ಹಾವೇರಿ:ಮಾರುಕಟ್ಟೆಯಲ್ಲಿ ಬೆಲೆ ಸಿಗದ ಹಿನ್ನೆಲೆಯಲ್ಲಿ ರೈತನೊಬ್ಬ ಮನನೊಂದು ಬೆಳೆ ನಾಶ ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಹಿರೆಕೇರೂರು ತಾಲೂಕಿನ ಹಿರೇಬುದಿಹಾಳ ಗ್ರಾಮದಲ್ಲಿ ನಡೆದಿದೆ.
ಸೊಂಪಾಗಿ ಬೆಳೆದಿದ್ದ ಹೂ ಕೋಸಿನ ಫಸಲನ್ನು ಸಂಪೂರ್ಣವಾಗಿ ನಾಶ ಮಾಡಿದ್ದಾರೆ ರೈತ ಶಿವರಾಜ್ ಕೆಂಚಣ್ಣನವರ.
ಟ್ಯಾಕ್ಟರ್ ಮೂಲಕ ರೂಟರ್ ಹೊಡೆದು ಸಂಪೂರ್ಣ ಬೆಳೆಯನ್ನು ನಾಶ ಮಾಡಿದ್ದಾರೆ. ಈ ಫಸಲು ತೆಗೆಯಲು 70 ಸಾವಿರ ಖರ್ಚು ಮಾಡಿದ್ದರು ಶಿವರಾಜ್​. ಆದರೆ ಮಾರುಕಟ್ಟೆಯಲ್ಲಿ ಕೊಂಡುಕೊಳ್ಳುವವರು ಯಾರು ಇಲ್ಲ ಎನ್ನುವ ಕಾರಣಕ್ಕೆ ನೊಂದು ಬೆಳೆ ಹಾನಿಗೊಳಿಸಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ನಲುಗಿದ ರೈತ: ನಾಲೆ ಒಡೆದು ಲಕ್ಷಾಂತರ ರೂ. ಬೆಳೆ ಹಾನಿ

Sign in to your account
Please enter an answer in digits:1 + 20 =
Remember me
