ಹಾಸನ:ಮೊನ್ನೆ ಭಾನುವಾರ ಇಡೀ ಹಾಸನ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಚನ್ನರಾಯಪಟ್ಟಣದ ಜೋಡಿ ಕೊಲೆ ಪ್ರಕರಣವನ್ನು ಎರಡೇ ದಿನಗಳಲ್ಲಿ ಪೊಲೀಸರು ಬೇಧಿಸಿದ್ದಾರೆ. ಇಂದು ಬೆಳ್ಳಬೆಳಗ್ಗೆಯೇ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಆಲಗೊಂಡನಹಳ್ಳಿಯ ಮುರುಳಿಧರ್ (71), ಉಮಾದೇವಿ (67) ಕೊಲೆಯಾದ ವೃದ್ಧ ದಂಪತಿ. ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರನ್ನು ಕೊಲೆ ಮಾಡಲಾಗಿತ್ತು. ಆರೋಪಿಗಳು ತಲೆಮರೆಸಿಕೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀನಿವಾಸಗೌಡ ಅವರ ನೇತೃತ್ವದಲ್ಲಿ ಎರಡು ದಿನಗಳಲ್ಲಿಯೇ ಈ ಕಾರ್ಯಾಚರಣೆ ನಡೆಸಲಾಗಿದ್ದು, ಪ್ರಮುಖ ಆರೋಪಿ ಪ್ರಸಾದ್ ಅಲಿಯಾಸ್ ಗುಂಡ ಸೆರೆ ಸಿಕ್ಕಿದ್ದಾನೆ.
ಈ ವೇಳೆ ಶರಣಾಗುವಂತೆ ಮನವಿ ಮಾಡಿದರೂ ಬಗ್ಗದ ಆರೋಪಿ ಪ್ರಸಾದ್. ಬಂಧಿಸಲು ಮುಂದಾದ ಡಿಸಿಐಬಿ ಇನ್ಸ್ ಪೆಕ್ಟರ್ ವಿನಯ್ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಆತನನ್ನು ಬಂಧಿಸಲಾಗಿದೆ. ಆರೋಪಿಯ ಕಾಲಿನ ಮಂಡಿಗೆ ಗುಂಡೇಟು ಬಿದ್ದಿದ್ದು, ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ:ಇಂದು ಅಪರಾಹ್ನ ಭಾರತ ರತ್ನ ಪ್ರಣಬ್​ ಮುಖರ್ಜಿ ಅವರ ಅಂತ್ಯಸಂಸ್ಕಾರ
ಆರೋಪಿ ನಡೆಸಿದ ಹಲ್ಲೆಯಿಂದಾಗಿ ವಿನಯ್‌ ಅವರ ಕೈಗೆ ಗಾಯಗಳಾಗಿವೆ.
ಏನಿದು ಪ್ರಕರಣ? ಕೊಲೆಯಾಗಿರುವ ಮುರುಳಿಧರ್ ಅವರ ತಂದೆ ಕೃಷ್ಣಮೂರ್ತಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹಿನ್ನೆಲೆಯಲ್ಲಿ ಸರ್ಕಾರದಿಂದ 80 ಎಕರೆ ಜಮೀನು ಮಂಜೂರು ಆಗಿತ್ತು. ಅವರಿಗೆ ಮಕ್ಕಳು ಇರಲಿಲ್ಲ. 80 ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ಅಲ್ಲೇ ದಂಪತಿ ಈಚೆಗೆ ಅದನ್ನು ಮಾರಿದ್ದರು.
ಮನೆ ಮಾರಿದ್ದ ಹಣ ಮನೆಯಲ್ಲಿಯೇ ಇದ್ದಿರಬಹುದು ಎಂಬ ಕಾರಣಕ್ಕೆ ಅವರನ್ನು ಕೊಲೆ ಮಾಡಲಾಗಿತ್ತು. ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಲಾಗಿತ್ತು.
ಗುಜರಾತ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಪಾಕ್‌ನ ಐಎಸ್‌ಐ ಏಜೆಂಟ್‌ ಅರೆಸ್ಟ್‌!

ಆಂಟಿನೇ ಬೇಕೆಂದು ಐದು ಮದುವೆಯಾದವಳ 6ನೇ ಗಂಡನಾಗಿ ಹೋದ ಚಿಕ್ಕಮಗಳೂರು ಯುವಕ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:twelve − 11 =
Remember me
