ಹಾಸನ:ನಿಧಿ ಆಸೆಗಾಗಿ ಪುರಾತನ ಕಾಲ ದೇವಾಲಯದ ಗರ್ಭಗುಡಿಯನ್ನು ಅಗೆದು ಹಾನಿ ಮಾಡಿದ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಖದೀಮರ ಗುಂಪಿನಲ್ಲಿ ಹಾಸನದ ಸಹಕಾರಿ ಸಂಘದ ಉಪ ನಿಬಂಧಕ ಸರ್ಕಾರಿ ನೌಕರ , ಓರ್ವ ಜ್ಯೋತಿಷಿ, ಒಬ್ಬ ಅರ್ಚಕನೂ ಸೇರಿದ್ದಾರೆ!
ಆಲೂರು ತಾಲೂಕಿನ ಪುರಾತನ ದೇವಾಲಯವಾದ ಪಾರ್ವತಮ್ಮ ದೇವಸ್ಥಾನದಲ್ಲಿ ನಿಧಿಗಾಗಿ ಶೋಧ ನಡೆಸಿ ಗರ್ಭಗುಡಿ ಬಗೆದು ದೇವಿ ವಿಗ್ರಹ ವಿರೂಪ ಗೊಳಿಸಿದ್ದಾರೆ ಇವರು. ಇದಕ್ಕೆ ಸಂಬಂಧಿಸಿದಂತೆ ಹಾಸನ ಸಹಕಾರ ಸಂಘದ ಅಭಿವೃದ್ಧಿ ಅಧಿಕಾರಿ ನಾರಾಯಣ, ಆಲೂರು ತಾಲೂಕಿನ ಬೋಸ್ಮನಹಳ್ಳಿ ಜ್ಯೋತಿಷಿ ಮಂಜುನಾಥ್, ಹಾಸನ ಗಣಪತಿ ದೇವಾಲಯದ ಅರ್ಚಕ ತಿಪ್ಪೇಸ್ವಾಮಿ ಪ್ಪೆ ಸೇರಿದಂತೆ ಏಳು ಮಂದಿ ಅರೆಸ್ಟ್ ಆಗಿದ್ದಾರೆ.
ಇನ್ನುಳಿದ ಆರೋಪಿಗಳೆಂದರೆ ಚನ್ನರಾಯಪಟ್ಟಣ ಮೂಲದ ಭೂವನಹಳ್ಳಿ ವಡ್ಡರಹಟ್ಟಿಯ ಬಿ.ಎಚ್. ಜಯರಾಮ್, ಚೇತನ್, ಮಂಜುನಾಥ ಹಾಗೂ ಹಾಸನ ಶಂಕರನಹಳ್ಳಿ ಕುಮಾರ್.ಜ್ಯೋತಿಷಿ ಮಂಜುನಾಥ್ ನೇತೃತ್ವದಲ್ಲಿ ಗುರುವಾರ ರಾತ್ರಿ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ.
ದೇವಾಲಯ ಗರ್ಭಗುಡಿ ಮುಂಭಾಗ 10 ಅಡಿ ಆಳದ ಗುಂಡಿ ತೋಡಿದ ಇವರು ಅಲ್ಲಿ ಏನು ಸಿಗದ ಕಾರಣ ವಾಪಾಸ್ ಆಗಿದ್ದಾರೆ. ಲಾಕ್ ಡೌನ್ ಇದ್ದ ಹಿನ್ನಲೆ ಸೋಮವಾರ ಮತ್ತು ಶುಕ್ರವಾರ ಮಾತ್ರ ದೇವಾಲಯ ಬಾಗಿಲು ತೆರೆಯುತ್ತದೆ. ಶುಕ್ರವಾರ ಪೂಜೆಗಾಗಿ ಅರ್ಚಕರು ಬಾಗಿಲು ತೆರೆದಾಗ ಕೃತ್ಯ ಬಯಲಾಗಿದೆ. ದೇವಾಲಯದ ವಿಗ್ರಹಕ್ಕೆ ಹಾನಿಯಾಗಿದ್ದು ‍ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪಾರ್ವತಮ್ಮನ ಬೆಟ್ಟದ ಮೇಲೆ ನಿಧಿಚೋರರ ಕಣ್ಣು ಬೀಳುತ್ತಿದ್ದು ಇನ್ನಾದ್ರು ಸರ್ಕಾರ ಇಲ್ಲಿಗೆ ಸಿಸಿ ಕ್ಯಾಮೆರಾ ದಂತಹ ವ್ಯವಸ್ಥೆ ಮಾಡಿದರೆ ಹೆಚ್ಚು ಸಹಕಾರಿ ಆಗಲಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಎಂಜಲು ಹಚ್ಚುವುದೇ ನನ್ನ ಬ್ಯೂಟಿ ಸೀಕ್ರೆಟ್‌: ಅಭಿಮಾನಿಗಳಿಗೆ ಶಾಕ್‌ ನೀಡಿದ ತಮನ್ನಾ

ಬಾಂಗ್ಲಾಯುವತಿಯ ಗ್ಯಾಂಗ್‌ರೇಪ್ ಕೇಸ್‌: ಪೊಲೀಸರಿಗೆ ಶಾಕ್‌ ಕೊಟ್ಟ ಸಹಸ್ರಾರು ವಿಡಿಯೋ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 2 =
Remember me
