ಬೆಳಗಾವಿ:ಸರ್‌. ನೋಡಿ ಇವ್ರಿಂದ ನಮ್‌ ಎಜುಕೇಷನ್‌ಗೆ ಎಷ್ಟು ತೊಂದ್ರೆ ಆಗ್ತಿದೆ. ನಮ್ಮ ಅಪ್ಪ-ಅಮ್ಮ ಕೂಲಿ ಮಾಡಿ ಶಾಲೆಗೆ ಕಳಿಸ್ತಾರೆ. ಇವ್ರು ಸುಮ್ನೆ ಹಿಜಾಬ್‌ ಗಲಾಟೆಯಿಂದ ಎಲ್ಲರಿಗೂ ಡಿಸ್ಟರ್ಬ್‌ ಮಾಡ್ತಿದ್ದಾರೆ. ಹಿಜಾಬ್‌ ಹಾಕದಿದ್ರೆ ಹುಡುಗರು ತೊಂದ್ರೆ ಕೊಡ್ತಾರೆ ಅಂತಾರೆ. ಈಗ ಗಲಾಟೆ ಮಾಡ್ತಿರೋರೇ ಇನ್‌ಸ್ಟಾ, ರೀಲ್ಸ್‌ನಲ್ಲಿ ಹಿಜಾಬ್‌ ತೆಗೆದು ವಿಡಿಯೋ ಮಾಡ್ತಾರೆ. ಈಗ ನೋಡಿದ್ರೆ ಹೀಗೆ…
ಹೀಗೆಂದು ಮಾಧ್ಯಮ ಪ್ರತಿನಿಧಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದವರು ವಿಜಯ್ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು.
ಅವರೆಲ್ಲಾ ಕಾಲೇಜಿಗೆ ಬರುವಾಗ ಹಿಜಾಬ್‌ ಹಾಕಿಕೊಂಡು ಬರ್ತಾರೆ. ಅದನ್ನು ತೆಗೆಯಲು ಒಂದು ರೂಮ್ ಯಾವತ್ತೋ ಕೊಟ್ಟಿದ್ದಾರೆ. ಈಗ ಏಕಾಏಕಿ ಗಲಾಟೆ ಶುರು ಮಾಡಿಕೊಂಡಿದ್ದಾರೆ. ಇವರ ಕಲಿಕೆಯಿಂದ ನಮಗೆ ತೊಂದರೆ ಆಗುತ್ತಿದೆ. ಅವರಿಗೆ ಶಿಕ್ಷಣ ಮುಖ್ಯವಾಗಿದ್ದರೆ ಹಿಜಾಬ್ ತೆಗೆದು ಕ್ಲಾಸ್‌ಗೆ ಬರ್ತಾ ಇದ್ದರು. ಇನ್‌ಸ್ಟಾ, ರೀಲ್ಸ್ ವಿಡಿಯೋ ಮಾಡುವಾಗ ಹಿಜಾಬ್‌ ತೆಗೆದು ವಿಡಿಯೋ ಮಾಡ್ತಾರೆ. ಈಗ ಹುಡುಗರು ತೊಂದರೆ ಕೊಡುತ್ತಾರೆ ಅಂತಾರೆ. ಇವರಿಂದ ನಮ್ಮ ಎಜುಕೇಷನ್ನೇ ಹಾಳಾಗೋಗಿದೆ ಎಂದಿದ್ದಾರೆ ವಿದ್ಯಾರ್ಥಿನಿಯರು.
ಅವರಿಗೆ ಈ ಜಗಳ ಇಂಪಾರ್ಟೆಂಟ್ ಆಗಿದೆ. ಶಿಕ್ಷಣ ಬೇಡವಾಗಿದೆ. ಅದಕ್ಕಾಗಿಯೇ ಈ ರೀತಿ ಮಾಡ್ತಿದ್ದಾರೆ. ಇವರಿಂದ ನಮಗೆ ತೊಂದರೆ ಆಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
VIDEO: ‘ಐದು ವರ್ಷದಿಂದ ನೋಡ್ತಿದ್ದೇನೆ, ಯಾರೂ ಹಿಜಾಬ್‌ ಹಾಕ್ತಿರಲಿಲ್ಲ- ಮೊದ್ಲು ಭಾಷೆ ಭಾಷೆ ಅಂದ್ರು, ಈಗ ನೋಡಿದ್ರೆ ಹೀಗೆ…’

ಹಿಜಾಬ್‌ ಧರಿಸಿ ಪೋರ್ನ್‌ ವಿಡಿಯೋ ಶೂಟಿಂಗ್‌: ನೀಲಿಚಿತ್ರ ತಾರೆಗೆ ತಾಲಿಬಾನಿಗಳಿಂದ ಕೊಲೆ ಬೆದರಿಕೆ

‘ಓದಿಗಿಂತ ಮೊದ್ಲು ಹಿಜಾಬ್‌ ಬೇಕಿದ್ರೆ ಅಜ್ಜಂದಿರು ಭಾರತದ ಬದ್ಲು ಪಾಕಿಸ್ತಾನವನ್ನೇ ಆಯ್ಕೆ ಮಾಡಿಕೊಳ್ಬೋದಿತ್ತಲ್ಲ!’

Sign in to your account
Please enter an answer in digits:six + fifteen =
Remember me
