ಬೆಂಗಳೂರು:ನಿನ್ನೆ ತಾನೇ ಯುಗಾದಿ ಹಬ್ಬದ ಹರುಷ ಮುಗಿದಿದೆ. ಬಹುತೇಕ ಕಡೆಗಳಲ್ಲಿ ಯುಗಾದಿ ಹಬ್ಬಕ್ಕಿಂತಲೂ ಅದರ ಮಾರನೆಯ ದಿನ ಅಂದರೆ ಇವತ್ತು ಭಾರಿ ಗಮ್ಮತ್ತು. ಅದೇ ಮಾಂಸದೂಟವನ್ನು ಬಾಯಿಚಪ್ಪರಿಸುತ್ತಾ ತಿನ್ನುವ ಹೊಸತೊಡಕು.
ಇಂದು ಅಂಬೇಡ್ಕರ್‌ ಜಯಂತಿ. ಆದ್ದರಿಂದ ಮಾಂಸದ ಮಾರಾಟವನ್ನು ಇಂದು ನಿಷೇಧಿಸಲಾಗಿದೆ. ಆದರೇನಂತೆ? ಮಾಂಸದ ರುಚಿ ಹತ್ತಿದವರು, ಹಬ್ಬದ ನೆಪದಲ್ಲಿರುವ ಈ ದಿನವನ್ನು ಬಿಡುತ್ತಾರೆಯೆ? ಊರ ಹೊರಗಿರುವ ಮಾಂಸದಂಗಡಿಗಳನ್ನು ಹುಡುಕಿಕೊಂಡು ಹೋಗಿ ಮಾಂಸದ ಖರೀದಿಗೆ ಮುಗಿಬಿದ್ದಿರುವ ದೃಶ್ಯಗಳು ಇಂದು ಸಾಮಾನ್ಯವಾಗಿದೆ.
ಇದು ಒಂದೆಡೆಯಾದರೆ, ನಿನ್ನೆ ಸಿಹಿಯೂಟದ ಹಬ್ಬ ಎನ್ನುವುದನ್ನೂ ಮರೆತು ಸಿಹಿಯೂಟವನ್ನು ತಿಂದು ಹಬ್ಬವನ್ನು ಮುಗಿಸಿ ರಾತ್ರಿಯೇ ಮಾಂಸದಂಗಡಿ ಮುಂದೆ ಕ್ಯೂ ನಿಂತಿರುವ ದೃಶ್ಯ ಕಂಡುಬಂದಿತ್ತು. ಕೆಲವು ಕಡೆಗಳಲ್ಲಂತೂ ತಡರಾತ್ರಿಯವರೆಗೂ ಜನರು ನಿಂತಿದ್ದರು. ಕುರಿ, ಕೋಳಿಗಳ ಮಾರಾಟವೂ ಭರ್ಜರಿಯಾಗಿ ನಡೆದಿತ್ತು.
ಕರೊನಾ ಎರಡನೆಯ ಅಲೆಯು ಮೊದಲಿಗಿಂತಲೂ ತೀವ್ರ ಸ್ವರೂಪ ತಾಳುತ್ತಿದ್ದರೂ, ಅದನ್ನು ಲೆಕ್ಕಿಸದೇ ಜನರು ಮುಗಿಬಿದ್ದಿರುವ ದೃಶ್ಯ ಕೆಲವು ಕಡೆಗಳಲ್ಲಿ ಕಂಡು ಬಂದಿದೆ. ಕರೊನಾದಿಂದಾಗಿ ಮಾಂಸದಂಗಡಿಗಳ ಮುಂದೆ ಸಾಮಾಜಿಕ ಅಂತಕ ಕಾಪಾಡಿಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗಿದ್ದರೂ ಕೆಲವು ಕಡೆಗಳಲ್ಲಿ ತಂಡೋಪತಂಡವಾಗಿ ಜನರು ನಿಂತಿರುವ ದೃಶ್ಯಗಳು ಕಾಣಸಿಕ್ಕಿವೆ. ಕೆಲವು ಮಾಂಸದಂಗಡಿಗಳಲ್ಲಿ ದೇಹದ ಉಷ್ಣತೆ ಪರೀಕ್ಷಿಸಿದ ಬಳಿಕವೇ ಮಾಂಸ ಖರೀದಿಗೆ ಬಿಡುತ್ತಿರುವ ದೃಶ್ಯಗಳೂ ಕಾಣಿಸುತ್ತಿವೆ.
ಚಿಕ್ಕಂದಿನಿಂದಲೂ ಇವಳೇ ನಿನ್‌ ಹೆಂಡ್ತಿ ಎಂದರು- ಆದರೆ ಆದದ್ದೇ ಬೇರೆ: ಇಂಜಿನಿಯರಿಂಗ್‌ ವಿದ್ಯಾರ್ಥಿನಿಯ ಬರ್ಬರ ಹತ್ಯೆ!

ಗಂಡ ಒಳ್ಳೆಯವರು, ಮಕ್ಕಳು ಟಾಪರ್ಸ್​, ಅತ್ತೆ-ಮಾವ ಎಂದ್ರೆ ಪ್ರೀತಿ… ಆದ್ರೂ ನಂದೇನೋ ಸಮಸ್ಯೆ ಮೇಡಂ…

ಕಂಗ್ರಾಟ್ಸ್ ಅಂತಾರೆ ಕನ್ನ ಹಾಕ್ತಾರೆ…!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 4 =
Remember me
