ಮಂಡ್ಯ:ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರೇ 2023ರಲ್ಲಿಯೂ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿದ್ದಾರೆ. ಇದು ನಾನು ನುಡಿಯುತ್ತಿರುವ ಭವಿಷ್ಯ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಈ ವಿಷಯವನ್ನು ಹೇಳಿದ್ದಾರೆ. 2023ಕ್ಕೆ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವುದೇ ನನ್ನ ಗುರಿಯಾಗಿದೆ. ಇದಕ್ಕಾಗಿ ರಾಜ್ಯಾಧ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ. ಸರ್ವ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಡ್ರಗ್ಸ್​ ಪ್ರಕರಣ: ಭಾರ್ತಿ, ಕರಿಷ್ಮಾಗೆ ಬೇಲ್​- ಇಬ್ಬರು ತನಿಖಾಧಿಕಾರಿಗಳು ಸಸ್ಪೆಂಡ್​!
ನಂತರ ತಮ್ಮ ತಂದೆಯವರ ಕುರಿತು ಒಂದಿಷ್ಟು ಮಾಹಿತಿಗಳನ್ನು ನೀಡಿದ ನಿಖಿಲ್​, ಕುಮಾರಸ್ವಾಮಿಯವರು ಭಾವನಾತ್ಮಕ ಮನುಷ್ಯರಾಗಿದ್ದಾರೆ. ಆದರೆ ಕೆಲವರು ಅವರ ಬಗ್ಗೆ ಕ್ಷುಲ್ಲಕವಾಗಿ ಮಾತನಾಡುತ್ತಾರೆ. ಮಂಡ್ಯ, ರಾಮನಗರ ಜಿಲ್ಲೆಗಳಿಗೆ ಮಾತ್ರವೇ ಸಿಎಂ ಆಗಿದ್ದಾರೆ ಎಂಬುದಾಗಿ ಹಿಂದೆ ಅವರನ್ನು ಅಣಕ ಮಾಡಿದವರೇ ಹೆಚ್ಚು. ಆದರೆ ಇಂಥ ನಿರಾಧಾರ ಆರೋಪಗಳಿಗೆ ಅವರು ಎಂದಿಗೂ ತಲೆ ಕೆಡಿಸಿಕೊಂಡಿಲ್ಲ. ಎಲ್ಲಾ ಜಿಲ್ಲೆಗಳಿಗೂ ಅನುದಾವನ್ನು ಪಕ್ಷ ಭೇದ ಮರೆತು ನೀಡಿದ್ದಾರೆ ಎಂದು ನಿಖಿಲ್​ ಹೇಳಿದರು.
ಜೆಡಿಎಸ್ ಪಕ್ಷವು ಮಂಡ್ಯ, ಮೈಸೂರು, ರಾಮನಗರಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಉತ್ತರ ಕರ್ನಾಟಕ ಭಾಗದಲ್ಲೂ ಪಕ್ಷ ಪ್ರಬಲವಾಗಿದೆ. ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಮಾಡುವ ಸಲುವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರವಾಸ ಕೈಗೊಳ್ಳಲಾಗುತ್ತದೆ ಎಂದರು.
ಕ್ಲಾಸ್​ರೂಂ ಒಳಗೇ ಗೆಳತಿಯ ಮದ್ವೆಯಾದ ಹೈಸ್ಕೂಲ್​​ ವಿದ್ಯಾರ್ಥಿ! ಮುಂದೇನಾಯ್ತು ನೋಡಿ…

ಮದ್ವೆ ಯಾವಾಗ ಆಗುತ್ತೆ ಗುರೂಜಿ? ಹುಡುಗನಿಗೆ ಸರ್ಕಾರಿ ಕೆಲ್ಸ ಇರತ್ತಾ? ಹುಡುಗಿ ಸ್ಮಾರ್ಟ್​ ಇರ್ತಾಳಾ?

ಶಾಲೆಯಲ್ಲಿ ‘ಭೂತ’- ಬಡಿದುಕೊಳ್ಳುತ್ತಲೇ ಇದ್ದ ಬಾಗಿಲು: ಲಾಕ್​ ತೆಗೆದಾಗ ಏನಾಯ್ತು? ನೀವೇ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine − one =
Remember me
