ಹುಬ್ಬಳ್ಳಿ:ಅದ್ಧೂರಿಯಾಗಿ ಮದುವೆಯಾಗಲು ವಿಜಯಪುರದ ಯುವಕನೊಬ್ಬ ಹುಬ್ಬಳ್ಳಿಯ ಬ್ಯಾಂಕ್‌ ಒಂದರಲ್ಲಿ ಸಿನಿಮೀಯ ಸ್ಟೈಲ್‌ನಲ್ಲಿ ದರೋಡೆ ಮಾಡಿ ಸಿಕ್ಕಿಬಿದ್ದಿದ್ದಾನೆ.
ಮಂಕಿ ಮಂಕಿ ಕ್ಯಾಪ್ ಧರಿಸಿ, ಕೈಯಲ್ಲಿ ಚಾಕು ಹಿಡಿದು ಎಸ್‌ಬಿಐ ಬ್ಯಾಂಕಿಗೆ ನುಗ್ಗಿ, ಮಹಿಳಾ ಸಿಬ್ಬಂದಿಗೆ ಹೆದರಿಸಿ ಬ್ಯಾಂಕ್‌ನಿಂದ 6.30 ಲಕ್ಷ ರೂಪಾಯಿ ಎಗರಿಸಿದ್ದಾನೆ ವಿಜಯಪುರ ಮೂಲದ ಪ್ರವೀಣ್.
ಜ.14 ರಂದು ಹುಬ್ಬಳ್ಳಿ ಕೊಪ್ಪಿಕರ್ ರಸ್ತೆಯ ಎಸ್ ಬಿಐ ಬ್ಯಾಂಕ್‌ನಲ್ಲಿ ಈ ದರೋಡೆ ನಡೆದಿತ್ತು. ಬ್ಯಾಂಕ್‌ನ ಸಿಸಿಟಿವಿಯಲ್ಲಿ ದರೋಡೆ ದೃಶ್ಯ ಸೆರೆಯಾಗಿದೆ. ಥೇಟ್ ಸಿನಿಮಿಯ ಸ್ಟೈಲ್ ನಲ್ಲಿ ಎಂಟ್ರಿಕೊಟ್ಟಿದ್ದ ಖದೀಮ ನೇರವಾಗಿ ಕ್ಯಾಶಿಯರ್ ಚೇಂಬರ್‌ಗೆ ನುಗ್ಗಿದ್ದ. ದರೋಡೆಕೋರನನ್ನ ನೋಡಿ ಮಹಿಳಾ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ನಂತರ ಅವರಿಗೆ ಚಾಕು ತೋರಿಸಿ ಆತ ಬೆದರಿಸಿದ್ದಾನೆ.
ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಚೇಸಿಂಗ್ ಮೂಲಕ‌ ಆತನನ್ನು ಬಂಧಿಸಿ 6.39 ಲಕ್ಷ ವಶಪಡಿಸಿಕೊಂಡಿದೆ. ತಾನು ಅದ್ಧೂರಿಯಾಗಿ ಮದುವೆಯಾಗಲು ದರೋಡೆ ಮಾಡಿರುವುದಾಗಿ ಪ್ರವೀಣ್‌ ಹೇಳಿದ್ದಾನೆ.
ಸಿಎಂ ಭದ್ರತಾ ಸಿಬ್ಬಂದಿಯ ಮತ್ತಷ್ಟು ಕ್ರೈಂ ಬೆಳಕಿಗೆ- ಒಂದು ಲಕ್ಷ ರೂ. ಬೇಡಿಕೆ ಇಟ್ಟು ಬೆದರಿಸಿದ್ರು!

ರ‍್ಯಾಪಿಡೋ ಬೈಕ್ ರೈಡರ್‌ ಬುಕ್‌ ಮಾಡಿ ಥಳಿಸಿದ ಆಟೋ ಚಾಲಕರು? ತಮ್ಮ ಬಾಡಿಗೆಗೆ ಕುತ್ತು ಎಂದು ಗಲಾಟೆ

Sign in to your account
Please enter an answer in digits:five × 1 =
Remember me
