೇಡ ಎಂದು ಎಷ್ಟು ಹೇಳಿದರೂ ಕೇಳದ ಕುಬೇರ, ಒಪ್ಪಿಕೊ ನಿನಗೆ ಕೇಳಿದ್ದು ಕೊಡುತ್ತೇನೆ ಎಂದು ಪೀಡಿಸುತ್ತಿದ್ದಾನೆ ಎಂದು ದೂರಿನಲ್ಲಿ ಮಹಿಳೆ ಹೇಳಿದ್ದಾರೆ. ಜತೆಗೆ ಇವರ ಜತೆ ಅಶ್ಲೀಲವಾಗಿ ಮಾತಾಡುವ ಆಡಿಯೋ ಪುಲ್ ವೈರಲ್ ಆಗಿದೆ.
ಅವನ ಟಾರ್ಚರ್ ತಾಳಲಾರದೆ ಹಾನಗಲ್ ಠಾಣೆಗೆ ಬಂದು ಮಹಿಳೆ ಕಂಪ್ಲೇಂಟ್​ ಕೊಟ್ಟಿದ್ದಾರೆ. ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುತ್ತಿದ್ದಂತೆಯೇ ಅತ್ತ ಕುಬೇರ ಎಸ್ಕೇಪ್​ ಆಗಿದ್ದಾನೆ. ಆತನ ಹುಡುಕಾಟ ನಡೆಸಿದ್ದಾರೆ ಪೊಲೀಸರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ
﻿
ತಾಳಿ ಕಟ್ಟುವ ಮೊದಲು ಬಾಲಕಿಗೆ ಜೀವದಾನ- ಮದುಮಗನಿಂದ ನಡೆಯಿತು ಒಂದು ಅಪೂರ್ವ ಕಾರ್ಯ

ಅಂತ್ಯಸಂಸ್ಕಾರಕ್ಕೆ ಪುತ್ರನೇ ಬೇಕೆ? ಅಪ್ಪನ ಶವ ಹೆಗಲಮೇಲೆ ಹೊತ್ತರು- ಚಿತೆಗೆ ಕೊಳ್ಳಿ ಇಟ್ಟ ಪುತ್ರಿಯರು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × one =
Remember me
