ಶಿವಮೊಗ್ಗ:ಶಿವಸೇನೆಯ 50 ಶಾಸಕರು ಪಕ್ಷ ಬಿಟ್ಟು ಹೋಗುತ್ತಾರೆ ಎಂದು ಯಾರಾದರೂ ನಂಬಿದ್ದರೇ? ಅವರೆಲ್ಲ ಹೋದ ಮೇಲೂ ಆ ಪಕ್ಷವೇನು ಮುಳುಗಿದೆಯೇ? ಎನ್ನುವ ಮೂಲಕ ಜೆಡಿಎಸ್ ತೊರೆಯುವ ಶಾಸಕರಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಮಾಜಿ ಶಾಸಕ ವೈಎಸ್‌ವಿ ದತ್ತ ಅವರಿಗೆ ಜೆಡಿಎಸ್ ಎಲ್ಲವನ್ನೂ ಕೊಟ್ಟಿದೆ. ಪಕ್ಷದಿಂದ ಎಲ್ಲ ಅಧಿಕಾರ ಪಡೆದು ಈಗ ಜೆಡಿಎಸ್ ತೊರೆಯುತ್ತೇನೆ ಎನ್ನುವ ಅವರು ಯೋಚನೆ ಮಾಡಬೇಕು ಎಂದು ಭಾನುವಾರ ನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ನಾನು ದೀನದಲಿತರಿಗಾಗಿ, ಬಿಜೆಪಿಯ ದುರಾಡಳಿತದಿಂದ ಬೇಸತ್ತ ಜನರಿಗಾಗಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕಿದೆ. ಯಾರೇ ಪಕ್ಷ ಬಿಟ್ಟು ಹೋದರೂ ಚುನಾವಣೆಗೆ ಇನ್ನೂ ಸಮಯವಿದೆ. ಜನರ ಬಳಿ ಹೋಗಿ ಆಶೀರ್ವಾದ ಕೋರುತ್ತೇನೆ. ಜನ ನಮ್ಮನ್ನು ಬೆಂಬಲಿಸುವ ವಿಶ್ವಾವಿದೆ. ನಮ್ಮ ಮನೆ ದೇವರ ಆಶೀರ್ವಾದ ನನ್ನ ಮೇಲಿದೆ. ಬಡವರಿಗಾಗಿ ಮತ್ತೊಮ್ಮೆ ನಾನು ಅಧಿಕಾರ ಪಡೆಯುತ್ತೇನೆಂಬ ವಿಶ್ವಾಸವಿದೆ. ಆಗಸ್ಟ್‌ನಿಂದ ಪ್ರತಿದಿನ ಒಂದೊಂದು ಕ್ಷೇತ್ರದಲ್ಲಿ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗುವ ಆಸರೆ ನನಗಿಲ್ಲ ಎಂದರು.
ಇದೇ ವೇಳೆ ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಿರುವ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಇವರ ಗೆಲುವಿಗೆ ಯಾವುದೇ ಸಮಸ್ಯೆಯಿಲ್ಲ. ತಮ್ಮನ್ನು ಬೆಂಬಲಿಸುವಂತೆ ಸ್ವತಃ ಅವರೇ ಫೋನ್ ಮೂಲಕ ಮನವಿ ಮಾಡಿದ್ದಾರೆ. ನಮ್ಮ ಶಾಸಕರೆಲ್ಲರೂ ಸಮಾಲೋಚನೆ ನಡೆಸಿ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ತೆರಿಗೆ ಹಣ ಲೂಟಿಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರು ಸಾಗುವ ಮಾರ್ಗಕ್ಕೆ ಹಾಕಿದ್ದ ಟಾರು ಎರಡೇ ದಿನದಲ್ಲಿ ಕಿತ್ತು ಹೋಗಿದೆ. ಅವರ ಭೇಟಿಗಾಗಿ 50 ಕೋಟಿ ರೂ. ಖರ್ಚು ಮಾಡಲಾಗಿದೆ. ಇದೇ ಹಣದಲ್ಲಿ ನಾಲ್ಕು ಗ್ರಾಮಗಳನ್ನು ಅಭಿವೃದ್ಧಿಪಡಿಸಬಹುದಿತ್ತು ಎಂದು ಎಚ್‌ಡಿಕೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಮಗಾರಿಗಳಲ್ಲಿ ಆರ್‌ಎಸ್‌ಎಸ್ ಪ್ರಮುಖರಿಗೆ ಪರ್ಸಂಟೇಜ್ ತಲುಪಿಸಬೇಕು. ಆರ್‌ಎಸ್‌ಎಸ್‌ನಿಂದೇ ಹಣ ಸಂಗ್ರಹವಾಗುತ್ತಿದೆ. ಸರ್ಕಾರದಲ್ಲಿರುವವರು ರಾಜ್ಯದ ಜನರ ದುಡ್ಡನ್ನು ಲೂಟಿ ಮಾಡುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ಆಪರೇಷನ್ ಹಿಂದೆ ಅಮಿತ್ ಷಾಮಹಾರಾಷ್ಟ್ರದಲ್ಲಿ ಶಾಸಕರ ಆಪರೇಷನ್ ಹಿಂದೆ ಗೃಹ ಸಚಿವ ಅಮಿತ್ ಷಾ ಇದ್ದಾರೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಕರ್ನಾಟಕದಲ್ಲಿ 2019ರಲ್ಲಿ ಅಸ್ತಿತ್ವದಲ್ಲಿದ್ದ ಮೈತ್ರಿ ಸರ್ಕಾರವನ್ನು ಕಾಂಗ್ರೆಸ್ ನಾಯಕರ ಸಹಕಾರದಲ್ಲಿ ಅಮಿತ್ ಷಾ ಕೆಡವಿದರು. ಕಾಂಗ್ರೆಸ್ ಶಾಸಕರನ್ನು ಮುಂಬೈಗೆ ಕರೆದೊಯ್ದರು. ಈಗ ಮಹಾರಾಷ್ಟ್ರ ಶಾಸಕರನ್ನು ಗುವಾಹತಿಗೆ ಕೊಂಡೊಯ್ದಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ನಮ್ಮ ಸರ್ಕಾರವನ್ನು ಕೆಡವಬೇಕೆಂದು ಒಂದೂವರೆ ವರ್ಷದಿಂದ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿಯಾದರು. ಈಗ ಶಿವಸೇನೆ ಶಾಸಕರ ವಿರುದ್ಧ ಆ ಪಕ್ಷದ ಕಾರ್ಯಕರ್ತರೇ ಗಲಭೆ ಆರಂಭಿಸಿದ್ದಾರೆ. ದೇಶದಲ್ಲಿ ಉಪದೇಶ ಮಾಡುವ ಬಿಜೆಪಿ ನಾಯಕರು ಮುಂಬೈನಲ್ಲಿ ಸರ್ಕಾರ ರಚನೆ ಮಾಡಬೇಕೆಂದು ತೀರ್ಮಾನಿಸಿದ್ದಾರೆ ಎಂದರು.
ಪ್ರಾದೇಶಿಕ ಪಕ್ಷ ಮುಕ್ತಬಿಜೆಪಿಯವರು ಕಾಂಗ್ರೆಸ್ ಮುಕ್ತ ಭಾರತ ಎನ್ನುತ್ತಿದ್ದರು. ಅದೀಗ ಬಹುತೇಕ ಈಡೇರಿದೆ. ಈಗ ಪ್ರಾದೇಶಿಕ ಪಕ್ಷ ಮುಕ್ತ ಭಾರತ ಮಾಡಲು ಹೊರಟಿದ್ದಾರೆ. ಕರ್ನಾಟಕ, ಈಗ ಮಹಾರಾಷ್ಟ್ರ, ಮುಂದೆ ರಾಜಸ್ತಾನ, ಜಾರ್ಖಂಡ್‌ನಲ್ಲೂ ಈ ಪ್ರಯತ್ನ ಮುಂದುವರಿಸುತ್ತಾರೆ ಎಂದು ಎಚ್‌ಡಿಕೆ ಆತಂಕ ವ್ಯಕ್ತಪಡಿಸಿದರು.ವಿರೋಧ ಪಕ್ಷಗಳೇ ಇರಬಾರದು ಎಂಬುದು ಬಿಜೆಪಿಯವರ ಸಿದ್ದಾಂತ. ಹೀಗಾಗಿ ಬಿಜೆಪಿ ಹೊರತಾದ ಯಾವುದೇ ಸರ್ಕಾರದ ದೇಶದಲ್ಲಿರಬಾರದು ಎಂದು ಅವರು ಪ್ರಯತ್ನ ನಡೆಸುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಅಸ್ಥಿರತೆಯಲ್ಲಿ ಕರ್ನಾಟಕ ಬಿಜೆಪಿ ಮುಖಂಡರ ಪಾತ್ರವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಿಜೆಪಿಯಲ್ಲಿದ್ದರೆ ಮಾತ್ರ ರಾಜಕೀಯವಾಗಿ ಉಳಿಗಾಲ. ಇಲ್ಲದೇ ಹೋದರೆ ರಾಜಕೀಯವಾಗಿ ಬೆಳೆಯುವುದೇ ಸಾಧ್ಯವಿಲ್ಲ ಎಂಬ ಮಸೂದೆಯನ್ನು ಬಿಜೆಪಿ ಸರ್ಕಾರ ಸಂಸತ್‌ನಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡರೆ ರಾಷ್ಟ್ರದಲ್ಲಿ ಬಿಜೆಪಿಯೊಂದೇ ಅಧಿಕಾರ ನಡೆಸಬಹುದು. ಪ್ರತಿಪಕ್ಷಗಳು ಆರಾಮಾಗಿ ಇರಬಹುದು ಎಂದು ಅವರು ಹೇಳಿದರು.
ಇನ್ಮುಂದೆ ಹೆಂಡ ಕುಡೀಬೇಡ, ದುಡ್ಡು ಕೊಡಲ್ಲ ಎಂದುದಕ್ಕೆ ನೊಂದು ಚಿಕ್ಕೋಡಿ ವ್ಯಕ್ತಿ ಆತ್ಮಹತ್ಯೆ

VIDEO: ಪತಿಯಿಂದಲೇ ಕೊಲೆಯಾದ ಖ್ಯಾತ ಬ್ಲಾಗರ್: ಕೈಕಟ್ಟಿ ನಾಲ್ಕನೇ ಮಹಡಿಯಿಂದ ತಳ್ಳಿ ಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 3 =
Remember me
