ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯದ ಜನರಲ್​ ಡಿಪಾರ್ಟ್​ಮೆಂಟ್​ ಆಫ್​ ಕಾಂಪಿಟೇಟಿವ್​ ಎಕ್ಸಾಮಿನೇಷನ್​ನಲ್ಲಿ ಜೂನಿಯರ್​ ಹಿಂದಿ ಟ್ರಾನ್ಸ್​ಲೇಟರ್​ ಹುದ್ದೆಯನ್ನು ಭರ್ತಿಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಒಟ್ಟು 7 ಹುದ್ದೆಗಳಿದ್ದು, ಸಾಮಾನ್ಯ 1, ಇತರ 2, ಎಸ್ಸಿ 2 ಮತ್ತು ಎಸ್ಟಿಗೆ 2 ಹುದ್ದೆ ಮೀಸಲಿರಿಸಲಾಗಿದೆ.
ವಿದ್ಯಾರ್ಹತೆಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಹಿಂದಿ ಅಥವಾ ಇಂಗ್ಲಿಷ್​ ವಿಷಯದಲ್ಲಿ ಪದವಿ ಪಡೆದಿರಬೇಕು. ಹಿಂದಿ ಮತ್ತು ಇಂಗ್ಲಿಷ್​ ವಿಷಯದಲ್ಲಿ ಡಿಪ್ಲೊಮಾ ಕೋರ್ಸ್​ ಮುಗಿಸಿರಬೇಕು. ಟ್ರಾನ್ಸ್​ಲೇಷನ್​ ಟ್ರೇನಿಂಗ್​ ಕೋರ್ಸ್​ ಆಗಿರಬೇಕು.
ವೇತನ, ವಯೋಮಿತಿ7ನೇ ವೇತನ ಶ್ರೇಣಿ ಅನ್ವಯ 6ನೇ ಹಂತದ ಮಾಸಿಕ ವೇತನ ನಿಗದಿಪಡಿಸಲಾಗಿದೆ. 42 ವರ್ಷ ವಯೋಮಿತಿ ಇದ್ದು, ಇತರ ಅಭ್ಯರ್ಥಿಗೆ 45, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 47 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಆಯ್ಕೆ ಪ್ರಕ್ರಿಯೆಅರ್ಹ ಅಭ್ಯರ್ಥಿಗಳಿಗೆ ಸಿಂಗಲ್​ ಸ್ಟೇಜ್​ ಕಂಪ್ಯೂಟರ್​ ಬೇಸ್ಡ್​ ಟೆಸ್ಟ್​, ಟ್ರಾನ್ಸ್​ಲೇಷನ್​ ಟೆಸ್ಟ್​ ಮತ್ತು ದಾಖಲೆ ಪರಿಶೀಲನೆ ಇರಲಿದೆ.
ಅರ್ಜಿ ಸಲ್ಲಿಸುವ ವಿಧಾನಆನ್​ಲೈನ್​ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ನೇರವಾಗಿ ಬಂದ ಅರ್ಜಿ ಪುರಸ್ಕರಿಸುವುದಿಲ್ಲ. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ನಿಗದಿಯಾಗಿಲ್ಲ. ಅರ್ಜಿಯಲ್ಲಿ ಮೊಬೈಲ್​ ಸಂಖ್ಯೆ ಹಾಗೂ ಇ-ಮೇಲ್​ ವಿಳಾಸವನ್ನು ಕಡ್ಡಾಯವಾಗಿ ನಮೂದಿಸತಕ್ಕದ್ದು. ಒಬ್ಬರು ಒಂದು ಅರ್ಜಿ ಸಲ್ಲಿಸಲು ಮಾತ್ರ ಅರ್ಹರು.
ಅರ್ಜಿ ಸಲ್ಲಿಸಲು ಕೊನೇ ದಿನ: 22.6.2022ಅಧಿಸೂಚನೆಗೆ:https://bit.ly/3LVDkvX
ಮಾಹಿತಿಗೆ:https://rrcmas.in/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 14 =
Remember me
