ಬೆಂಗಳೂರು:ಕೆಲವೊಮ್ಮೆ ಮಾತಿನ ಭರಾಟೆಯಲ್ಲಿ ರಾಜಕಾರಣಿಗಳು ಏನೋ ಹೇಳಿಬಿಟ್ಟಾಗ, ಇಲ್ಲವೇ ಸ್ವಲ್ಪ ತಪ್ಪು ಹೇಳಿಬಿಟ್ಟರೆ ಅದನ್ನೇ ಕಾಯುತ್ತಿರುವವರು ಅವರನ್ನು ಟ್ರೋಲ್​ ಮಾಡಲು ಶುರು ಮಾಡುವುದು ಹೊಸ ವಿಷಯವೇನಲ್ಲ.
ಇದೀಗ ಟ್ರೋಲ್​ ಆಗುತ್ತಿರುವ ಸರದಿ ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರದ್ದು. ಡ್ರಗ್ಸ್​ ವಿಷಯ ಭಾರಿ ಸದ್ದು ಮಾಡುತ್ತಿರುವ ಈ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು ಕ್ಯಾಸಿನೋ ಅರ್ಥಾತ್​ ಜೂಜುಕೇಂದ್ರಗಳು.
ಇದರ ಕುರಿತಂತೆಯೇ ಈಚೆಗೆ ಮಾಧ್ಯಮಗಳ ಜತೆ ಕುಮಾರಸ್ವಾಮಿ ಅವರು ಮಾತನಾಡುತ್ತಿದ್ದರು. ಆಗ ಅವರು, ‘ನಾನು 1982ರಲ್ಲೇ ಕ್ಯಾಸಿನೋ ನೋಡಿದ್ದೇನೆ. ನನ್ನ ಧರ್ಮಪತ್ನಿ ಮತ್ತು ನಾನು ಮಲೇಷಿಯಾಗೆ ಟೂರ್​ ಹೋಗಿದ್ದೆವು. ಆ ವೇಳೆ ಅಲ್ಲಿನ ಗೈಡ್​ ಕರೆದುಕೊಂಡು ಹೋಗಿದ್ದರು. ಅಲ್ಲಿ ಡ್ರಗ್ಸ್​ ಇರಲಿಲ್ಲ’ ಎಂದಿದ್ದರು.
2014ರಲ್ಲಿ ಕುಮಾರಸ್ವಾಮಿ ಅವರು ಶ್ರೀಲಂಕಾದ ಕ್ಯಾಸಿನೋಗೆ ಹೋಗಿರುವ ಬಗ್ಗೆ ಜಮೀರ್​ ಅಹಮ್ಮದ್​ ಅವರು ನೀಡಿರುವ ಹೇಳಿಕೆಗೆ ತಿರುಗೇಟು ನೀಡುತ್ತಾ ಕುಮಾರಸ್ವಾಮಿಯವರು ಮಾತನಾಡಿದ್ದರು.
ಇದನ್ನೂ ಓದಿ:1982ರಲ್ಲೇ ನನ್ನ ಧರ್ಮಪತ್ನಿ ಜತೆ ಮಲೇಶಿಯಾದಲ್ಲಿ ಕ್ಯಾಸಿನೋ ನೋಡಿದ್ದೀನಿ; ಕುಮಾರಸ್ವಾಮಿ
ಆದರೆ ಈ ಮಾತೀಗ ಭಾರಿ ಟ್ರೋಲ್​ ಆಗುತ್ತಿದೆ. ಇದಕ್ಕೆ ಕಾರಣ ಏನೆಂದರೆ, ಗೂಗಲ್​ನಲ್ಲಿ ಹುಡುಕಿದಾಗ ಕುಮಾರಸ್ವಾಮಿ ಅವರು ಮೊದಲ ಹೆಂಡತಿ ಅನಿತಾ ಕುಮಾರಸ್ವಾಮಿ ಅವರ ಜತೆ ಮದುವೆಯಾಗಿದ್ದು 1986ರಲ್ಲಿ ಎಂದು ಇದೆ. ಎರಡನೆಯ ಹೆಂಡತಿ ರಾಧಿಕಾ ಅವರ ಜತೆ ಮದುವೆಯಾಗಿದ್ದು 2006 ಎಂದು ಇದೆ.
ಹೀಗಿರುವಾಗ 1982ರಲ್ಲಿ ಧರ್ಮಪತ್ನಿ ಜತೆ ಮಲೇಷಿಯಾದ ಕ್ಯಾಸಿನೋಗೆ ಹೋಗಿದ್ದೆ ಎಂದಿದ್ದು ಹೇಗೆ ಎಂದು ಪ್ರಶ್ನಿಸಿರುವ ಕಮೆಂಟಿಗರು ಈ ಕುರಿತು ತಲೆಗೊಂದರಂತೆ ಮಾತನಾಡುತ್ತಿದ್ದಾರೆ.
ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದ್ದು, ಹಲವಾರು ಮಂದಿ ಕಮೆಂಟ್​ ಮಾಡುತ್ತಿದ್ದಾರೆ.
ನೇಪಾಳದ ಬೆನ್ನಿಗೂ ಚೂರಿ ಹಾಕಿದ ಚೀನಾ! ಗಡಿ ಗುಳುಂ ಮಾಡಿ ಕಟ್ಟಡ ನಿರ್ಮಾಣ

ಸಾಲದ ಇಎಂಐಯಿಂದ 2 ವರ್ಷ ಮುಕ್ತಿಗೆ ನೀವೂ ಅರ್ಹರಾ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​

ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ​₹10 ಕೋಟಿ! ಬ್ಯಾಲೆನ್ಸ್​ ಕೇಳಿ ಮೂರ್ಛೆ ಹೋದ ಅಮ್ಮ-ಮಗಳು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + 9 =
Remember me
