ಮಂಗಳೂರು:ತಣ್ಣಗಾಗಿದ್ದ ಹಿಜಾಬ್​ ಗಲಾಟೆಯನ್ನು ಕೆಲವು ಶಾಲಾ-ಕಾಲೇಜುಗಳಲ್ಲಿ ಮತ್ತೆ ಶುರು ಮಾಡಲಾಗಿದೆ. ಹೈಕೋರ್ಟ್​, ಸರ್ಕಾರ, ಕಾಲೇಜುಗಳ ಆದೇಶಗಳಿಗೂ ಕ್ಯಾರೇ ಅನ್ನದೇ ಯಾವುದೇ ಒಂದು ಉದ್ದೇಶ ಇಟ್ಟುಕೊಂಡು ಬಂದವರಂತೆ ವಿದ್ಯಾರ್ಥಿನಿಯರು ಹಿಜಾಬ್​ ಧರಿಸಿ ಬಂದು ಗಲಾಟೆ ಸೃಷ್ಟಿ ಮಾಡುತ್ತಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಕಾಲೇಜಿನ ಆಡಳಿತ ಮಂಡಳಿ, ಆರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದೆ. ಹಿಜಾಬ್ ಹಾಕಿ ತರಗತಿ ಪ್ರವೇಶಿಸಿದ ಕಾರಣಕ್ಕೆ ಈ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಲಾಗಿದೆ.
ಮುಂದಿನ ಆದೇಶದವರೆಗೆ ಅಮಾನತುಗೊಳಿಸಿ ಕಾಲೇಜಿನ ಪ್ರಾಂಶುಪಾಲರಿಂದ ಆದೇಶ ಹೊರಡಿಸಿದ್ದಾರೆ. ಹಿಜಾಬ್​ ಧರಿಸಿ ಕಾಲೇಜಿನ ಒಳಗೆ ಪ್ರವೇಶಿಸಬೇಡಿ ಎಂದು ಹಲವು ಬಾರಿ ಹೇಳಿದ ಹೊರತಾಗಿಯೂ, ಎಷ್ಟೇ ಮನವಿ ಮಾಡಿಕೊಂಡರೂ ವಿದ್ಯಾರ್ಥಿನಿಯರು ಕೇಳದ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.
ಕಾಲೇಜು ಉಪನ್ಯಾಸಕರ ಸಭೆಯ ಒಮ್ಮತದ ತೀರ್ಮಾನದಂತೆ ಅಮಾನತು ಮಾಡಲಾಗಿದೆ ಎಂದು ವರದಿಯಾಗಿದೆ.
ಪತಿಯ ವಿರುದ್ಧ ಲೇಖನ ಬರೆದು 78 ಕೋಟಿ ರೂ. ಕಳೆದುಕೊಂಡ ನಟಿ: ಕಾನೂನು ಸಮರ ಗೆದ್ದ ಖ್ಯಾತ ನಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 4 =
Remember me
