ಹಾಸನ:ಕರೊನಾ ಎರಡನೆಯ ಅಲೆಯ ಹಿನ್ನೆಲೆಯಲ್ಲಿ ವಿವಾಹ ಸೇರಿದಂತೆ ಎಲ್ಲ ಸಭೆ – ಸಮಾರಂಭಗಳಿಗೆ ಮಾರ್ಗಸೂಚಿ ಹೊರಡಿಸಿ ತಿಂಗಳೇ ಕಳೆದಿದೆ. ಮದುವೆ ಸಮಾರಂಭಗಳಲ್ಲಿ 50 ಜನಕ್ಕಿಂತ ಹೆಚ್ಚಿನ ಮಂದಿ ಇರಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಆದರೆ ಜೀವನದಲ್ಲಿ ಒಮ್ಮೆ ಆಗುವ ಮದುವೆಗೆ ಜನರನ್ನು ಕರೆಯದಿದ್ದರೆ ಹೇಗೆ ಎಂದುಕೊಂಡು ತಮಗೇನೂ ಆಗುವುದಿಲ್ಲ ಎಂದುಕೊಂಡು ಅಲ್ಲಲ್ಲಿ ಈ ಮಾರ್ಗಸೂಚಿಯನ್ನು ಉಲ್ಲಂಘನೆ ಮಾಡುತ್ತಿದ್ದಾರೆ. ಮದುವೆಗೆ ಭರ್ಜರಿ ತಯಾರಾಗಿ ಬಂದವರು ಮಾಸ್ಕ್‌ ಧರಿಸದಿದ್ದರೆ, ಮದುವೆ ಮನೆಯಲ್ಲಿ ಅಂತರವೇಕೆ ಎಂದುಕೊಂಡು ಗುಂಪುಗುಂಪಾಗಿ ಕೂಡಿ ಇರುತ್ತಿದ್ದಾರೆ. ಅಂಥದ್ದೇ ಒಂದು ಘಟನೆ ಹಾಸನದಲ್ಲಿಯೂ ನಡೆದಿದ್ದು, ಇದೀಗ 10 ಸಾವಿರ ರೂಪಾಯಿ ದಂಡ ತೆರಬೇಕಾಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಶ್ರೀ ಸಿಂಗಮ್ಮದೇವಿ ಸಮುದಾಯ ಭವನದಲ್ಲಿ ಇಂದು ನಡೆಯುತ್ತಿದ್ದ ಎರಡು ವಿವಾಹ ಸಮಾರಂಭಗಳಲ್ಲಿ ಮಾರ್ಗಸೂಚಿ ಗಾಳಿಗೆ ತೂರಲಾಗುತ್ತಿದೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಕೂಡಲೇ ಶಿರಸ್ತೇದಾರ್‌ ನೇತೃತ್ವದಲ್ಲಿ ಪೊಲೀಸರು ಛತ್ರದ ಮೇಲೆ ದಾಳಿ ಮಾಡಿದ್ದಾರೆ.
ಹಲವರು ಮಾಸ್ಕ್‌ ಧರಿಸದಿದ್ದರೆ, ಇನ್ನು ಕೆಲವರು ಸಾಮಾಜಿಕ ಅಂತರವಿಲ್ಲದೆ ಮದುವೆಯಲ್ಲಿ ಭಾಗಿಯಾಗಿದ್ದನ್ನು ಕಂಡಿರುವ ಅಧಿಕಾರಿಗಳು ಗರಂ ಆಗಿದ್ದು, ಎರಡೂ ಕಡೆಯವರಿಗೆ ತಲಾ ಐದೈದು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಮದುವೆ ಹಳ್ಳಿಗಳಲ್ಲಿ ನಡೆಯುತ್ತಿದ್ದು ಅಧಿಕಾರಿಗಳಿಗೆ ತಿಳಿಯುವುದಿಲ್ಲ ಎಂದುಕೊಳ್ಳುವ ತಪ್ಪು ಮಾಡಬೇಡಿ ಎಂಬ ಸಂದೇಶವನ್ನು ಈ ಅಧಿಕಾರಿಗಳು ನೀಡಿದ್ದಾರೆ.
ಮೆಸೇಜ್‌ ನೋಡಿ ಮರುಳಾಗಿ ಲವ್‌ ಮಾಡೋಕೆ ಹೋಗಿದ್ಯಾ?

ಕರೊನಾ ಕರಾಳತೆ: ಹೆಣದ ರಾಶಿಯಲ್ಲಿ ವೈದ್ಯರ ಹಣದ ಹುಡುಕಾಟ- 9 ಲಕ್ಷ ರೂ ಕೊಟ್ಟರೂ ಮತ್ತಷ್ಟು ಆಸೆ!

ಈತನ ಮಾತಿನ ಮೋಡಿಗೆ ಎಲ್ಲವನ್ನೂ ಅರ್ಪಿಸಿದ್ದ 35 ಸುಂದರಿಯರು! 36ಕ್ಕೆ ಸ್ಕೆಚ್‌ ಹಾಕಿ ಸಿಕ್ಕಬಿದ್ದ ಭೂಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 7 =
Remember me
