ಮಂಡ್ಯ:ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣದ ಆರ್ಭಟ ಜೋರಾಗಿದೆ. ಕೆಲವು ಊರುಗಳಂತೂ ಅಕ್ಷರಶಃ ಪ್ರವಾಹಪೀಡಿತವಾಗಿವೆ. ಬೆಂಗಳೂರು, ಮೈಸೂರು, ಮಂಡ್ಯದ ಭಾಗಗಳಲ್ಲಿಯೂ ವರುಣ ರೌದ್ರಾವತಾರ ತೋರಿದ್ದಾನೆ.
ಮಂಡ್ಯದ ಹೊಸಬೂದನೂರು ಬಳಿ ಕೆರೆ ಕೋಡಿ ಒಡೆದಿರುವ ಕಾರಣ, ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ. ರಸ್ತೆಯ ಮೇಲೆಯೇ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ನೂರಾರು ಎಕರೆ ಜಮೀನು ಜಲಾವೃತಗೊಂಡಿವೆ.
ಮಂಡ್ಯದಿಂದ 8 ಕಿ.ಮೀ ದೂರದಲ್ಲಿರುವ ಹೊಸ ಬೂದನೂರಿನ ಬಳಿ ರಾತ್ರಿ ಸುರಿದ ಭಾರಿ ಮಳೆಗೆ ದೊಡ್ಡ ಕೆರೆ ಕೋಡಿ ಒಡೆದುಹೋಗೊದ್ದರಿಂದ ಅವಾಂತರ ಸೃಷ್ಟಿಯಾಗಿದೆ. ಮೈಸೂರು- ಬೆಂಗಳೂರು ಸಂಚಾರಕ್ಕೆ ಕನಕಪುರ ಹಾಗೂ ನಾಗಮಂಗಲ ರಸ್ತೆಯಲ್ಲಿಯೇ ಸಂಚಾರ ಮಾಡಬೇಕಿದೆ.
ಪರ್ಯಾಯ ಮಾರ್ಗ:* ಮೈಸೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಮೈಸೂರು ಸಂಚಾರಕ್ಕೆ ಎರಡು ಬದಲಿ ಮಾರ್ಗ ಅನುಸರಿಸಬೇಕು.* ಬೆಂಗಳೂರು-ಮದ್ದೂರು- ಮಳವಳ್ಳಿ ಬನ್ನೂರು ಮೂಲಕ ಮೈಸೂರಿಗೆ ತೆರಳಬೇಕು‌.* ಮತ್ತೊಂದು ಮಾರ್ಗ: ಬೆಂಗಳೂರಿನಿಂದ ನೆಲಮಂಗಲ-ಬೆಳ್ಳೂರು ಕ್ರಾಸ್- ನಾಗಮಂಗಲ-ಪಾಂಡವಪುರ ಶ್ರೀರಂಗಪಟ್ಟಣ ಮೂಲಕ ಮೈಸೂರು.* ಮದ್ದೂರಿನಿಂದ ಮಂಡ್ಯಕ್ಕೆ ಬರಬೇಕಾದ್ರೆ ಕೆ.ಎಂ.ದೊಡ್ಡಿಯಿಂದ ಮಂಡ್ಯ ನಗರಕ್ಕೆ ಬರಬಹುದು.(ದಿಗ್ವಿಜಯ ನ್ಯೂಸ್​)
ವರುಣದ ಆರ್ಭಟಕೆ ನಲುಗಿದ ಮಂಡ್ಯ ಜಿಲ್ಲೆ: ಎಲ್ಲೆಲ್ಲೂ ಪ್ರವಾಹ… ಕ್ಷಣಕ್ಷಣಕ್ಕೂ ಆತಂಕ…
‘ರಾಹುಲ್​ಜೀ… ನಿಮ್ಮ ತಂದೆಯ ಕೊಲೆಪಾತಕಿಗಳನ್ನು ಬೆಂಬಲಿಸಿದವರಿಂದಲೇ ಇವ್ರು ಪ್ರಶಸ್ತಿ ಪಡೆದ್ರಲ್ಲ, ನಿಮ್ಗೆ ಒಪ್ಪಿಗೆನಾ?’
ಕಾಬೂಲ್​ ದಾಳಿಯಲ್ಲಿ ಅಮೆರಿಕ ಉಡೀಸ್​ ಮಾಡಿದ ಈ ಭಯಾನಕ ಉಗ್ರ ಕರ್ನಾಟಕದಲ್ಲೂ ಫೇಮಸ್​! ಯಾಕೆ ಅಂತೀರಾ?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
