ಬೆಂಗಳೂರು:ವಿಷಯಾಂತರ ಮಾಡಿ ರಾಜಕೀಯ ಭಾಷಣ ಮಾಡಬಹುದಾದರೆ ನಾನು 10 ದಿನ ಮಾತನಾಡಬಲ್ಲೆ‌ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲೆಸೆದರೆ, ಬಜೆಟ್​ಗೆ ಸಂಬಂಧಿಸಿದ ವಿಷಯವೇ ಪ್ರಸ್ತಾಪಿಸಿರುವೆ. ರಾಜಕೀಯ ಭಾಷಣ ಮಾಡುವುದಾದರೆ ನಾನೂ ಒಂದು ವರ್ಷ ಮಾತನಾಡಬಲ್ಲೆ ಎಂದು ಮಾಜಿ ಸಿಎಂ, ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಪ್ರತಿ ಸವಾಲು ಹಾಕಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ಮುಂದುವರಿಸಿದ ಎಚ್.ಡಿ.ಕುಮಾರಸ್ವಾಮಿ, ಈಗಲ್ ಟನ್ ಜಮೀನು ವಿವಾದ ಪ್ರಸ್ತಾಪಿಸಿ, ಪರೋಕ್ಷವಾಗಿ ಕಾಂಗ್ರೆಸ್ ಆಡಳಿತಾವಧಿಯ ಲೋಪ- ದೋಷಗಳನ್ನು ಪ್ರಸ್ತಾಪಿಸಿದರು. ಪರ್ಸೆಂಟೇಜ್, ಅಕ್ರಮಗಳು ನಡೆದಿವೆ. ಸಮಗ್ರ ತನಿಖೆಗೆ ಒಳಪಡಿಸಬೇಕು ಎನ್ನುತ್ತಲೇ ಸುದೀರ್ಘವಾಗಿ ಮಾತನಾಡಿದರು.
ಬಜೆಟ್ ಗೆ ಸಂಬಂಧಪಡದ ವಿಷಯವೆಂದ ಸಿದ್ದರಾಮಯ್ಯ ನೀವು ಅಧಿಕಾರದಲ್ಲಿದ್ದಾಗ ಈ ಬಗ್ಗೆ ಕ್ರಮವಹಿಸಬಹುದಿತ್ತು. ಈಗ ನಾವಂತೂ ಅಧಿಕಾರದಲ್ಲಿಲ್ಲ. ಮುಖ್ಯಮಂತ್ರಿ ಬೊಮ್ಮಾಯಿ‌ ಅವರು ಯಾವುದೇ ರೀತಿಯ ತನಿಖೆ ನಡೆಸಲಿ. ತಪ್ಪುಗಳು ದೃಢಪಟ್ಟರೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳಲಿ ಎಂದರು.,
ಈ ಮಧ್ಯೆ ಎಚ್ ಡಿಕೆ ವಿರುದ್ಧ ಏರಿದ ಧ್ವನಿಯಲ್ಲಿ ರಾಜಕೀಯ ಭಾಷಣ ಮಾಡುತ್ತಿದ್ದಾರೆ‌ ಸಿದ್ದರಾಮಯ್ಯ ಹರಿಹಾಯ್ದರೆ, ದಾಖಲೆ ಸಹಿತ ನಿಜಾಂಶ ಮಾತನಾಡಿದರೆ‌ ಸಿಟ್ಟು ಬರುತ್ತದೆ ಎಂದು ಕುಮಾರಸ್ವಾಮಿ ತಿವಿದರು.
ಯಾರೂ ಕಾಲಿಡದ ಜಾಗಕ್ಕೆ ಭೇಟಿ ನೀಡಿ ಗೆದ್ದು ಬೀಗಿದ ಯೋಗಿ: 29 ವರ್ಷಗಳ ನಂಬಿಕೆಯೇ ಸುಳ್ಳಾಗೋಯ್ತು!

ಹಾಸ್ಯಗಾರನಿಗೆ ಒಲಿದ ಪಂಜಾಬ್​ ಗದ್ದುಗೆ: ಅಮ್ಮ ಹೇಳಿದ್ದು ನಿಜವಾಯ್ತು… ಕುಡುಕ ಎಂದವರಿಗೆ ಮುಖಭಂಗವಾಯ್ತು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + seventeen =
Remember me
